Baba Vanga Prediction: ಜಗತ್ತಿನ ನಾಶ ಯಾವಾಗ ಗೊತ್ತಾ? ಭಯಾನಕವಾದ ನಿಖರ ಭವಿಷ್ಯ ನುಡಿದ ಬಾಬಾ ವಂಗಾ !!

Baba Vanga Prediction: ಭವಿಷ್ಯಗಳ ಸರದಾರ ಬಾಬಾ ವಂಗಾ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಬಾಬಾ ವೆಂಗಾ 1996ರಲ್ಲಿ 85ನೇ ವಯಸ್ಸಿಗೆ ಮೃತಪಟ್ಟಿದ್ದರು. ಆದರೆ ಜೀವತಾವಧಿಯಲ್ಲಿ ಅವರು ನುಡಿದ ಹಲವಾರು ಭವಿಷ್ಯಗಳು( Baba Vanga Prediction:) ನಿಜವಾಗಿದ್ದು, ಆಧುನಿಕ ನಾಸ್ಟ್ರಡಾಮಸ್ ಎಂದೇ ಖ್ಯಾತರಾಗಿದ್ದರು. ಅಂತೆಯೇ ಅಂದು ಬಾಬಾ ವಂಗಾ ಜಗತ್ತು ಯಾವಾಗ ನಾಶ ಆಗುತ್ತದೆ ಎಂಬುದರನಗ್ಗೆಯೂ ಭವಿಷ್ಯ ನುಡಿದಿದ್ದರು.

 

ಹೌದು 2025ರ ನಂತರದ ಕೆವು ಅಚ್ಚರಿ ಬೆಳವಣಿಗೆಗಳ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದ ಬಾಬಾ ಅವರು 3797ರ ವೇಳೆಗೆ ಭೂಮಿಯ ವಿನಾಶ ಆಗಲಿದೆ, ಜಗತ್ತು ಅಂತ್ಯಗೊಳ್ಳಲಿದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದರೊಂದಿಗೆ ಬಾಬಾ ಅವರು ಮುಂದೆ ನಡೆಯುವ ಭಯಾನಕ ವಿದ್ಯಮಾನಗಳ ಬಗೆಗೆ ನುಡಿದ ಕೆಲವು ರೋಚಕ ಭವಿಷ್ಯಗಳು ಹೀಗಿವೆ ನೋಡಿ

ಬಾಬಾ ವಂಗರ ಸ್ಪೋಟಕ ಭವಿಷ್ಯಗಳು :
* 2025ರಲ್ಲಿ ಯುರೋಪ್‌ನಲ್ಲಿ ಪ್ರಮುಖ ಸಂಘರ್ಷದಿಂದ ಜನಸಂಖ್ಯೆಯಲ್ಲಿ ಭಾರೀ ಕುಸಿತವಾಗಲಿದೆ.
* 2028ರಲ್ಲಿ ಶುಕ್ರ ಗ್ರಹ ತಲುಪಿವ ಮನುಷ್ಯರು ಹೊಸ ಇಂಧನ ಶಕ್ತಿಯ ಆವಿಷ್ಕಾರ ಮಾಡಲಿದೆ.
* 2033ರಲ್ಲಿ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ಮಂಜುಗಡ್ಡೆಗಳ ಕರಗುವಿಕೆಯು ಸಮುದ್ರ ಮಟ್ಟದಲ್ಲಿ ಏರಿಕೆ ಆಗಿ ಹಲವು ನಗರಗಳು ಮುಳುಗಡೆಯಾಗಲಿವೆ.
* 2076ರಲ್ಲಿ ಕಮ್ಯುನಿಸಂ ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಪಡೆಯಲಿದೆ.
* 2130ರಲ್ಲಿ ಜಗತ್ತು ಅನ್ಯಗ್ರಹ ಜೀವಿಗಳ ಸಂಪರ್ಕ ಸಾಧಿಸಲಿದೆ.* 2170ರಲ್ಲಿ ಜಾಗತಿಕ ಮಟ್ಟದಲ್ಲಿ ಭೀಕರ ಬರಗಾಲ ಉಂಟಾಗಲಿದೆ.
* 3005ರಲ್ಲಿ ಮಂಗಳದ ಮೇಲೆ ಯುದ್ಧ.
* 3797ರಲ್ಲಿ ಸೌರವ್ಯೂಹದೊಳಗೆ ಮತ್ತೊಂದು ಗ್ರಹಕ್ಕೆ ತೆರಳುವ ಸಾಮರ್ಥ್ಯ ಇರಲಿದ್ದು, ಭೂಮಿಯ ನಾಶವಾಗಲಿದೆ.
* 5079ರಲ್ಲಿ ಪ್ರಪಂಚದ ಅಂತ್ಯವಾಗಲಿದೆ ಎನ್ನುವ ಭಯಾನಕ ಭವಿಷ್ಯಗಳನ್ನು ನುಡಿದಿದ್ದರು.

ಯಾರು ಈ ಬಾಬಾ ವಂಗಾ?
ಬಾಬಾ ವಂಗಾ ಅವರ ನಿಜವಾದ ಹೆಸರು ವಾಂಜೆಲಿಯಾ ಪಾಂಡೀವಾ ಗುಶ್ಟೆರೋವಾ. ಅವರು 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಅವರು 1996 ರಲ್ಲಿ ತಮ್ಮ 85 ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಬಾಬಾ ವಂಗಾ ಅವರ ಭವಿಷ್ಯವಾಣಿಗಳ ಯಾವುದೇ ಲಿಖಿತ ದಾಖಲೆಗಳಿಲ್ಲ. ಆದರೆ ಆಕೆಯ ಅನುಯಾಯಿಗಳು ಬಾಬಾ ವಂಗಾ ಹೇಳುವ ಭವಿಷ್ಯವಾಣಿಯನ್ನು ಆಗಾಗ್ಗೆ ಮಾಡುತ್ತಾರೆ. ಅದರ ಭಾಗವಾಗಿಯೇ ಈ ಇತ್ತೀಚಿನ ಭವಿಷ್ಯವಾಣಿಗಳು ಬೆಳಕಿಗೆ ಬಂದಿವೆ.

Leave A Reply

Your email address will not be published.