Central Government: ಹೊಸದಾಗಿ ಮದುವೆ ಆಗಿರೋ ಜೋಡಿಗಳಿಗೆ ಗುಡ್ ನ್ಯೂಸ್ – ಕೇಂದ್ರದಿಂದ ನಿಮಗೆ ಸಿಗಲಿದೆ 2.50 ಲಕ್ಷ ರೂ !!
Central Government : ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರವು(Central Government) ಗುಡ್ ನ್ಯೂಸ್ ನೀಡಿದ್ದು, ಮದುವೆಯಾಗೋ ವಧು-ವರರಿಗೆ 2.50 ಲಕ್ಷ ರೂ. ಹಣ ನೀಡಲು ಮುಂದಾಗಿದೆ. ಯಾವುದಿದು ಈ ಯೋಜನೆ? ಲಾಭ ಪಡೆಯಲು ಏನು ಅರ್ಹತೆ ಏನು ?
ಏನಿದು ಹೊಸ ಯೋಜನೆ?
ಕೇಂದ್ರ ಸರ್ಕಾರವು ದಲಿತರನ್ನು ಒಳಗೊಂಡ ಅಂತರ್ಜಾತಿ ವಿವಾಹಗಳನ್ನು(Inter Cost Marriage) ಪ್ರೋತ್ಸಾಹಿಸಲು ʼಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆ 2024ʼ ಅನ್ನು ಪರಿಚಯಿಸಿದೆ. ಈ ಯೋಜನೆಯಡಿ ಯಾರೆಲ್ಲಾ ಹೊಸದಾಗಿ ಅಂತರ್ಜಾತಿ ವಿವಾಹವಾಗುತ್ತಾರೋ ಅಂತಹ ಜೋಡಿಗೆ 2.50 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ.
ಮಾನದಂಡಗಳೇನು?
* ಮದುವೆಯಾಗುವ ಜೋಡಿಯ ಪೈಕಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ದಲಿತ(Dalita)ರಾಗಿರಬೇಕು.
* ದಂಪತಿಗಳ ವಾರ್ಷಿಕ ಆದಾಯ 5 ಲಕ್ಷ ರೂ.ಕ್ಕಿಂತಲೂ ಕಡಿಮೆ ಇರಬೇಕು.
ಹಣ ಸಿಗುವ ವಿಧಾನ:
* ಅರ್ಹ ದಂಪತಿಗಳು ತಮ್ಮ ಇಬ್ಬರ ಹೆಸರಿಗೂ ಮೊದಲು ಟಿಟಿಯಾಗಿ 1.25 ಲಕ್ಷ ರೂ. ಪಡೆಯುತ್ತಾರೆ.
* ಉಳಿದ ಮೊತ್ತ 1.25 ಲಕ್ಷ ರೂ.ವನ್ನು 5 ವರ್ಷಗಳ ನಂತರ ಸಿಗುತ್ತದೆ.