Renukaswamy Murder Case: ಡಿಸಿಎಂ ಡಿಕೆಶಿಯನ್ನು ಭೇಟಿಯಾದ ದರ್ಶನ್‌ ಪತ್ನಿ; ಯಾಕೆ? ಇಲ್ಲಿದೆ ಕಾರಣ

Renukaswamy Murder Case: ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್‌ ತೂಗುದೀಪ ಇಂದು (ಜು.24) ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದಾರೆ.

ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಡಿಸಿಎಂ ಅವರು ನಟ ದರ್ಶನ್‌ಗೆ ಅನ್ಯಾಯವಾಗಿದ್ದಲ್ಲಿ ನ್ಯಾಯಕೊಡಿಸುತ್ತೇನೆ ಎಂದು ಹೇಳಿದ್ದಾರೆ. ಈ ಕಾರಣದಿಂದ ಬುಧವಾರ ಬೆಳಗ್ಗೆ ವಿಜಯಲಕ್ಷ್ಮೀ ಹಾಗೂ ದಿನಕರ್‌ ಡಿಸಿಎಂ ಅವರನ್ನು ಭೇಟಿ ಆಗಿ ಮಾತನಾಡಿದ್ದಾರೆ.

ಅಷ್ಟಕ್ಕೂ ಭೇಟಿಯಾಗಿದ್ದೇಕೆ? ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಜಯಲಕ್ಷ್ಮೀ ಅವರು ಡಿಕೆಶಿ ಭೇಟಿ ಆಗಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಈ ಸಂಬಂಧ ಭೇಟಿ ಆಗಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ನಿರ್ದೇಶಕ ಪ್ರೇಮ್‌ ಅವರು ಡಿಕೆಶಿ ಅವರನ್ನು ಭೇಟಿ ಮಾಡಿದ್ದು, ಅನಂತರ ಹೊರಗೆ ಬಂದಿದ್ದು, ” ನಾನು ಆಗಾಗ ಡಿಕೆಶಿ ಅವರನ್ನು ಭೇಟಿ ಮಾಡುತ್ತಲೇ ಇರುತ್ತೇನೆ. ದರ್ಶನ್‌ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ದರ್ಶನ್‌ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ದರ್ಶನ್‌ ಪತ್ನಿ ಹಾಗೂ ದಿನಕರ್‌ ತೂಗುದೀಪ್‌ ಅವರು ಡಿಕೆಶಿ ಭೇಟಿಗೆ ಬಂದಿದ್ದರು. ನನ್ನ ಮಗ ದರ್ಶನ್‌ ಮಗ ಒಂದೇ ಸ್ಕೂಲ್‌ನಲ್ಲಿ ಓದುವುದು. ಈಗ ದರ್ಶನ್‌ ಪುತ್ರ ವಿನೀಶ್‌ ಬೇರೆ ಸ್ಕೂಲ್‌ಗೆ ಶಿಫ್ಟ್‌ ಆಗಿದ್ದಾರೆ. ಹೀಗಾಗಿ ವಿಜಯಲಕ್ಷ್ಮೀ ಭೇಟಿಯಾದರು ಅಷ್ಟೇ ಎಂದು ನಿರ್ದೇಶಕ ಪ್ರೇಮ್‌ ಹೇಳಿದ್ದಾರೆ. ಅವರ ಭೇಟಿಗೂ ನನ್ನ ಭೇಟಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ

ಇತ್ತ ವಿಜಯಲಕ್ಷ್ಮೀ ಭೇಟಿ ನಂತರ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ ಅವರು ವಿಜಯಲಕ್ಷ್ಮೀ ಹಾಗೂ ದರ್ಶನ್‌ ಸಹೋದರ ಭೇಟಿಯಾಗಿ ದರ್ಶನ್‌ ಪುತ್ರ ವಿನೀಶ್‌ ಅವರ ಶಾಲೆಯ ವಿಚಾರವಾಗಿ ಮಾತನಾಡಿದ್ದಾರೆ. ಪ್ರಕರಣ ಸಂಬಂಧ ಚರ್ಚೆಯಾಗಿಲ್ಲ. ಇದರಲ್ಲಿ ಮಧ್ಯ ಪ್ರವೇಶ ಮಾಡಲ್ಲ ಎಂದು ಹೇಳಿದ್ದಾರೆ.

ಮಗನನ್ನು ಮತ್ತೆ ನಮ್ಮ ಸ್ಕೂಲ್‌ಗೆ ಸೇರಿಸಿಕೊಳ್ಳಿ ಎಂದಿದ್ದಾರೆ. ಈ ಕುರಿತು ಪ್ರಾಂಶುಪಾಲರಿಗೆ ಹೇಳುತ್ತೇನೆ ಎಂದಿದ್ದೇನೆ ಅಷ್ಟೇ. ರೇಣುಕಾಸ್ವಾಮಿ ಕೊಲೆ ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತದೆ. ಇದರಲ್ಲಿ ನಾನು ಯಾವುದೇ ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದ್ದಾರೆ.

NPS Vatsalya: ಇನ್ಮುಂದೆ “ವಾತ್ಸಲ್ಯ” NPS ಯೋಜನೆಯಡಿ ಮಕ್ಕಳಿಗೂ ಸಿಗುತ್ತೆ ಪಿಂಚಣಿ!

Leave A Reply

Your email address will not be published.