Agricultural Land: ಸರ್ಕಾರ ನೀಡಿದ ಒಂದು ಎಕ್ರೆ ಭೂಮಿಯನ್ನು ಮರಳಿ ಸರ್ಕಾರಕ್ಕೆ ನೀಡಲು ಮುಂದಾದ ರೈತ !! ಏನಿರಬಹುದು ಕಾರಣ?

Agricultural Land: ಇಂದಿನ ಕಾಲದಲ್ಲಿ ಎಷ್ಟೇ ಆಸ್ತಿ ಪಾಸ್ತಿಗಳಿದ್ದರು ಭೂಮಿ ವಿಷಯದಲ್ಲಿ ಯಾರು ಕೂಡಾ ಕಿಂಚಿತ್ತು ರಾಜಿ ಮಾಡಿಕೊಳ್ಳುವುದಿಲ್ಲ. ಅದರಲ್ಲೂ ಜನರು ಒಂದು ಗೇಣು ಜಾಗಕ್ಕಾಗಿ ಕತ್ತಿ ಕುಡುಗೋಲು ಹಿಡಿದು ಹೊಡೆದಾಡುವ ಕಾಲದಲ್ಲಿ ನಾವಿದ್ದೇವೆ. ಹಾಗಿರುವಾಗ ಇಂತಹ ಜನರ ಮಧ್ಯೆ ಇಲ್ಲೊಬ್ಬ ವೃದ್ಧ ತನಗೆ ಸರ್ಕಾರ ನೀಡಿದ ಒಂದು ಎಕರೆ ಕೃಷಿ ಭೂಮಿಯನ್ನು (Agricultural Land)  ಸರ್ಕಾರಕ್ಕೆ ನೀಡಲು ಮುಂದಾಗಿರುವ  ಘಟನೆಯೊಂದು ವಿಟ್ಲ ಮಂಗಳಪದವು ಎಂಬಲ್ಲಿ ನಡೆದಿದೆ. ಮಾಹಿತಿ ಪ್ರಕಾರ, ವೀರಕಂಭ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿಯ ಬಡ ಕುಟುಂಬದ ಮಾಂಕು ಕೊರಗ ಎಂಬವರು  ತನಗೆ ಸರ್ಕಾರ ನೀಡಿದ ಒಂದು ಎಕರೆ ಕೃಷಿ ಭೂಮಿಯನ್ನು ಸರ್ಕಾರಕ್ಕೆ ನೀಡಲು ಮುಂದಾಗಿರುತ್ತಾರೆ.

 

NEET: 2024ರ ನೀಟ್-ಯುಜಿ ಪರೀಕ್ಷೆ ರದ್ದು ?! ಕೇಂದ್ರ ಸರ್ಕಾರ ಹೇಳಿದ್ದೇನು?

ಹೌದು, 2010 ರಲ್ಲಿ ಅಂದಿನ ಜಿಲ್ಲಾಧಿಕಾರಿಯವರು ಇವರಿಗೆ ಸರ್ವೇ ನಂ. 283 ಮತ್ತು  282 ರಲ್ಲಿ ಒಂದು ಎಕ್ರೆ ಕೃಷಿ ಭೂಮಿಯನ್ನು ಮಂಜೂರು ಮಾಡಿತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಆಗಿದೆ ಇವರ ಪರಿಸ್ಥಿತಿ. ಯಾಕೆಂದರೆ ಸುಮಾರು ಹದಿಮೂರು ವರ್ಷ ಕಳೆದರೂ ತನ್ನ ಜಾಗಕ್ಕೆ ಹೋಗದಂತೆ ಕೃಷಿ ಚಟುವಟಿಕೆಗಳನ್ನು ನಡೆಸದಂತೆ ಆದೇಶ ನೀಡಲಾಗಿದೆ. ಆದ್ರೆ ಇದೀಗ ಸಮಸ್ಯೆಯಲ್ಲಿ ಸಿಲುಕಿರುವ ಈ ವೃದ್ಧ ಸಾಮಾಜಿಕ ಹೋರಾಟಗಾರಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ.

ಮಾಂಕು ಕೊರಗ ಅವರ ಪ್ರಕಾರ ’ನನಗೆ ಸರ್ಕಾರವು ಒಂದು ಎಕರೆ ಭೂಮಿಯನ್ನು ಕೃಷಿ ಮಾಡಲು 2010 ರಲ್ಲಿ  ಸರ್ಕಾರ ನೀಡಿದೆ. ಜಾಗದ ನಕ್ಷೆ ಮತ್ತು ನಡಾವಳಿಯನ್ನು ಗಡಿಗುರುತಿಗೆ ಅಳತೆ ಮಾಡಲು ಕೇಳಿದಾಗ ನಾನು ನೀಡಿದ್ದೇನೆ. ನಾನು ನೀಡಿದ ದಾಖಲೆಗಳನ್ನು ಮತ್ತೆ ನನಗೆ ಹಿಂತಿರುಗಿಸಲಲ್ಲ. ಈ ರೀತಿಯಾಗಿ ನನ್ನ ಭೂಮಿಯನ್ನು ಕಬಳಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇದರಿಂದ ಮನನೊಂದ ನಾನು ಮತ್ತೆ ನನ್ನ ಜಾಗವನ್ನು ಸರ್ಕಾರಕ್ಕೆ ಹಿಂತಿರುಗಿಸಲು ತೀರ್ಮಾನ ಮಾಡಿದ್ದೇನೆ. ಒಂದು ವೇಳೆ ಸರಿಯಾದ ದಾಖಲೆಯನ್ನು ಒದಗಿಸಿದರೆ ಅದರಲ್ಲಿ ಕೃಷಿ ಮಾಡಿ ಜೀವನ ನಡೆಸುತ್ತೇನೆ ಎಂದು ಮಾಂಕು ಕೊರಗ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ಈ ಬಗ್ಗೆ ಸಾಮಾಜಿಕ ಹೋರಾಟಗಾರರಾದ ದೇವಿ ಪ್ರಸಾದ್‌ ಶೆಟ್ಟಿ ಬೆಂಞಂತ್ತಿಮಾತ್  ಗುತ್ತು ಹಾಗೂ ಧನಂಜಯ ಪಾದೆ ಇವರು ಈ ಸಂಕಷ್ಟವನ್ನು ಮನಗಂಡು ’ಮಾಂಕು ಕೊರಗ ಎಂಬವರಿಗೆ ಸೇರಬೇಕಾದ ಎಲ್ಲಾ ದಾಖಲೆಗಳನ್ನು ಒಂದು  ವಾರದಲ್ಲಿ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಯವರು ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

Job Mela: ಉದ್ಯೋಗ ಪಡೆಯಲು ಸುವರ್ಣ ಅವಕಾಶ ನಿಮಗಾಗಿ! ಜುಲೈ 9ರಂದು ಇಲ್ಲಿ ಭೇಟಿ ನೀಡಿ!

Leave A Reply

Your email address will not be published.