Physical Relation: ನಾವು ಸಂಭೋಗ ಮಾಡುವಾಗ ಗಂಡನಿಗೆ ಸ್ಖಲನವೇ ಆಗೋದಿಲ್ಲ, ಪ್ಲೀಸ್ ಪರಿಹಾರ ಹೇಳಿ ಎಂದ ಮಹಿಳೆ- ತಜ್ಞರು ಕೊಟ್ಟ ಸಲಹೆ ಏನು?
Physical Relation: ದಾಂಪತ್ಯ ಜೀವನದಲ್ಲಿ ಅರ್ಥ ಮಾಡಿಕೊಂಡು ಬಾಳುವೆ ನಡೆಸುವುದು, ಎಲ್ಲವನ್ನು ಸಹಿಸಿಕೊಳ್ಳುವುದು ಅಥವಾ ಯಾವುದೇ ಕಷ್ಟ-ಸುಖಗಳು ಬಂದಾಗ ಜೊತೆಗೆ ಇದ್ದು ಹೊಂದಾಣಿಕೆ ಮಾಡಿಕೊಳ್ಳುವುದು ಮಾತ್ರ ಮುಖ್ಯವಾಗುವುದಿಲ್ಲ. ಇದರೊಂದಿಗೆ ಲೈಂಗಿಕ ಜೀವನವು(Physical Contact) ಕೂಡ ಪ್ರಮುಖವಾಗುತ್ತದೆ. ಆದರೆ ಹಲವರ ಬದುಕಿನಲ್ಲಿ ಬಿರುಕು ಮೂಡಲು ಈ ಲೈಂಗಿಕ ವಿಚಾರವೇ ಕಾರಣವಾಗಿರುತ್ತದೆ. ಇಬ್ಬರಲ್ಲಿ ಒಬ್ಬರು ಬೇಗ ಸೋತು, ಸಂಗಾತಿಯನ್ನು ತೃಪ್ತಿಪಡಿಸುವಲ್ಲಿ ವಿಫಲರಾಗುತ್ತಾರೆ. ಅದರಲ್ಲೂ ಈ ಸಮಸ್ಯೆ ಗಂಡಸರಿಗೆ ಜಾಸ್ತಿ.
ಶೀಘ್ರ ಸ್ಖಲನ( Rapid ejaculation)ಎಂಬುದು ಅನೇಕ ಪುರುಷರಲ್ಲಿ ಕಂಡುಬರುವ ಸಮಸ್ಯೆ. ಕೆಟ್ಟ ಆಹಾರ ಪದ್ಧತಿ, ಹೆಚ್ಚುತ್ತಿರುವ ಒತ್ತಡ ಮತ್ತು ಅಸಮರ್ಪಕ ಜೀವನಶೈಲಿಯಂತಹ ಅನೇಕ ಅಂಶಗಳಿಂದಾಗಿ ಪುರುಷರು ಅನೇಕ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪ್ರಮುಖ ಸಮಸ್ಯೆಗಳಲ್ಲಿ ಒಂದು ಅಕಾಲಿಕ ಸ್ಖಲನ. ಇದರರ್ಥ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ವ್ಯಕ್ತಿಯು ಬೇಗನೆ ಕ್ಲೈಮಾಕ್ಸ್‌ಗೆ ತಲುಪುತ್ತಾನೆ. ಇದಕ್ಕೆ ಅನೇಕ ಪರಿಹಾರಗಳಿವೆ. ಆದರೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವಂತ ಪರಿಹಾರಗಳ ಮೊರೆ ಹೋಗದೆ, ನೈಸರ್ಗಿಕವಾಗಿ ಸಿಗುವ ಔಷಧೋಪಚಾರಗಳನ್ನು ಮಾಡಿದರೆ ಎಲ್ಲವೂ ಒಳಿತು. ಇದೊಂದು ದೊಡ್ಡ ಸಮಸ್ಯೆ ಆದರೆ ಸ್ಖಲನವೇ ಆಗದೆ ಇರುವ ಇನ್ನೊಂದು ಸಮಸ್ಯೆ ಕೂಡ ಇದೆ ಅನ್ನೋ ಸಮಸ್ಯೆ ಇರೋದು ನಿಮಗೆ ಗೊತ್ತಾ? ಹೌದು ಎಷ್ಟು ಹೊತ್ತು ಸಂಭೋಗ ನಡೆಸಿದ್ರೂ ಕೂಡ ಕೆಲವು ಪುರುಷರಿಗೆ ಸ್ಖಲನ ಆಗೋದೇ ಇಲ್ಲ. ಇದು ಯಾಕೆ ಹೀಗಾಗುತ್ತೆ? ಇದರ ಪರಿಹಾರಗಳೇನು? ವೈದ್ಯರು ಈ ಬಗ್ಗೆ ಹೇಳೋದೇನು? ನೋಡೋಣ.
