RSS – PM Modi: RSS ಅನ್ನು ದೂರವಿಡಲು ಮೋದಿ ಮಾಡಿದ್ದಾರಾ ಪ್ಲಾನ್ ?!

RSS-PM Modi: ಬಿಜೆಪಿಯ(BJP) ಮಾತೃ ಸಂಸ್ಥೆಯಾದ RSS ಅನ್ನು ದೂರವಿಡಲು ಪ್ರಧಾನಿ ನರೇಂದ್ರ ಮೋದಿಯವರು ಪ್ಲಾನ್ ಮಾಡಿದ್ದಾರೆ ಎಂಬ ಮಾತು ಇದೀಗ ರಾಜಕೀಯ ವಲಯದಲ್ಲಿ ಭಾರೀ ಸದ್ದುಮಾಡುತ್ತಿದೆ.

School Holiday: ದ.ಕ. ಭಾರೀ ಮಳೆಯ ಕಾರಣ ಇಂದು (ಜು.15) ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ

ಹೌದು, RSS ಮೂಲಕವೇ ಹುಟ್ಟಿದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಈಗ ವೈರಿಗಳಾಗುತ್ತಿವೆಯಾ ಎಂಬ ಅನುಮಾನ ಶುರುವಾಗಿದೆ. ಯಾಕೆಂದ್ರೆ ಇತ್ತೀಚಿಗೆ ಆರ್‌ಎಸ್‌ಎಸ್‌ ನಾಯಕರಿಗು ಮತ್ತು ಮೋದಿಗೂ(Narendra Modi) ಹೊಂದಾಣಿಕೆ ಆಗ್ತಿಲ್ಲವಂತೆ. ಮೋದಿ ಆರ್‌ಎಸ್‌ಎಸ್‌ ಮಾತು ಕೇಳ್ತಿಲ್ಲವಂತೆ, ಮೋದಿಯ ನಿರ್ಧಾರಗಳ RSS ಗೆ ಒಪ್ಪಿಗೆ ಆಗ್ತಿಲ್ವಂತೆ. ಹೀಗಾಗಿ ನಿಧಾನಕ್ಕೆ ಪಕ್ಷದಿಂದ ಆರ್‌ಎಸ್‌ಎಸ್‌ ಅನ್ನು ದೂರ ಇಡುತ್ತಿದ್ದಾರೆಂಬ ಆರೋಪಗಳು ಮೋದಿ ಮೇಲೆ ಕೇಳಿ ಬರುತ್ತಿವೆ.

ಅಲ್ಲದೆ ಮೋದಿಯ ಹಿಡಿತದಲ್ಲಿರುವ ಕೆಲವು ಬಿಜೆಪಿ ನಾಯಕರು ಈಗಾಗಲೇ ಪರೋಕ್ಷವಾಗಿ RSS ವಿರುದ್ಧ ಹೇಳಿಕೆ ನೀಡುತ್ತಿರುವುದೂ ಗಮನಕ್ಕೆ ಬಂದಿದೆಯಂತೆ. ಲೋಕಸಭಾ ಚುನಾವಣೆ(Lokasabha Election)ಪೂರ್ವದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸಂದರ್ಶನವೊಂದರಲ್ಲಿ ನಾವು RSS ಸಹಾಯದಿಂದ ಪೋಷಣೆಯಿಂದ ಬೆಳೆದಿದ್ಧೇವೆ, ಆದರೆ ಮುಂದೆ ಅದರ ಅಗತ್ಯವಿಲ್ಲ. ಸ್ವತಂತ್ರವಾಗಿ ನಾವು ಸೆಣೆಸುತ್ತೇವೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಇದು ರಾಷ್ಟ್ರದಲ್ಲಿ ಕೋಲಾಹಲವನ್ನೇ ಸೃಷ್ಟಿಸಿ ಹಾಗೇ ತಣ್ಣಗಾಗಿತ್ತು. ಇದು ಕಡೂ ಹಲವು ಅನುಮಾನಗಳಿಗೆ ಎಡೆಮಾಡಿದೆ.

