Ajilamogaru: ಗಾಳ ಹಾಕಿ ಮೀನು ಹಿಡಿಯಲು ಹೋಗಿ ನೀರು ಪಾಲಾದ ಸುರತ್ಕಲ್‌ ಕಾನ ನಿವಾಸಿ ವ್ಯಕ್ತಿಯ ಮೃತದೇಹ ಪತ್ತೆ

Ajilamogaru: ಅಜಿಲಮೊಗರು ಬಳಿ ನೇತ್ರಾವತಿ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದ ಸುರತ್ಕಲ್‌ ಕಾನ ನಿವಾಸಿ ಮೈಕಲ್‌ (57) ಎಂಬುವವರ ಮೃತದೇಹ ಪತ್ತೆಯಾಗಿದೆ. ಇಂದು ಬೆಳಗ್ಗೆ (ಶುಕ್ರವಾರ) ನದಿಯಲ್ಲಿ ಪತ್ತೆಯಾಗಿದೆ.

 

KOCHIMUL: ರೈತರಿಗೆ ಬಿಗ್ ಶಾಕ್ – ಹಾಲು ಖರೀದಿ ದರದಲ್ಲಿ 2 ರೂ ಕಡಿತ !!

ಗುರುವಾರ ಸಂಜೆ ಮೈಕಲ್‌ ಅಜಿಲಮೊಗರು ಕೂಟೇಲು ಸೇತುವೆ ಬಳಿ ಕಿಂಡಿ ಅಣೆಕಟ್ಟಿನಲ್ಲಿ ಕುಳಿತು ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಅಚಾನಕ್‌ ಆಗಿ ಆಯತಪ್ಪಿ ಬಿದ್ದು ನೀರುಪಾಲಾಗಿದ್ದರು.

ಅನಂತರ ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ರಾತ್ರಿ ಸ್ಥಳೀಯರು, ಅಗ್ನಿಶಾಮಕದಳ ನದಿಯಲ್ಲಿ ಹುಡುಕುವ ಪ್ರಯತ್ನ ನಡೆಸಿದರೂ ಸುಳಿವು ದೊರಕಿರಲಿಲ್ಲ. ನಂತರ ಬೆಳಿಗ್ಗೆ ನೇತ್ರಾವತಿ ನದಿಯಲ್ಲಿ ನೀರು ಇಳಿಕೆಯಾಗಿದ್ದರಿಂದ ಸ್ಥಳೀಯರು ಮತ್ತೆ ಹುಡುಕಾಟ ಮುಂದುವರಿಸಿದಾ ಮೃತದೇಹ ಪತ್ತೆಯಾಗಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.