Kolara: ರಾಜ್ಯದಲ್ಲೊಂದು ಶಾಕಿಂಗ್ ಪ್ರಕರಣ – ಕಾಲೇಜಲ್ಲೇ ಮಗುವಿಗೆ ಜನ್ಮ ನೀಡಿದ 1st ಪಿಯು ವಿದ್ಯಾರ್ಥಿನಿ !!
Kolara: ಈಗಷ್ಟೇ ಶಾಲಾ ಶಿಕ್ಷಣ ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿರುವ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಅಚ್ಚರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹೌದು, SSLC ಮುಗಿಸಿ ಪ್ರಥಮ ಪಿಯುಸಿ(1st PUC) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿ ಕಾಲೇಜಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನೂ ಶಾಕಿಂಗ್ ಅಂದ್ರೆ ಇದು ಬೇರೆ ರಾಜ್ಯ-ದೇಶದಲ್ಲಿ ನಡೆದ ಘಟನೆಯಲ್ಲ. ಬದಲಿಗೆ ಕರ್ನಾಟಕದ ಕೋಲಾರದಲ್ಲಿ ನಡೆದಂತ ಘಟನೆ.
ಅಂದಹಾಗೆ ಕೋಲಾರ(Kolara) ಹೊರ ವಲಯದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನಲ್ಲಿ ಶೌಚಾಲಯಕ್ಕೆಂದು ಹೋಗಿದ್ದಾಳೆ. ಈ ವೇಳೆ ಆಕೆ ಶೌಚಾಲಯದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಕಾಲೇಜು ಉಪನ್ಯಾಸಕರು, ಸಹಪಾಠಿಗಳು ದಂಗಾಗಿದ್ದಾರೆ. ಸದ್ಯ ವಿದ್ಯಾರ್ಥಿಯನ್ನು ಸಹ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಕೋಲಾರ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಇದಕ್ಕೆ ಕಾರಣನಾದ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ.
ಅಚ್ಚರಿ ಏನಂದರೆ ಈ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿವೆ. ವಿದ್ಯಾರ್ಥಿನಿಗೆ ತಾನು ಗರ್ಭಿಣಿ ಎನ್ನುವುದು ಗೊತ್ತೇ ಇರಲಿಲ್ವಾ? ಅಥವಾ ಮನೆಯಲ್ಲಿ ಪೋಷಕರು, ಬಾಲಕಿಯ ದೇಹದಲ್ಲಿ ಬದಲಾವಣೆ ಗಮನಿಸಿಲ್ವಾ ಅಂತ? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂತ್ರಸ್ತ ವಿದ್ಯಾರ್ಥಿನಿಯ ಮಾಹಿತಿ ಮೇರೆಗೆ ಇದಕ್ಕೆ ಕಾರಣವಾದವನ್ನು ಬಂಧನಕ್ಕೆ ಬಲೆ ಬೀಸಿದ್ದಾರೆ. ಏನೇ ಆಗಲಿ ಓದುವ, ಆಡುವ ವಯಸ್ಸಿನಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿರುವುದು ದುರಂತವೇ ಸರಿ !!
Karthik Mahesh: ʼಡೆವಿಲ್ʼ ಸಿನಿಮಾದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರಾ?