Cricketer Murder: ಪತ್ನಿ ಮತ್ತು ಮಕ್ಕಳ ಎದುರೇ ಶ್ರೀಲಂಕಾದ ಮಾಜಿ ಕ್ರಿಕೆಟಿಗನ ಬರ್ಬರ ಹತ್ಯೆ

Cricketer Murder: ಭಾರತ ತಂಡದ ಶ್ರೀಲಂಕಾ ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಆತನ ಪತ್ನಿ ಮತ್ತು ಮಕ್ಕಳ ಎದುರೇ ಮನೆಯಲ್ಲಿಯೇ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಗೈದ ಸಂಚಲನ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, 41 ವರ್ಷದ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಶನ್ ಅವರನ್ನು ಮಂಗಳವಾರ ರಾತ್ರಿ ಗಾಲೆ ಜಿಲ್ಲೆಯ ಸಣ್ಣ ಪಟ್ಟಣವಾದ ಅಂಲಂಗೋಡಾದಲ್ಲಿರುವ ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿದವರು ಅಪರಿಚಿತ ವ್ಯಕ್ತಿ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಸ್ಥಳೀಯ ಪೊಲೀಸರ ಪ್ರಕಾರ, ನಿರೋಶನ್ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ತನ್ನ ಮನೆಯಲ್ಲಿದ್ದ ಸಂದರ್ಭದಲ್ಲಿ ಇದೇ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸಾವು ಸಂಭವಿಸಿದೆ. ಆರೋಪಿಯನ್ನು ಹಿಡಿಯಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.

ಧಮ್ಮಿಕಾ ನಿರೋಶನ್ ಬಲಗೈ ವೇಗದ ಬೌಲಿಂಗ್ ಆಲ್ ರೌಂಡರ್ ಆಟಗಾರ. ನಿರೋಶನ್ ತನ್ನ ಆಟದ ದಿನಗಳಲ್ಲಿ ಉದಯೋನ್ಮುಖ ಪ್ರತಿಭೆ ಎಂದು ಹೇಳಲ್ಪಟ್ಟಿದ್ದವರು. 2001 ಮತ್ತು 2004 ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್‌ಗಾಗಿ 12 ಪ್ರಥಮ ದರ್ಜೆ ಮತ್ತು 8 ಲಿಸ್ಟ್ ಎ ಪಂದ್ಯಗಳನ್ನು ಆಡಿದರು, 300 ಕ್ಕೂ ಹೆಚ್ಚು ರನ್‌ಗಳೊಂದಿಗೆ 19 ವಿಕೆಟ್‌ಗಳನ್ನು ಪಡೆದಿರುವ ಹೆಗ್ಗಳಿಕೆ ಇವರಿಗಿದೆ.

ಧಮ್ಮಿಕಾ ನಿರೋಷನ್ 2000 ರಲ್ಲಿ ಶ್ರೀಲಂಕಾ ಅಂಡರ್-19 ತಂಡಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಎರಡು ವರ್ಷಗಳ ಕಾಲ ಅಂಡರ್-19 ಟೆಸ್ಟ್ ಮತ್ತು ODI ಕ್ರಿಕೆಟ್ ಆಡಿದ್ದಾರೆ. ಅವರು 10 ಪಂದ್ಯಗಳಲ್ಲಿ ಶ್ರೀಲಂಕಾ ಅಂಡರ್-19 ತಂಡದ ನಾಯಕರಾಗಿದ್ದರು. ಪರ್ವೇಜ್ ಮಹರೂಫ್, ಏಂಜೆಲೊ ಮ್ಯಾಥ್ಯೂಸ್ ಮತ್ತು ಉಪುಲ್ ತರಂಗ ಅವರಂತಹ ಆಟಗಾರರು ಅವರ ನಾಯಕತ್ವದಲ್ಲಿ ಆಡಿದ್ದಾರೆ.

Leave A Reply

Your email address will not be published.