Kerala: ಆಸ್ಪತ್ರೆಯ ಲಿಫ್ಟ್‌ನಲ್ಲಿ ಸಿಲುಕಿ ಪರದಾಡಿದ ವ್ಯಕ್ತಿ; 2 ದಿನದ ನಂತರ ರಕ್ಷಣೆ
Kerala: ಕೇರಳದ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ರೋಗಿಯೊಬ್ಬರು ಬಂದಿದ್ದು, ಲಿಫ್ಟ್‌ನಲ್ಲಿ ಎರಡು ದಿನಗಳ ಕಾಲ ಸಿಲುಕಿದ್ದು, ಇವರನ್ನು ಬಹಳ ಪ್ರಯತ್ನದ ನಂತರ ಜುಲೈ 15 ರಂದು ರೋಗಿಯನ್ನು ಲಿಫ್ಟ್‌ನಿಂದ ಹೊರತೆಗೆಯಲಾಯಿತು. ಒಪಿ ಬ್ಲಾಕ್‌ನಲ್ಲಿರುವ ಲಿಫ್ಟ್‌ನಲ್ಲಿ ಇವರು ಸಿಕ್ಕಿಬಿದ್ದಿದ್ದು, ಈ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ರೋಗಿಯ ಕುಟುಂಬದವರು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಲಿಫ್ಟ್‌ನಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಯ ಹೆಸರು ರವೀಂದ್ರನ್ ನಾಯರ್. 59 ವರ್ಷ ವಯಸ್ಸು. ಉಳ್ಳೂರು ನಿವಾಸಿ. ಕೇರಳ ವಿಧಾನಸಭೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜುಲೈ 13 ರಂದು ರವೀಂದ್ರನ್ ಪತ್ನಿಯೊಂದಿಗೆ ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಚೆಕಪ್‌ಗೆಂದು ಬಂದಿದ್ದರು. ಅವರ ಪತ್ನಿ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯರನ್ನು ಭೇಟಿಯಾದ ನಂತರ ಪತ್ನಿ ತನ್ನ ಕೆಲಸಕ್ಕೆ ಮರಳಿದಳು. ರವೀಂದ್ರನ್ ಒಪಿ ಬ್ಲಾಕ್‌ಗೆ ಹೋಗಲು ಲಿಫ್ಟ್‌ನಲ್ಲಿ ಹೋಗಿದ್ದರು. ಆದರೆ ಅನಂತರ ಅವರು ಲಿಫ್ಟ್ ನಲ್ಲಿ ಸಿಲುಕಿದ್ದು, ಇತ್ತ ಲಿಫ್ಟ್‌ಕಡೆ ಯಾರೂ ಬರದೇ ಎರಡು ದಿನ ಅಲ್ಲೇ ಜೀವ ಹಿಡಿದುಕೊಂಡು ಕುಳಿತಿದ್ದರು.
ಇತ್ತ ಮನೆಮಂದಿ ಎಲ್ಲೆಡೆ ಹುಡುಕಾಡಿದರೂ ರವೀಂದ್ರನ್‌ನ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಜುಲೈ 14ರಂದು ರಾತ್ರಿ ವೈದ್ಯಕೀಯ ಕಾಲೇಜು ಪೊಲೀಸರಿಗೆ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಜುಲೈ 15ರ ಬೆಳಗ್ಗೆ ಲಿಫ್ಟ್ ಆಪರೇಟರ್ ನಿತ್ಯದ ಕೆಲಸಕ್ಕಾಗಿ ಲಿಫ್ಟ್ ಆರಂಭಿಸುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಘಟನೆಯ ಕುರಿತು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ತಿರುವನಂತಪುರಂ ಮೆಡಿಕಲ್ ಕಾಲೇಜಿನ ಇಬ್ಬರು ಲಿಫ್ಟ್ ಆಪರೇಟರ್‌ಗಳು ಮತ್ತು ಡ್ಯೂಟಿ ಸಾರ್ಜೆಂಟ್‌ನನ್ನು ಅಮಾನತುಗೊಳಿಸಲಾಗಿದೆ. ಸಚಿವೆ ವೀಣಾ ಜಾರ್ಜ್ ಅವರು ಈ ಬಗ್ಗೆ ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ.
“ರೋಗಿ ಮೊದಲ ಮಹಡಿಗೆ ಹೋಗಲು ಲಿಫ್ಟ್ ಹತ್ತಿದ್ದಾರೆ. ಆದರೆ ಲಿಫ್ಟ್ ಎರಡು ಮಹಡಿಗಳ ನಡುವೆ ಸಿಕ್ಕಿಹಾಕಿಕೊಂಡಿದೆ ಮತ್ತು ತೆರೆಯಲಿಲ್ಲ. ಅವರ ಫೋನ್ ಕೂಡ ಬಿದ್ದು ಒಡೆದಿದೆ, ರವೀಂದ್ರನ್ ಅವರು ಅಲಾರಾಂ ಒತ್ತಿದ್ದಾರೆ ಮತ್ತು ಲಿಫ್ಟ್ ಫೋನ್ ಬಳಸಿದ್ದಾರೆ ಎಂದು ಹೇಳಿದರು. ಲಿಫ್ಟ್ ಒಳಗೆ ಕರೆ ಮಾಡಲು ಪ್ರಯತ್ನಿಸಿದರೂ ಯಾರೂ ಉತ್ತರಿಸಲಿಲ್ಲ, ಸಹಾಯಕ್ಕಾಗಿ ಕರೆದರು, ಆದರೆ ಯಾರೂ ಬರಲಿಲ್ಲ” ಎಂದು ಪೊಲೀಸರು ಘಟನೆಯ ಕುರಿತು ಹೇಳಿದ್ದಾರೆ.
Donald Trump: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಜೀವ ಉಳಸಿದ ಪುರಿ ಜಗನ್ನಾಥ !! ಅರೆ.. ಏನಿದು ಪವಾಡ?