Chamaraja Nagara: ಸಿಎಂ ಸಿದ್ದರಾಮಯ್ಯಗೆ ರೈತರು, ಸಾರ್ವಜನಿಕರಿಂದ ಮನವಿ ಪತ್ರ- ಕೆಲವೇ ಹೊತ್ತಲ್ಲಿ ಎಲ್ಲವೂ ಕಸದ ಬುಟ್ಟಿಯಲ್ಲಿ ಪ್ರತ್ಯಕ್ಷ !!

Chamaraja Nagara: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರು ಹಾಗೂ ಸಾರ್ವಜನಿಕರು ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಸಲ್ಲಿಸಿದ ಮನವಿ ಪತ್ರಗಳು ಕೆಲವೇ ಹೊತ್ತಲ್ಲಿ ಕಸದ ರಾಶಿಯಲ್ಲಿ ಪತ್ತೆಯಾಗಿರುವ ಘಟನೆ ‌ನಡೆದಿದೆ.

Ananth Ambani Marriage: ಅಂಬಾನಿ ಮಗನ ಮದುವೆ ಮಹೋತ್ಸವದಲ್ಲಿ ಪ್ರಧಾನಿ ಭಾಗಿ – ಮೋದಿ ಕೊಟ್ಟ ಉಡುಗೊರೆ ಏನು?

ರಾಜಕೀಯ ಪ್ರತಿನಿಧಿಗಳು ಎಂದರೆ ಅವರು ಸಾರ್ವಜನಿಕರು, ರೈತರು ಅಥವಾ ತಮ್ಮನ್ನು ಆರಿಸಿ ಕಳುಹಿಸಿದ ಮತದಾರರ ಕಷ್ಟಗಳನ್ನು ಆಲಿಸಿ, ತಕ್ಷಣ ಪರಿಹಾರ ಕಂಡುಕೊಡಬೇಕು. ತಕ್ಷಣ ಆಗದಿದ್ದರು ಮುಂದೆ ಆದರೂ ಬಗೆಹರಿಸಿಕೊಡಬೇಕು. ಇಂದು ಅವರ ಬಿಡುವಿರದ ಕಾರಣದಿಂದಾಗಿ, ಆಲಿಸಲು ಸಮಯ ಇರದಿರುವ ಹಿನ್ನೆಲೆಯಲ್ಲಿ ಇದೆಲ್ಲದಕ್ಕೂ ಜನರು ಬೆಲೆ ಕೊಟ್ಟು ಪತ್ರಗಳ ಮೂಲಕ ಮನವಿ ಸಲ್ಲಿಸುತ್ತಾರೆ. ಇದನ್ನು ಅವರು ಸ್ವೀಕರಿಸಿ ಪುರಸ್ಕರಿಸಬೇಕು. ಆದರೆ ಅದಕ್ಕೂ ಬೆಲೆ ಇಲ್ಲ ಎಂದರೆ ಜನರ ಗತಿ ಏನು? ಅದಕ್ಕೆ ಬೆಲೆ ಇಲ್ಲವೇನೋ ಎಂಬಂತೆ ಕಸದ ಬುಟ್ಟಿಗೆ ಎಸೆದರೆ ನಮ್ಮ ಇಂದಿನ ವ್ಯವಸ್ಥೆ ಯಾವ ಕಡೆ ಸಾಗುತ್ತಿದೆ ಎಂದು ಭಾವಿಸಬೇಕು? ಅದು ಕೂಡ ರಾಜ್ಯದ ಮುಖ್ಯಮಂತ್ರಿಗಳಿಂದಲೇ ಈ ರೀತಿ ಆದರೆ ಇನ್ನಾರ ಬಳಿ ಹೇಳುವುದು? ಇದು ನಿಜಕ್ಕೂ ಅಘಾತಕಾರಿ ಸಂಗತಿ.

ಹೌದು, ಜುಲೈ 10 ರಂದು ಚಾಮರಾಜನಗರದ(Chamaraja Nagara) ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಲೋಕಸಭಾ ಚುನಾವಣೆಯಲ್ಲಿ(Parliament Election) ಕಾಂಗ್ರೆಸ್ ಗೆದ್ದ ಹಿನ್ನೆಲೆ ಕೃತಜ್ಞತೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ರಾಜ್ಯದ ಮುಖ್ಯಮಂತ್ರಿಗಳೂ ಭಾಗವಹಿಸಿದ್ದರು. ಈ ವೇಳೆ ಚಾಮರಾಜನಗರ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಮನವಿ ಪತ್ರ ಸಲ್ಲಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿ ಪತ್ರಗಳನ್ನು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲ್ಲಿಸಿ ತೆರಳಿದ್ದರು. ಆದರೆ ಸ್ವೀಕರಿಸಿದ್ದ ಮನವಿ ಪತ್ರಗಳನ್ನು ವೇದಿಕೆ ಬಳಿಯೇ ಎಸೆಯಲಾಗಿದೆ.

