Dakshina Kannada: ಚಾಂದಿನಿ ಚಿಕಿತ್ಸೆ ಪ್ರಕರಣ, ವರದಿ ಸಲ್ಲಿಕೆಗೆ ಸೂಚನೆ

Dakshina Kannada: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ನಾವೂರು ಗ್ರಾಮದ ಬಡ ಕುಟುಂಬದ ಚಾಂದಿನಿ (33) ಅಪರೂಪದ ಖಾಯಿಲೆಯಾದ ʼಹೈಪರ್ ಐಜಿಇ ಸಿಂಡೋಮ್ʼ ನಿಂದ ಬಳಲುತ್ತಿದ್ದು, ಆಸ್ಪತ್ರೆಯ 32 ಲಕ್ಷ ರೂ.ಗೂ ಅಧಿಕ ಬಿಲ್ ಪಾವತಿಸಲು ಸಾಧ್ಯವಾಗದೇ ದಯಾಮರಣದ ಅವಕಾಶ ನೀಡುವಂತೆ ಚಾಂದಿನಿ ಸರಕಾರಕ್ಕೆ ಬರೆದಿರುವ ಪತ್ರ ಕುರಿತು ವಿಕ ಜುಲೈ 8ರಂದು ‘ಆಸ್ಪತ್ರೆಯಿಂದ ಬಿಡಿಸಿ, ಇಲ್ಲ ದಯಾ ಮರಣ ನೀಡಿ’ ಎನ್ನುವ ವರದಿ ಮಾಡಿದ್ದ ಪ್ರಕಟಿಸಿತ್ತು.
ಇದಕ್ಕೆ ಸ್ಪಂದಿಸಿರುವ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷರಾಜ್ ಗುಪ್ತಾ, ಈ ಪ್ರಕರಣ ಸಂಬಂಧ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸುವಂತೆ ಇಲಾಖೆಯ ಆಯುಕ್ತ ರಣ್ ದೀಪ್ ಡಿ. ಅವರಿಗೆ ಸೋಮವಾರ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ವರದಿಯಾಗಿದೆ.