Mangaluru: ಕರಾವಳಿಗರಿಗೆ ಭೀತಿ ಹುಟ್ಟಿಸಿದ ಖತರ್ನಾಕ್‌ ʼಚಡ್ಡಿ ಗ್ಯಾಂಗ್‌ʼ ಪೊಲೀಸರಿಂದ ಬಂಧನ?

Share the Article

Mangaluru: ಮಂಗಳೂರಿನಲ್ಲಿ ಇತ್ತೀಚೆಗೆ ದರೋಡೆ ಪ್ರಕರಣ ನಡೆದಿದ್ದು, ಎರಡು ಕಡೆಗಳಲ್ಲಿ ನಡೆದ ಕಳ್ಳತನ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ಶಂಕಿತ ಚಡ್ಡಿ ಗ್ಯಾಂಗನ್ನು ವಶಪಡೆದುಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮಂಗಳೂರಿನ ಕೋಟೆಕಣಿಯಲ್ಲಿ ಮನೆಯ ಮಂದಿಗೆ ಹಲ್ಲೆ ನಡೆಸಿದ್ದು, ನಂತರ ಚಿನ್ನಾಭರಣ ದರೋಡೆ ಮಾಡಿ ಅದೇ ಮನೆಯ ಕಾರಿನಲ್ಲಿ ಮೂಲ್ಕಿಯವರೆಗೆ ಹೋಗಿದ್ದ ದರೋಡೆಕೋರರು ನಂತರ ಅಲ್ಲಿಂದ ಮಂಗಳೂರಿಗೆ ಬಸ್‌ನಲ್ಲಿ ಬಂದಿದ್ದು, ಬೆಂಗಳೂರು ಕಡೆ ಹೋಗುತ್ತಿರುವ ಸಂದರ್ಭದಲ್ಲಿ ಸಕಲೇಶಪುರದಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಚಡ್ಡಿ ಮತ್ತು ಬನಿಯಾನ್‌ ಧರಿಸಿ ಕಳ್ಳತನ, ದರೋಡೆ ನಡೆಸುವ ಗ್ಯಾಂಗ್‌ ಇದಾಗಿದ್ದು, ರಾಜಸ್ತಾನ, ಮಧ್ಯಪ್ರದೇಶ ರಾಜ್ಯಗಳಿಗೆ ಸೇರಿದವರು ಈ ಗ್ಯಾಂಗ್‌ನಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

 

Leave A Reply

Your email address will not be published.