MLA Bharat Shetty: ರಾಹುಲ್‌ ಗಾಂಧಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ಪ್ರಕರಣ; ಶಾಸಕ ಭರತ್‌ ಶೆಟ್ಟಿಗೆ ಜಾಮೀನು

MLA Bharat Shetty: ಸೋಮವಾರ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಡಾ.ಭರತ್‌ ಶೆಟ್ಟಿ ಅವರು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರ ಕುರಿತು ಎಫ್‌ಐಆರ್‌ ದಾಖಲಾಗಿತ್ತು. ಇದೀಗ ಈ ಕೇಸ್‌ಗೆ ಸಂಬಂಧಪಟ್ಟಂತೆ ಭರತ್‌ ಶೆಟ್ಟಿ ಅವರಿಗೆ ಬಿಗ್‌ ರಿಲೀಫ್‌ ದೊರಕಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಲಾಗಿದೆ.

 

ಭರತ್‌ ಶೆಟ್ಟಿ ಅವರು ರಾಹುಲ್‌ ಗಾಂಧಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದ್ದು, ಈ ಕುರಿತು ಜುಲೈ 8 ರಂದು ಕಾವೂರು ಪೊಲೀಸ್‌ ಠಾಣೆಯಲ್ಲಿ ಕೇಸನ್ನು ದಾಖಲು ಮಾಡಲಾಗಿತ್ತು. ಪಾಲಿಕೆ ಸದಸ್ಯ ಕಾಂಗ್ರೆಸ್‌ನ ಅನಿಲ್‌ ಕುಮಾರ್‌ ನೀಡಿದ್ದ ದೂರಿನನ್ವಯ ಆಧರಿಸಿ BNS 351(3), 353 ಸೆಕ್ಷನ್‌ ಅಡಿ ಎಫ್‌ಐಆರ್‌ ದಾಖಲಾಗಿತ್ತು.

Relationship Advice: ಈ ವಿಷಯಗಳನ್ನು ಪ್ರತಿಯೊಬ್ಬ ಹೆಂಡತಿಯೂ ತನ್ನ ಗಂಡನಿಗೆ ಹೇಳುವುದಿಲ್ಲ; ಕಾರಣ ತಿಳಿಯಿರಿ

Leave A Reply

Your email address will not be published.