Samantha Ruth Prabhu: ಸಿನಿ ರಂಗಕ್ಕೆ ಗುಡ್‌ಬೈ ಹೇಳಲಿದ್ದಾರಾ ಸ್ಯಾಮ್‌? ಒಪ್ಪಿಕೊಂಡ ಸಿನಿಮಾದಿಂದ ಸಮಂತಾ ಹೊರಕ್ಕೆ

Samantha Ruth Prabhu: ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ಅಭಿಮಾನಿಗಳಿಗೆ ಇದೊಂದು ನಿರಾಸೆ ವಿಷಯವಾಗಿದೆ. ಹೌದು, ದಕ್ಷಿಣ ಭಾರತದ ಚಲನಚಿತ್ರ ಜಗತ್ತಿನಲ್ಲಿ ಪ್ಯಾನ್ ಇಂಡಿಯಾ ಎಂದು ಜನಪ್ರಿಯರಾಗಿರುವ ಸಮಂತಾ ಸಿನಿಮಾದಿಂದ ಅಂತರ ಕಾಯ್ದು ಕೊಂಡಿದ್ದಾರೆ. ಕ್ರಮೇಣ ಸಿನಿಮಾ ರಂಗಕ್ಕೆ ಬೈ ಬೈ ಹೇಳ್ತಾರ ಅನ್ನುವ ಕುತೂಹಲವು ಅಭಿಮಾನಿಗಳಲ್ಲಿ ಕಾಡಿದೆ.

ಹೌದು, ನಟಿ ಸಮಂತಾ (Samantha Ruth Prabhu)  ಅವರು ಸಿನಿಮಾದಿಂದ ದೂರ ಆಗಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಅವರು ತಮ್ಮದೇ ಚಿಂತನೆಗಳಲ್ಲಿ ಇದ್ದಾರೆ. ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಒಂಟಿಯಾಗಿ ಕಾಲ ಕಳೆಯುತ್ತಿದ್ದಾರೆ. ಇನ್ನು ಸಿನಿಮಾ ಕೆಲಸ ಎಂದರೆ ದೂರ ಹೋಗುತ್ತಿದ್ದಾರೆ. ಈ ಎಲ್ಲಾ ಬದಲಾವಣೆ ಕಂಡಾಗ ಅವರು ಸಿನಿಮಾ ಬಗ್ಗೆ, ಚಿತ್ರರಂಗದ ಬಗ್ಗೆ ಸಂಪೂರ್ಣ ಆಸಕ್ತಿ ಕಳೆದುಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.

ಸದ್ಯ ಸಮಂತಾ ಅವರು ‘ಖುಷಿ’ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಇನ್ನು ಸಮಂತಾ ಅವರು ಗೌತಮ್ ಮೆನನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕಿತ್ತು. ಮಮ್ಮೂಟಿ ಜೊತೆ ಅವರು ತೆರೆ ಹಂಚಿಕೊಳ್ಳಬೇಕಿತ್ತು. ಆದರೆ, ಹಾಗಾಗುತ್ತಿಲ್ಲ ಎನ್ನಲಾಗಿದೆ.

ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ. ಇಡೀ ತಂಡ ಈ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿ ಆಗಿತ್ತು. ಆದರೆ, ಸಮಂತಾ ಮಾತ್ರ ಇದರಲ್ಲಿ ಭಾಗಿ ಆಗಿಲ್ಲ.

ಇಷ್ಟು ಮಾತ್ರ ಅಲ್ಲದೇ, ಅವರು ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಯಾವುದೇ ಪೋಸ್ಟ್ ಹಾಕಿಲ್ಲ. ಇದು ಸಾಕಷ್ಟು ಅನುಮಾನ ಹುಟ್ಟುಹಾಕಿದ್ದು, ಸಮಂತಾ  ಚಿತ್ರದಿಂದ ಹಿಂದೆ ಸರಿದರೇ ಎನ್ನುವ ಪ್ರಶ್ನೆ ಮೂಡಿದೆ. ಆದ್ರೆ ಸದ್ಯ, ಸಮಂತಾ ಅವರು ವೆಬ್ ಸೀರಿಸ್​ಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ತಮ್ಮದೇ ನಿರ್ಮಾಣ ಸಂಸ್ಥೆ ಸ್ಥಾಪಿಸಿ, ವೆಬ್ ಸೀರಿಸ್ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸಮಂತಾ ಮುಂದಿನ ಹೆಜ್ಜೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

Ice Cream Seller: ಐಸ್‌ಕ್ರೀಮ್‌ ಕೊಳ್ಳಲು ಬಂದ ಬಾಲಕಿಯ ಹಿಂಭಾಗ ಮುಟ್ಟಿ ಮಾರಾಟಗಾರನ ಅಸಭ್ಯ ವರ್ತನೆ; ವೀಡಿಯೋ ವೈರಲ್‌

Leave A Reply

Your email address will not be published.