Chanakya Niti Tips: ಗಂಡ ಹೆಂಡತಿ ಈ ಕೆಲಸ ಜೊತೆಯಾಗಿ ಮಾಡಲೇ ಬಾರದಂತೆ!

Chanakya Niti Tips: ಸಂಸಾರ ಅನ್ನೋದು ಶಾಂತವಾಗಿ ಇರಬೇಕು. ಅಲ್ಲಿ ಪ್ರೀತಿ, ವಾತ್ಸಲ್ಯ, ನಂಬಿಕೆ ವಿಶ್ವಾಸಕ್ಕೆ ಧಕ್ಕೆ ಉಂಟಾಗಬಾರದು. ಆದರೆ ಕೆಲವೊಮ್ಮೆ ಸಂಗಾತಿಗಳ ಕೆಲವು ವರ್ತನೆಗಳಿಂದ ಜೀವನದಲ್ಲಿ ನಿರಂತರ ಜಗಳ, ಮನಸ್ತಾಪಗಳನ್ನು ಉಂಟಾಗುತ್ತದೆ. ಮತ್ತು ಅವರು ಜೀವನದಲ್ಲಿ ಯಶಸ್ಸು ಕಾಣಲು ಕಷ್ಟವಾಗುತ್ತದೆ. ಅದರಲ್ಲೂ ಇದು ಪುರುಷರ ಏಳಿಗೆಯನ್ನು ಕುಂಠಿತಗೊಳಿಸುತ್ತದೆ. ಹಾಗಾದ್ರೆ ಮಹಿಳೆಯರು ಮತ್ತು ಪುರುಷರು ಯಾವ ಕೆಲಸಗಳನ್ನು ಮಾಡಬಾರದು ಎಂದು ಚಾಣಕ್ಯ ನೀತಿಯಲ್ಲಿ (Chanakya Niti Tips) ತಿಳಿಸಲಾಗಿದೆ.

ಅನುಮಾನ:

ಮಹಿಳೆಯರು ತಮ್ಮ ಗಂಡನಲ್ಲಿ ಪೂರ್ಣ ವಿಶ್ವಾಸ ಇಡಬೇಕು. ಒಂದು ವೇಳೆ ನಿರಂತರವಾಗಿ ಅನುಮಾನಿಸುತ್ತಲೇ ಇದ್ದರೆ ಅದು ಶ್ರೇಯಸ್ಸು ತರುವುದಿಲ್ಲ. ಬದಲಿಗೆ ಅನುಮಾನ ಇಬ್ಬರಲ್ಲಿ ಜಗಳ ತಂದು ಇಡುತ್ತದೆ. ಅನುಮಾನದಿಂದ ಒಬ್ಬರಿಗೊಬ್ಬರು ಕೋಪಗೊಳ್ಳುತ್ತಾರೆ ಮತ್ತು ಆತನ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಆತನಿಗೆ ತನ್ನ ಕೆಲಸವನ್ನು ಸರಿಯಾಗಿ ಮತ್ತು ಗಮನದಿಂದ ಮಾಡಲು ಸಾಧ್ಯವಾಗುವುದಿಲ್ಲ.

ಮುಂಜಾನೆ ತಡವಾಗಿ ಏಳುವುದು: ಮಹಿಳೆಯರೇ ಆಗಿರಲಿ ಅಥವಾ ಪುರುಷನೇ ಆಗಿರಲಿ ಇಬ್ಬರೂ ಕೂಡಾ ಬೆಳಗ್ಗೆ ಸೂರ್ಯ ಉದಯಿಸುವ ಮೊದಲು ಏಳಬೇಕು.  ತಡವಾಗಿ ಎದ್ದೇಳುವ ಅಭ್ಯಾಸವು ಜೀವನದಲ್ಲಿ ಪ್ರಗತಿಯನ್ನು ತರುವುದಿಲ್ಲ. ಇಬ್ಬರಲ್ಲಿ ಒಬ್ಬರು ಬೆಳಗ್ಗೆ ಹೊತ್ತು ತಡವಾಗಿ ಎದ್ದೇಳುವುದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ತಡವಾಗಿ ಎದ್ದೇಳುವ ಅಭ್ಯಾಸವನ್ನು ತಮ್ಮ ಗಂಡಂದಿರು ಹೊಂದಿದ್ದರೆ ಪತ್ನಿಯಾದವಳು ಇದನ್ನು ಮೊದಲು ಬಿಡಿಸಬೇಕು.

ಒಪ್ಪಿಗೆ ಇಲ್ಲದೆ ಕೆಲಸ ಮಾಡುವುದು:

ಕೆಲವು ಮಹಿಳೆಯರು ತಮಗೆ ಅನಿಸಿದ ಕೆಲಸವನ್ನು ಪತಿಯ ಒಪ್ಪಿಗೆ ಇಲ್ಲದೆ ಯಾವಾಗಲೂ ಮಾಡುತ್ತಲೇ ಇರುತ್ತಾರೆ. ಈ ಬಗ್ಗೆ ಪತಿಯೊಂದಿಗೆ ತಿಳಿಸುವುದಿಲ್ಲ. ಇನ್ನು ಪತಿ ಕೂಡಾ ತನ್ನ ಹೆಂಡತಿಯಲ್ಲಿ ಕೆಲವು ವಿಚಾರಕ್ಕೆ ಅನುಮತಿ ಕೇಳಬೇಕು. ಅನುಮತಿ ಕೇಳದೆ ಮಾಡುವುದು ತುಂಬಾ ತಪ್ಪು. ಇದು ಮನೆಯಲ್ಲಿ ಕಿರಿಕಿರಿಯನ್ನು ಹೆಚ್ಚಿಸುತ್ತದೆ ಮತ್ತು ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಸಣ್ಣಪುಟ್ಟ ವಿಚಾರಗಳ ಬಗ್ಗೆ ವ್ಯಂಗ್ಯ:

ಸಣ್ಣ ವಿಚಾರಗಳಿಗೂ ಸಹ ಪತಿಯನ್ನು ನಿಂದನೆ ಮಾಡಬಾರದು. ಪತಿ ಪತ್ನಿಯನ್ನು ನಿಂದನೆ ಮಾಡಬಾರದು. ಇದರಿಂದ ಪತಿಗೆ ಬರುತ್ತದೆ ಮತ್ತು ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಕೊನೆಗೆ ತನ್ನನ್ನು ಅರ್ಥಮಾಡಿಲ್ಲ ಎಂದು ನಕಾರಾತ್ಮಕ ಚಿಂತನೆಗೆ ಪತಿ ಪತ್ನಿ ಇಬ್ಬರೂ ಒಳಗಾಗುತ್ತಾರೆ.

Leave A Reply

Your email address will not be published.