ಹೌದು ಸ್ನೇಹಿತರೆ, ಮುಖ್ಯಮಂತ್ರಿಗಳು ಕೆಲವು ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನುಳಿದ ಪತ್ರಗಳನ್ನು ಕಾರ್ಯಕ್ರಮ ನಡೆದ ಸ್ಥಳದಲ್ಲೇ ಬಿಟ್ಟಿದ್ದಾರೆ. ಸ್ಟೇಡಿಯಂಗೆ ಶುಕ್ರವಾರ ಕ್ರಿಕೆಟ್ ಆಡಲು ತೆರಳಿದ್ದ ಯುವಕರು ವೇದಿಕೆ ಬಳಿ ಹೋಗಿದ್ದಾಗ ಮನವಿ ಪತ್ರಗಳು ಅಲ್ಲೇ ಬಿದ್ದಿರುವುದನ್ನು ಕಂಡಿದ್ದಾರೆ. ಬಳಿಕ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ, ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿರುವುದಕ್ಕೆ ಜನರು, ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಡೆಯಿಂದ ನಮ್ಮ ನಾಯಕರು ನಮ್ಮ ರಕ್ಷಣೆಗೆ, ನಮ್ಮ ಸಮಸ್ಯೆ ಪರಿಹಾರಕ್ಕೆ ಇರುವುದಲ್ಲವೇ? ಎಂಬ ಪ್ರಶ್ನೆ ಎದುರಾಗಿದೆ.

ಈ ವಿಚಾರ ಜಿಲ್ಲೆಯಾದ್ಯಂತ ಹರಡುತ್ತಿದ್ದಂತೆ ಸಾರ್ವಜನಿಕರು ವೇದಿಕೆ ಬಳಿ ತೆರಳಿ ನೋಡಿದಾಗ ಮನವಿ ಪತ್ರಗಳು ಬೀಸಾಡಿರುವುದು ಗಮನಕ್ಕೆ ಬಂದಿದೆ. ಮನವಿ ಪತ್ರಗಳನ್ನು ಬೀಸಾಡಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಕಾಟಾಚಾರಕ್ಕೆ ಮನವಿ ಪತ್ರಗಳನ್ನು ಸಿಎಂ ಸ್ವೀಕರಿಸಿ ಹೋಗಿದ್ದಾರೆ. ತಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ಉದ್ದೇಶದಿಂದ ನೀಡುವ ಮನವಿ ಪತ್ರಗಳನ್ನು ನೀಡಿದರೆ ಅದನ್ನು ಅಲ್ಲಿಯೇ ಎಸೆದು ಹೋದರೆ ಹೇಗೆ ಇವರು ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾರೆಯೇ? ಇಂತಹ ನಾಯಕರು ನಮಗೆ ಬೇಕೆ? ಎಂದು ಆಕ್ರೋಶ ಕೇಳಿಬರುತ್ತಿದೆ.

ಅಲ್ಲದೆ ಇದರಿಂದ ತೀವ್ರ ಬೇಸರಗೊಂಡು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಅವರು ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಕರೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ನಗರಕ್ಕೆ ಆಗಮಿಸಿದ್ದ ವೇಳೆ ರೈತ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ನೀಡಿದ್ದ ಮನವಿ ಪತ್ರಗಳನ್ನು ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ಶಿಷ್ಯ, ರೈತರ ಪರ ಎಂದು ಬೊಗಳೆ ಬಿಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮನವಿಗಳನ್ನು ಅಲ್ಲಿಯೇ ಬಿಸಾಡಿ ಹೋಗಿರುವುದು ಅವರ ರೈತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದ್ದಾರೆ.

By Election: ದೇಶಾದ್ಯಂತ ನಡೆದ ಉಪಚುನಾವಣೆ- ಮತ್ತೆ ಮುಗ್ಗರಿಸಿದ NDA, ಇಂಡಿಯಾ ಕೂಟಕ್ಕೆ ಭರ್ಜರಿ ಗೆಲುವು !!

Leave A Reply

Your email address will not be published.