PM Surya Ghar Scheme: ಕೇಂದ್ರ ಕೊಡುವ 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ?
PM Surya Ghar Scheme: ಸಾಮಾನ್ಯ ಜನರಿಗಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಪಿಎಂ ಸೂರ್ಯಘರ್ ಯೋಜನೆ( PM Surya Ghar Scheme) ಕೂಡ ಪ್ರಮುಖವಾದುದು. ಈ ಯೋಜನೆಯ ಮೂಲಕ ಒಂದು ಮನೆಗೆ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತದೆ. ಹಾಗಿದ್ರೆ ಈ ಪ್ರಯೋಜನ ಪಡೋದು ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಏನಿದು ಸೂರ್ಯ ಘರ್ ಯೋಜನೆ?
ಭಾರತದಲ್ಲಿನ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಈ ಸರ್ಕಾರಿ ಯೋಜನೆ ಹೊಂದಿದ್ದು, ಫೆಬ್ರವರಿ 15, 2024 ರಂದು ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಚಾಲನೆ ನೀಡಿದರು.ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ (ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್) ಯೋಜನೆಯಡಿಯಲ್ಲಿ ಮನೆಗಳ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಅಗತ್ಯವಾದ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ. ಯೋಜನೆಯು ಸೌರ ಫಲಕಗಳನ್ನು ಅಳವಡಿಸಲು ಖರ್ಚಾಗುವ ವೆಚ್ಚದ 40% ವರೆಗೆ ಸಬ್ಸಿಡಿಯನ್ನು ಒಳಗೊಂಡಿರುತ್ತದೆ. ಒಟ್ಟಿನಲ್ಲಿ ಈ ಪಿಎಂ ಸೂರ್ಯ ಘರ್ ಯೋಜನೆಯು ಭಾರತದಾದ್ಯಂತ 1 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿದೆ
ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲಿಗೆ ಪಿಎಂ ಸೂರ್ಯ ಘರ್ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ: pmsuryaghar.gov.in ಅಪ್ಲೈ ಫಾರ್ ರೂಫ್ಟಾಪ್ ಸೋಲಾರ್ ಅನ್ನು ಕ್ಲಿಕ್ ಮಾಡಿ
* ಬಳಿಕ ರಾಜ್ಯದ ಹೆಸರು, ಡಿಸ್ಕಾಂ ಹೆಸರು, ನಿಮ್ಮ ಮನೆಯ ವಿದ್ಯುತ್ ಕನ್ಸೂಮರ್ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ಅನ್ನು ನಮೂದಿಸಿ ನೊಂದಾಯಿಸಿಕೊಳ್ಳಬೇಕು.
* ನೊಂದಾವಣಿ ಆದ ಬಳಿಕ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬೇಕು.
* ಈಗ ರೂಫ್ಟಾಪ್ ಸ್ಕೀಮ್ಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಖಾತೆಯ ವಿವರವನ್ನು ನೀಡಬೇಕಾಗುತ್ತದೆ.
* ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗಿ, ಅನುಮೋದನೆ ಆಗುವವರೆಗೂ ಕಾಯಬೇಕಾಗುತ್ತದೆ. ಅನುಮೋದನೆ ಸಿಕ್ಕ ಬಳಿಕ ನಿಮ್ಮ ಡಿಸ್ಕಾಮ್ಗೆ ನೊಂದಾಯಿತವಾದ ಯಾವುದಾದರೂ ಸೋಲಾರ್ ಕಂಪನಿಯವರು ಬಂದು ಮನೆಗೆ ಸೋಲಾರ್ ಅಳವಡಿಸುತ್ತಾರೆ.
* ಈ ಸೋಲಾರ್ಗೆ ನಿಮ್ಮ ಕೈಯಿಂದಲೆ ಹಣ ಕೊಡಬೇಕಾಗುತ್ತದೆ. ಸೋಲಾರ್ ಸ್ಥಾಪನೆಯಾದ ಬಳಿಕ ಅದರ ವಿವರವನ್ನು ಪಿಎಂ ಸೂರ್ಯ ಘರ್ ವೆಬ್ಸೈಟ್ಗೆ ಹೋಗಿ ಸಲ್ಲಿಸಬೇಕು, ಬಳಿಕ ನೆಟ್ ಮೀಟರ್ಗೆ ಅರ್ಜಿ ಸಲ್ಲಿಸಬೇಕು.
* ನೆಟ್ ಮೀಟರ್ ಇನ್ಸ್ಟಾಲ್ ಆಗಿ ಡಿಸ್ಕಾಮ್ನಿಂದ ಪರಿಶೀಲನೆ ಆದ ಬಳಿಕ ಕಮಿಷನಿಂಗ್ ಸರ್ಟಿಫಿಕೇಟ್ ಜನರೇಟ್ ಆಗುತ್ತದೆ.
* ಕಮಿಷನಿಂಗ್ ರಿಪೋರ್ಟ್ ಸಿಕ್ಕ ಬಳಿಕ ಬ್ಯಾಂಕ್ ಅಕೌಂಟ್ ವಿವರ ಸಲ್ಲಿಸಬೇಕು. ಕ್ಯಾನ್ಸಲ್ ಚೆಕ್ ಅನ್ನೂ ಒದಗಿಸಬೇಕು.
* ಇದಾಗಿ 30 ದಿನದೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಸಿಗುತ್ತದೆ.
ಬೇಕಾಗುವ ದಾಖಲೆ:
* ಗುರುತಿನ ಪುರಾವೆ
* ವಿಳಾಸದ ಪುರಾವೆ
* ಕರೆಂಟ್ ಬಿಲ್
* ಮನೆ ಮಾಲೀಕತ್ವದ ಪ್ರಮಾಣಪತ್ರ
ಮಾನದಂಡಗಳೇನು?
* ಭಾರತೀಯ ಪ್ರಜೆಯಾಗಿರಬೇಕು
* ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಛಾವಣಿ ಇರುವ ಮನೆಯನ್ನು ಹೊಂದಿರಬೇಕು
* ಮನೆಯು ಮಾನ್ಯವಾದ ವಿದ್ಯುತ್ ಸಂಪರ್ಕ ಹೊಂದಿರಬೇಕು
ಬೇರಾವುದೇ ಸೌರ ಯೋಜನೆಯಲ್ಲಿ ಈಗಾಗಲೇ ಇತರ ಸಬ್ಸಿಡಿ ಪಡೆದಿರಬಾರದು.
Kadaba: ದಂಪತಿಗಳ ಕಾರು ಅಡ್ಡಗಟ್ಟಿ ಸ್ಕ್ರೂಡ್ರೈವರ್‌ನಿಂದ ಹಲ್ಲೆಗೆ ಯತ್ನ; ಪ್ರಕರಣ ದಾಖಲು