Aishwarya Rai: ನಟನೆ ತ್ಯಾಗ ಮಾಡಿ ಕುಟುಂಬಕ್ಕೆ ಒತ್ತು ನೀಡಿದ ತ್ಯಾಗಮಯಿ ಐಶ್ವರ್ಯಾಗೆ ಬಚ್ಚನ್ ಕುಟುಂಬದಿಂದ ಸಿಕ್ಕಿದ್ದೇನು?

Aishwarya Rai: ಯಾರ ಬದುಕು ಯಾವ ತಿರುವು ಪಡೆದುಕೊಳ್ಳುತ್ತೇ ಅನ್ನೋದು ಊಹಿಸೋಕು ಸಾಧ್ಯವಿಲ್ಲ. ಅದು ಬಡವ ಆಗಲಿ, ಶ್ರೀಮಂತ ಆಗಲಿ ಬದುಕಿನ ಬುತ್ತಿ ಬಹಳ ವಿಚಿತ್ರ. ಇದೀಗ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ (Aishwarya Rai) ಜೀವನದಲ್ಲಿ ಬಿರುಕು ಮೂಡಿದೆ ಎಂಬ ಗಾಸಿಪ್ ಎದ್ದಿದೆ. ಅಂದರೆ ಅಭಿಮಾನಿಗಳ ಪ್ರಕಾರ ಕುಟುಂಬಕ್ಕಾಗಿ ತ್ಯಾಗ ಮಾಡಿರುವ ಐಶ್ವರ್ಯಾ ರೈಗೆ ಬಚ್ಚನ್ ಕುಟುಂಬ ಅವಮಾನ ಮಾಡಿದೆ ಎಂದಿದ್ದಾರೆ. ಇದಕ್ಕೆ ಉದಾಹರಣೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭ.

ಹೌದು, ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭ ಅಂದ್ರೆ ಸುಮ್ನೆ ಅಲ್ಲ. ಅಲ್ಲಿ ಇಡೀ ಬಾಲಿವುಡ್ ಚಿತ್ರರಂಗ ಭಾಗಿಯಾಗಿದೆ. ಚಿತ್ರರಂಗದ ಪ್ರಮುಖರಾಗಿರುವ ಅಮಿತಾಬ್ ಬಚ್ಚನ್ ಸಹ ಕುಟುಂಬ ಸಮೇತರಾಗಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆದರೆ ಈಗ ಬಚ್ಚನ್ ಅವರ ಕುಟುಂಬದಲ್ಲಿ ಐಶ್ವರ್ಯಾ ರೈಗೆ ಸ್ಥಾನ ಇದ್ದಂತಿಲ್ಲ. ಅಂಬಾನಿ ಮದುವೆಗೆ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಇತರೆ ಕುಟುಂಬ ಸದಸ್ಯರು ಒಟ್ಟಿಗೆ ಆಗಮಿಸಿದ್ದರು. ಆದರೆ ಐಶ್ವರ್ಯಾ ಹಾಗೂ ಅವರ ಪುತ್ರಿ ಆರಾಧ್ಯ ಮಾತ್ರ ಪ್ರತ್ಯೇಕವಾಗಿ ಮದುವೆಗೆ ಬಂದಿದ್ದರು.

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲವು ತಿಂಗಳುಗಳಿಂದಲೂ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಬಚ್ಚನ್ ಕುಟುಂಬ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಅಂಬಾನಿ ಮದುವೆಗೆ ಐಶ್ವರ್ಯಾ ಹಾಗೂ ಅಭಿಷೇಕ್ ಪ್ರತ್ಯೇಕವಾಗಿ ಆಗಮಿಸಿದ್ದು ಗಮನಿಸಿರುವ ಜನ ಅಭಿಷೇಕ್ ಹಾಗೂ ಐಶ್ವರ್ಯಾರ ವಿಚ್ಛೇದನ ಖಾತ್ರಿ ಎಂದೇ ತೀರ್ಮಾನಿಸಿದಂತಿದೆ.

ವಾಸ್ತವದಲ್ಲಿ ಅಭಿಷೇಕ್ ಬಚ್ಚನ್ ಅನ್ನು ಐಶ್ವರ್ಯಾ ರೈ ಮದುವೆ ಆದಾಗ ಐಶ್ವರ್ಯಾ ರೈ ಬಾಲಿವುಡ್​ನ ಟಾಪ್ ತಾರೆ. ಐಶ್ವರ್ಯಾ ರೈ ಅಂಥಹ ಅಂದಗಾತಿ ಮತ್ತು ಪ್ರತಿಭಾವಂತ ನಟಿ ಇಡೀ ಬಾಲಿವುಡ್​ನಲ್ಲಿ ಇರಲಿಲ್ಲ. ಐಶ್ವರ್ಯಾ ರೈ ಮನಸ್ಸು ಮಾಡಿ ಚಿತ್ರರಂಗದಲ್ಲಿ ಮುಂದುವರೆದಿದ್ದರೆ ಇವತ್ತು ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಈ ಮೂವರಿಗಿಂತಲೂ ಚಿತ್ರರಂಗದಲ್ಲಿ ಹೆಚ್ಚು ಮಿಂಚಬಹುದಿತ್ತು, ದೊಡ್ಡ ಸ್ಟಾರ್ ಆಗಿ ಬೆಳಗಬಹುದಿತ್ತು ಆದರೆ ಅವರು ವೃತ್ತಿಗಿಂತಲೂ ಕುಟುಂಬ ಮುಖ್ಯವೆಂದು ಕುಟುಂಬವನ್ನು ಆರಿಸಿಕೊಂಡರು.

ಹೌದು, ಅಭಿಷೇಕ್ ಬಚ್ಚನ್ ಅನ್ನು ಮದುವೆಯಾದ ಬಳಿಕ ತಮ್ಮ ನಟನಾ ವೃತ್ತಿಯನ್ನು ಮರೆತು ಪತಿಗಾಗಿ ತಮ್ಮ ವೃತ್ತಿಯನ್ನೇ ತ್ಯಾಗ ಮಾಡಿ ಅವರಿಗೆ ಇಂದು ಸಿಕ್ಕಿದ್ದು, ಅವಮಾನದ ಹೊರತಾಗಿ ಇನ್ನೇನನ್ನೂ ಬಚ್ಚನ್ ಕುಟುಂಬ ಐಶ್ವರ್ಯಾಗೆ ನೀಡಿಲ್ಲವೆಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

Kamal Haasan: ಇಂದು ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಕಮಲ್‌ ಹಾಸನ್‌ ನಟನೆಯ ʼಇಂಡಿಯನ್‌ʼ ಸಿನಿಮಾ

 

Leave A Reply

Your email address will not be published.