Darshan: ಜೈಲು ಸೇರಿದ ಬಳಿಕ ದರ್ಶನ್ ತೂಕದಲ್ಲಿ ಭಾರೀ ಇಳಿಕೆ – ಕಡಿಮೆ ಆದದ್ದೆಷ್ಟು ?
Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿ ಸುಮಾರು ಒಂದು ತಿಂಗಳು ಕಳೆಯುತ್ತಾ ಬರುತ್ತಿದೆ. ಆದರೂ ದರ್ಶನ್(Darshan) ಗೆ ಬಿಡುಗಡೆಯ ಭಾಗ್ಯವಂತೂ ಸಧ್ಯಕ್ಕಿಲ್ಲ ಅನಿಸುತ್ತೆ. ಅಂದಹಾಗೆ ಜೈಲು ಸೇರಿದ ಬಳಿಕ ದರ್ಶನ್ ತೂಕದಲ್ಲಿ ಭಾರೀ ಇಳಿಕೆ ಆಗಿದೆಯಂತೆ.
ಹೌದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ತೂಕದಲ್ಲಿ(weight) ತಿಂಗಳೊಳಗೆ 10 ಕಿಜಿಯಷ್ಟು ತೂಕ ಇಳಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ನ ಆರೋಗ್ಯದ ಬಗ್ಗೆ ಜೈಲಾಧಿಕಾರಿಗಳು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮೆಡಿಕಲ್ ಟೆಸ್ಟ್ ವೇಳೆ 107 ಕೆ.ಜಿ. ತೂಕ ಇದ್ದ ನಟ ದರ್ಶನ್ 97 ಕ.ಜಿ ಗಗೆ ಆಗಿದ್ದಾರೆ. ಅಂದರೆ ಇದೀಗ 10 ಕೆ.ಜಿ ಇಳಿಕೆಯಾಗಿದ್ದಾರೆ. ಆದ್ದರಿಂದ ಜೈಲಾಧಿಕಾರಿಗಳು ನಟ ದರ್ಶನ್ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ. ಅಲ್ಲದೆ ನಿಯಮಿತ ಆರೋಗ್ಯ ತಪಾಸಣೆಗೂ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕುಟುಂಬದವರಿಂದ ಷರತ್ತು:
ದರ್ಶನ್ ಉಳಿಸಲು 2ನೇ ಸುತ್ತಿನ ಪ್ರಯತ್ನ ಶುರುವಾಗಿದೆ. ದರ್ಶನ್ ಬಚಾವ್‌ಗೆ ಪ್ರಭಾವಿಗಳು ಹೈವೋಲ್ಟೇಜ್ ಸಭೆಯನ್ನು(Highvoltage )ನಡೆಸಿದ್ದಾರೆ. ದರ್ಶನ್ ಉಳಿಸಲು ಇದೀಗ ಅವರ ಆಪ್ತರು, ರಾಜಕಾರಣಿಗಳು ಹಾಗೂ ಕುಟುಂಬಸ್ಥರೇ ಅಖಾಡಕ್ಕಿಳಿದಿದ್ದಾರೆ. ಅಲ್ಲದೆ ತಾವು ನೀಡುವ ಆ ಒಂದು ಷರತ್ತನ್ನ ಒಪ್ಪಿದರೆ ಮಾತ್ರ ಬೆಂಬಲ ನೀಡುತೂತೇವೆ ಅಂದಿದ್ದಾರಂತೆ.
ಹೌದು, ಪವಿತ್ರಾಳನ್ನ(Pavitra Gouda) ಬಿಟ್ಟು ಬಂದ್ರೆ ಮಾತ್ರ ಬೆಂಬಲ ಎಂದಿದ್ದಾರೆ ಕುಟುಂಬಸ್ಥರು. ಹೌದು, ನೀವು ಹೇಳಿದಂತೆ ಕೇಳ್ತೀನಿ, ಹೇಗಾದರೂ ಮಾಡಿ ಬಚಾವ್ ಮಾಡಿ ಎಂದು ದರ್ಶನ್ ಹೇಳಿದ್ದಾರೆ. ಹೀಗಾಗಿ ಪವಿತ್ರಾ ಸಹವಾಸ ಬಿಟ್ಟರೆ ಕಾನೂನು ಹೋರಾಟ ಎಂಬ ಷರತ್ತು ವಿಧಿಸಿದ್ದಾರಂತೆ. ಪವಿತ್ರಾ ಗೌಡಳನ್ನ(Pavitra gowda) ಬಿಟ್ಟು ಬಂದ್ರೆ ಮಾತ್ರ ಬೆಂಬಲ ಎಂದು ಆಪ್ತರು ಹೇಳಿದ್ದಾರಂತೆ. ಪವಿತ್ರಾ ಸಹವಾಸ ಬಿಟ್ಟು ವಿಜಯಲಕ್ಷ್ಮಿ ಜತೆಯಲ್ಲಿರಬೇಕು. ಕುಟುಂಬಸ್ಥರು, ಆಪ್ತರ ಷರತ್ತಿಗೆ ದರ್ಶನ್ ಒಪ್ಪಿದ್ದಾರಂತೆ ಎಂದು ತಿಳಿದುಬಂದಿದೆ. ದರ್ಶನ್ ಒಪ್ಪಿಕೊಳ್ತಿದ್ದಂತೆ ಲಾಯರ್ ನೇಮಕಕ್ಕೆ ಪ್ಲ್ಯಾನ್ ಮಾಡಿದ್ದು, ಪವಿತ್ರಾಳನ್ನ ಬಿಟ್ಟರೆ ಮಾತ್ರ ಬೆಂಬಲ ಎಂದು ಆಪ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
Mangaluru: ಮಂಗಳೂರಿನಲ್ಲಿ ಮತ್ತೊಂದು ದರೋಡೆ; ವೃದ್ಧರನ್ನು ಬೆದರಿಸಿ, ಮನೆ ಮಾಲೀಕನ ಕಾರಿನೊಂದಿಗೆ ಗ್ಯಾಂಗ್ ಎಸ್ಕೇಪ್