Actor Darshan: ಇಂದು ದರ್ಶನ್ ಆಂಡ್ ಗ್ಯಾಂಗ್ ಜಡ್ಜ್ ಮುಂದೆ ಹಾಜರು; ರಿಟ್ ಅರ್ಜಿ ವಿಚಾರಣೆ, ಮತ್ತೆ ಜೈಲೂಟವೇ ಫಿಕ್ಸ್?

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್ ಆಂಡ್ ಗ್ಯಾಂಗ್ ನ ನ್ಯಾಯಾಂಗ ಬಂಧನ ಅವಧಿ ಇಂದು (ಜು.18) ಪೂರ್ಣಗೊಳ್ಳಲಿದೆ. ಹೀಗಾಗಿ ಇಂದು ಎಲ್ಲರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ. ಈ ವೇಳೆ ಇವರುಗಳ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನಟ ದರ್ಶನ್ ಅವರು ಪ್ರಭಾವಿ ವ್ಯಕ್ತಿ. ಒಂದು ವೇಳೆ ಅವರಿಗೆ ಜಾಮೀನು ದೊರಕಿದರೆ ಹೊರಗೆ ಬಂದು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಪೊಲೀಸರು ಕೋರ್ಟ್ ಮುಂದೆ ಹೇಳಲಿದ್ದಾರೆ. ಇದರ ಜೊತೆಗೆ ಇವರು ವಿದೇಶಕ್ಕೆ ತೆರಳುವ ಭಯ ಕೂಡಾ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಮನೆ ಊಟ ಕಲ್ಪಿಸುವಂತೆ ಕೋರಿದ ರಿಟ್ ಅರ್ಜಿ ಕೂಡಾ ಇಂದು ವಿಚಾರಣೆ ನಡೆಯಲಿದೆ. ನಟ ದರ್ಶನ್ ಅರ್ಜಿಗೆ ಜೈಲು ಅಧಿಕಾರಿಗಳು ಆಕ್ಷೇಪವನ್ನು ಸಲ್ಲಿಸಿದ್ದು, ಪ್ರಕರಣದ ತನಿಖಾಧಿಕಾರಿಗಳಿಂದಲೂ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು ಮಧ್ಯಾಹ್ನದ ಬಳಿಕ ನಟ ದರ್ಶನ್ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ.