Sakalehapura: ಪ್ರಯಾಣಿಕರೇ ಗಮನಿಸಿ, ಬೆಂಗಳೂರು- ಮಂಗಳೂರು ರೈಲ್ವೆ ಸಂಚಾರ ಬಂದ್ !!

Sakalehapura: ಮಲೆನಾಡು, ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದೆ. ಇದು ಸೃಷ್ಟಿಸುತ್ತಿರುವ ಅವಾಂತರಗಳು ಒಂದೆರಡಲ್ಲ. ಇದೀಗ ಹಾಸನ ಜಿಲ್ಲೆಯ ಸಕಲೇಶಪುರ(Sakaleshapura) ತಾಲ್ಲೂಕಿನ, ಕಡಗರವಳ್ಳಿ-ಯಡಕುಮರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿತವಾಗಿದೆ.

ಕಿಲೋಮೀಟರ್ ನಂಬರ್ 63 ರಲ್ಲಿ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದೆ. ಹೀಗಾಗಿ ಈ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ. ಅಂದರೆ ಬೆಂಗಳೂರು-ಹಾಸನ-ಮಂಗಳೂರು(Bengaluru-Mangaluru) ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನ ಬಂದ್ ಮಾಡಲಾಗಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು ರೈಲು ಮಾರ್ಗ ಬದಲಿಸಿದ್ದಾರೆ.