ಹೌದು, ಈ ಬಗ್ಗೆ ಮಹಿಳೆಯೊಬ್ಬರು ಲೈಂಗಿಕ ತಜ್ಞರಿಗೆ ಸಲಹೆ ಕೇಳಿದ್ದು ಪರಿಹಾರ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ‘ನನ್ನ ವಯಸ್ಸು ಇಪ್ಪತ್ತೈದು. ಗಂಡನ ವಯಸ್ಸು ಮೂವತ್ತು. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆರಂಭದ ಒಂದೆರಡು ವರ್ಷ ನಮ್ಮ ಸೆಕ್ಸ್ ಲೈಫ್ ಚೆನ್ನಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಗಂಡನಿಗೆ ಒಂದು ಸಮಸ್ಯೆ ಶುರುವಾಗಿದೆ. ನಾವಿಬ್ಬರೂ ಸಂಭೋಗ ಶುರುಮಾಡಿ ಎಷ್ಟು ಹೊತ್ತು ಭೋಗಿಸಿದರೂ ಸ್ಖಲನ ಮಾಡಿಕೊಳ್ಳುವುದೇ ಇಲ್ಲ. ಅಷ್ಟು ಹೊತ್ತಿಗೆ ನಾನು ಉತ್ತುಂಗ ತಲುಪಿ, ದಣಿದಿರುತ್ತೇನೆ. ಕೊನೆಗೂ ಅವರಿಗೂ ನನಗೂ ಇಬ್ಬರಿಗೂ ಸುಸ್ತಾಗಿ ಬೇರೆ ಬೇರೆಯಾಗುತ್ತೇವೆ. ಒಂದು ಬಗೆಯ ಪ್ರತ್ಯೇಕತೆಯ ಭಾವನೆ ನಮ್ಮಲ್ಲಿ ಬಂದುಬಿಡುತ್ತದೆ. ಮೊದಮೊದಲು ಸರಿಯಾದ ಹೊತ್ತಿಗೆ ಸ್ಖಲಿಸುತ್ತಿದ್ದ ಅವರಿಗೆ ಈಗ ಹೀಗೇಕೆ ಆಗಿದೆ ಎಂಬುದು ಅರ್ಥವಾಗುತ್ತಿಲ್ಲ. ಇದರಿಂದಾಗಿ ನನ್ನೊಂದಿಗೆ ಕೂಡುವುದನ್ನೇ ಕಡಿಮೆ ಮೃಡಿದ್ದಾರೆ. ಕೆಲವೊಮ್ಮೆ ಅವರೇ ಗಂಟೆಗಟ್ಟಲೆ ಹಸ್ತಮೈಥುನ ಮಾಡಿಕೊಂಡು ಅಥವಾ ನನ್ನಿಂದ ಮಾಡಿಸಿಕೊಂಡು ತೃಪ್ತಿ ಹೊಂದುತ್ತಾರೆ. ಇದಕ್ಕೆ ದಯವಿಟ್ಟು ಪರಿಹಾರ ಸೂಚಿಸಿ ಎಂದು ಮಹಿಳೆ ಮನವಿ ಮಾಡಿದ್ದಾಳೆ.
ತಜ್ಞರು ಹೇಳೋದೇನು?
ಇದನ್ನು ಡಿಲೇಯ್ಡ್ ಎಜಾಕ್ಯುಲೇಷನ್ ಅಥವಾ ವಿಳಂಬಿತ ಸ್ಖಲನ ಎನ್ನುತ್ತಾರೆ. ಕೆಲವೊಮ್ಮೆ ಇದರೊಂದಿಗೆ ರೆಟ್ರೊಗ್ರೇಡ್ ಎಜಾಕ್ಯುಲೇಶನ್ ಅಥವಾ ಹಿಮ್ಮರಳು ಸ್ಖಲನ ಕೂಡ ಸೇರಿಕೊಳ್ಳುವುದು ಇದೆ. ವಿಳಂಬಿತ ಸ್ಖಲನ ಎಂದರೆ ತುಂಬಾ ಹೊತ್ತು ಸಂಭೋಗಿಸಿದ ನಂತರ ಸ್ಖಲನವಾಗುವುದು ಅಥವಾ ಸ್ಖಲನವೇ ಆಗದಿರುವುದು. ರೆಟ್ರೊಗ್ರೇಡ್ ಎಜಾಕ್ಯುಲೇಶನ್ ಎಂದರೆ ಒಮ್ಮೆ ಸ್ಖಲನದ ಅಂಚಿನವರೆಗೆ ಬಂದ ವೀರ್ಯ ಮರಳಿ ಹೋಗಿಬಿಡುವುದು. ಇವೆರಡೂ ಸಮಸ್ಯೆಗಳೇ.