ಹಾಗೆನೇ ಮೋದಿಯ ಈ ನಡವಳಿಕೆಯಿಂದ ಆರ್‌ಎಸ್‌ಎಸ್‌ ನಾಯಕರು ಮೋದಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಬಳಿಕ RSS ನಾಯಕರು ನೀಡಿದ ಹೇಳಿಕೆ, ಬರೆದ ಬರವಣಿಗೆಗಳೇ ಇದಕ್ಕೆ ನಿದರ್ಶನ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಪಡೆಯುವಲ್ಲಿ ಯಶಸ್ವಿಯಾಗದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ RSS ಸರಸಂಘಚಾಲಕ ಮೋಹನಾ ಭಾಗವತ್ ಅವರು ‘ನಿಜವಾದ ಕಾರ್ಯಕರ್ತರು ಎಂದೂ ಅಹಂಕಾರಿ ಆಗಿರುವುದಿಲ್ಲ. ಚುನಾವಣಾ ಪ್ರಚಾರದ ವೇಳೆ ಶಿಸ್ತು ಕಾಪಾಡಲಿಲ್ಲ. ಚುನಾವಣೆಯನ್ನು ನಾವು ಸ್ಪರ್ಧೆ ರೀತಿಯಲ್ಲಿ ನೋಡಬೇಕೇ ವಿನಃ ಯುದ್ಧದ ರೀತಿಯಲ್ಲಲ್ಲ. ಚುನಾವಣೆಯಲ್ಲಿ ಆಡಿದ ಮಾತುಗಳು, ಪರಸ್ಪರರ ನೀಡಿದ ಎಚ್ಚರಿಕೆಗಳು, ಇಂಥ ಮಾತುಗಳಿಂದ ಸಮಾಜವನ್ನು ವಿಭಜನೆ ಮಾಡುವುದನ್ನು ಪ್ರಚೋದಿಸುತ್ತವೆ. ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಕೇಳಿ ಬಂದ ಮಾತುಗಳನ್ನು ಒಪ್ಪಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

RSS ನಿಯತಕಾಲಿಕೆ ‘ಆರ್ಗನೈಸರ್’ ಹೇಳಿದ್ದೇನು?
ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶವು ‘ಅತಿಯಾದ ಆತ್ಮವಿಶ್ವಾಸ’ ಹೊಂದಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ವಾಸ್ತವಾಂಶದ ದರ್ಶನ ಮಾಡಿಸಿಕೊಟ್ಟಿದೆ ಎಂದು ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸ‌ರ್’ ನಿಯತಕಾ- ಲಿಕೆಯಲ್ಲಿ ಪ್ರಕಟಗೊಂಡ ಲೇಖನದಲ್ಲಿ ವಿಶ್ಲೇಷಿಸಲಾಗಿತ್ತು

‘ಪ್ರಧಾನಿ ನರೇಂದ್ರ ಮೋದಿ ಅವರು 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬೇಕೆಂದು ಹೇಳುತ್ತಿದ್ದುದು, ತಮಗೆ ನೀಡಿದ ಗುರಿ ಎಂಬುದು ಪಕ್ಷದ ಹೆಚ್ಚಿನ ಕಾರ್ಯಕರ್ತರಿಗೆ ತಿಳಿಯಲೇ ಇಲ್ಲ’ ಎಂದು ರತನ್ ಶಾರ್ದಾ ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ನಡೆಸುವ ಮೂಲಕ ಗುರಿಗಳನ್ನು ಈಡೇರಿಸ ಬಹುದೇ ಹೊರತು, ಪೋಸ್ಟರ್‌ಗಳು ಮತ್ತು ಸೆಲ್ಪಿಗಳನ್ನು ಮಾಧ್ಯಮಗಳಲ್ಲಿ ಸಾಮಾಜಿಕ ಹಂಚಿಕೊಳ್ಳುವು- ದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿವಿದಿತ್ತು.

ಹೀಗಾಗಿ ಈ ವಿಚಾರಗಳನ್ನು ಗಮನಿಸಿದಾಗ ಯಾಕೋ ಏನೋ ವೈರತ್ವದ ವಾಸನೆ ಬಡಿಯುತ್ತಿದೆ. ಮೋದಿ ಮತ್ತು RSS ದೂರಾಗೋದು ಪಕ್ಕಾನಾ? ಎಂಬ ಗುಮಾನಿ ಎದುರಾಗಿದೆ. ಆದರೂ ಮಾತೃ ಸಂಸ್ಥೆಯ ವಿರುದ್ದ ಯಾರೂ ತಿರುಗಿ ಬೀಳುವುದು ಸರಿಯಲ್ಲ, ವ್ಯಕ್ತಿ ಅಳಿಯಬಹುದು, ಸಂಸ್ಥೆಯಲ್ಲ ಎಂದು ಜನ ಮಾತನಾಡಿದ್ದಾರೆ.

Ananth Ambani: ಅನಂತ್ ಅಂಬಾನಿ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಯಶ್​ಗೆ ಸಿಕ್ಕಿತು ಎರಡು ಕೋಟಿ ಮೌಲ್ಯದ ಸ್ಪೆಷಲ್ ಗಿಫ್ಟ್!

Leave A Reply

Your email address will not be published.