Subramanya: ಕುಮಾರಧಾರ ನದಿಯಲ್ಲಿ ಆನೆಯ ಮೃತದೇಹ ಪತ್ತೆ

Share the Article

Subramanya: ಕಡಬ ತಾಲೂಕಿನ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಸೋಮವಾರ (ಜು.15ರಂದು) ತಡ ರಾತ್ರಿ ಆನೆಯ ಮೃತದೇಹ ಪತ್ತೆಯಾಗಿದೆ.

ಸುಬ್ರಹ್ಮಣ್ಯ ಸಮೀಪ ಹರಿಯುವ ಕುಮಾರಧಾರಾ ನದಿಯಲ್ಲಿ ರಾತ್ರಿ ಆನೆಯ ಮೃತದೇಹ ಪತ್ತೆಯಾಗಿದ್ದು, ಕಾಡಿನಿಂದ ಇಳಿದ ಆನೆ ನದಿಯಲ್ಲಿನ ನೀರಿನ ಪ್ರವಾಹ ಹೆಚ್ಚಾಗಿ ನೀರಿನಲ್ಲಿ ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸೋಮವಾರ ರಾತ್ರಿ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿದ್ದರಿಂದ, ಆನೆಯ ಮೃತದೇಹವು ಕೊಚ್ಚಿ ಕೊಂಡು ಬಂದಿದೆ. ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಆನೆಯ ಮೃತದೇಹಕ್ಕೆ ಅರಣ್ಯ ಇಲಾಖೆ ಹುಡುಕಾಟ ಆರಂಭಿಸಿದ್ದಾರೆ.

Kukke Subramanya: ಕುಕ್ಕೆ ಭಕ್ತರಿಗೆ ಮಹತ್ವದ ಮಾಹಿತಿ, ದೇಗುಲದಿಂದ ಮಹತ್ವದ ಸೂಚನೆ

Leave A Reply