ಹೀಗಾಗಲು ಕಾರಣವೇನು?
ಇದಕ್ಕೆ ತುಂಬಾ ಕಾರಣವಿದೆ. ದೈಹಿಕ ಕಾರಣಗಳು- ಮಧುಮೇಹ ಅಥವಾ ರಕ್ತದೊತ್ತಡದಂಥ ಕಾಯಿಲೆಗಳು, ಪ್ರಾಸ್ಟೇಟ್ ಗ್ರಂಥಿಯಲ್ಲಿ ಗಡ್ಡೆಯುಂಟಾಗಿ ಅದನ್ನು ತೆಗೆಯಬೇಕಾಗಿ ಬರುವುದರಿಂದ ಈ ಅಂಗಗಳ ಮೇಲೆ ಉಂಟಾಗುವ ಒತ್ತಡ ಇತ್ಯಾದಿ. ಇನ್ನು ಕೆಲವು ಹವ್ಯಾಸದಿಂದಾಗಿ ದೇಹದ ಮೇಲೆ ಉಂಟಾಗುವ ಪರಿಣಾಮಗಳು- ಅತಿಯಾದ ಧೂಮಪಾನ ಅಥವಾ ಮದ್ಯಪಾನದಿಂದಾಗಿ, ಸೆಕ್ಸ್‌ನಲ್ಲಿ ಸಾಕಷ್ಟು ಸರಿಯಾಗಿ ಪರ್‌ಫಾರ್ಮೆನ್ಸ್ ಮಾಡಲು ಸಾಧ್ಯವಾಗದು. ಅಲ್ಲದೆ ಮಾನಸಿಕ ಒತ್ತಡಗಳೂ ಇದಕ್ಕೆ ಕಾರಣ ಆಗಬಹುದು. ಕೌಟುಂಬಿಕ ಚಿಂತೆಗಳೂ ಇರಬಹುದು.
ಪರಿಹಾರ ಏನು?
ಹವ್ಯಾಸದಿಂದಾಗಿ ಹೀಗಾಗಿದ್ದರೆ ಹವ್ಯಾಸಗಳನ್ನು ಬಿಡದೆ ಬೇರೆ ದಾರಿ ಇಲ್ಲ. ಬಿಪಿ ಅಥವಾ ಮಧುಮೇಹ ಅಥವಾ ಪ್ರಾಸ್ಟೇಟ್ ಸಮಸ್ಯೆಯಿಂದಾಗಿ ಹೀಗಾಗುತ್ತಿದೆಯೇ ಎಂಬುದನ್ನೂ ಪರೀಕ್ಷಿಸಿ. ನಿಮ್ಮ ಪತಿ ಒಮ್ಮೆ ದೇಹದ ಸಮಗ್ರ ಪರೀಕ್ಷೆ ಮಾಡಿಸಿಕೊಳ್ಳಲಿ. ಪತಿಯ ದೇಹದ ತೂಕ ಎಷ್ಟಿದೆ? ಕೆಲವೊಮ್ಮೆ ಅಗತ್ಯಕ್ಕಿಂತ ತುಂಬಾ ಕಡಿಮೆ ಇದ್ದರೆ, ಅಗತ್ಯಕ್ಕಿಂತ ತುಂಬಾ ಹೆಚ್ಚಿದ್ದರೂ ಸಮಸ್ಯೆ ಉಂಟಾಗುತ್ತದೆ. ದೇಹದ ಸಮಸ್ಯೆ ಏನೂ ಇಲ್ಲ ಎಂದಾದರೆ ನೀವು ಕೌನ್ಸೆಲಿಂಗ್ ಮಾಡಿಸಿಕೊಳ್ಳುವುದು ಅಥವಾ ಮನೋವೈದ್ಯರ ಬಳಿಗೆ ಹೋಗುವುದು ಅನಿವಾರ್ಯ. ಈ ವಿಚಾರದಲ್ಲಿ ಸಂಕೋಚ ಬೇಡ.