Rahul Gandhi: ನನಗೆ ಶೇಕ್ ಹ್ಯಾಂಡ್ ಮಾತ್ರ ಕೊಟ್ರಿ, ಮೋದಿಗೆ ತಲೆಬಾಗಿ ನಮಸ್ಕರಿಸಿದ್ರಿ, ಯಾಕೆ ಎಂದ ರಾಹುಲ್ ಗೆ ಮುಟ್ಟಿನೋಡುವಂತ ಉತ್ತರ ಕೊಟ್ಟ ಸ್ಪೀಕರ್ !!
Rahul Gandhi: 18 ನೇ ಲೋಕಸಭೆಯ ಮೊದಲ ಅಧಿವೇಶನ ಶುರುವಾಗಿದೆ. ಸಂಸದರ ಪ್ರಮಾಣವಚನದೊಂದಿಗೆ ಆರಂಭವಾದ ಈ ಸದನವು ಸ್ಪೀಕರ್, ವಿರೋಧ ಪಕ್ಷದ ನಾಯಕರ ಆಯ್ಕೆ, ಜಂಟಿ ಅಧಿವೇಶನ, ರಾಷ್ಟ್ರಪತಿಗಳ ಭಾಷಣ ಎಲ್ಲದಕ್ಕೂ ಸಾಕ್ಷಿಯಾಯಿತು. ಇದೀಗ ಬಿಸಿ ಬಿಸಿ ವಿದ್ಯಮಾನಗಳ ಚರ್ಚೆಯ ಮೂಲಕ ಭಾರೀ ಗದ್ದಲಕ್ಕೂ ಸಾಕ್ಷಿಯಾಗುತ್ತಿದೆ.
ವಿರೋಧ ಪಕ್ಷ(Opposition Leader) ಸ್ಥಾನದಲ್ಲಿರುವ 54 ವರ್ಷಗಳ ಯುವ ನಾಯಕ ರಾಹುಲ್ ಗಾಂಧಿ(Rahul Gandhi) ಭಾರೀ ಹುಮ್ಮಸ್ಸಿನಲ್ಲಿದ್ದಾರೆ.ಅಷ್ಟೇ ಹುಮ್ಮಸ್ಸಿನಲ್ಲಿ ಸಂಸತ್ತಿನೊಳಗೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀಟ್ ಹಗರಣ, ಅಗ್ನಿಪಥ್ ಯೋಜನೆ ಬಗ್ಗೆ ಧ್ವನಿ ಎತ್ತಿದ್ದಾರೆ. ಅಲ್ಲದೆ ನಿನ್ನೆದಿನ ಹಿಂದೂಗಳ ಕುರಿತು ಕೆಲವು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆ, ಆಕ್ರೋಶಕ್ಕೂ ಗುರಿಯಾಗಿದ್ದಾರೆ. ಈ ನಡುವೆ ರಾಹುಲ್ ಅವರು ಲೋಕಸಭಾ ಸಭಾಧ್ಯಕ್ಷರಾದ ಓಂ ಬಿರ್ಲಾ(Speakr Om Birla)ಅವರಿಗೆ ವಿಚಿತ್ರವಾದ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಆ ಪ್ರಶ್ನೆಗೆ ಸ್ಪೀಕರ್ ಬಿರ್ಲಾ ಕೂಡ ಅಷ್ಟೇ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ವಿಪಕ್ಷ ನಾಯಕ ರಾಹುಲ್ ಕೇಳಿದ ಪ್ರಶ್ನೆ ಏನು?
ಸಂಸತ್ತಿನಲ್ಲಿ ಸಭಾಧ್ಯಕ್ಷರ ಆಯ್ಕೆ ವೇಳೆ ಪ್ರಧಾನಿ(PM Modi), ವಿರೋಧ ಪಕ್ಷದ ನಾಯಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಸಭಾಧ್ಯಕ್ಷರನ್ನು ಕರೆದೊಯ್ದು ಸ್ಪೀಕರ್ ಸ್ಥಾನದಲ್ಲಿ ಕುಳ್ಳಿರಿಸಿ ಅಭಿನಂದನೆ ಸಲ್ಲಿಸುವುದು ಸಂಸತ್ತಿನ ಸಂಪ್ರದಾಯ. ಅಂತೆಯೇ ಪ್ರಧಾನಿ ಮೋದಿ ಅವರ 3ನೇ ಅವಧಿಗೆ ಹಿಂದಿನ ಸ್ಪೀಕರ್ ಓಂ ಬಿರ್ಲಾ ಅವರನ್ನೇ ಮರು ಆಯ್ಕೆ ಮಾಡಿ ನಿಯಮಾನುಸಾರ ಸ್ಪೀಕರ್ ಸ್ಥಾನದಲ್ಲಿ ಕೂರಿಸಲಾಯಿತು. ಈ ವೇಳೆ ಓಂ ಬಿರ್ಲಾ ಅವರು ಪ್ರಧಾನಿ ಮೋದಿ ಅವರಿಗೆ ಶೇಕ್ ಹ್ಯಾಂಡ್ ಮಾಡಿದ್ದಲ್ಲದೆ ತಲೆಬಾಗಿ ವಂದಿಸಿದರು. ಆದರೆ ರಾಹುಲ್ ಗಾಂಧಿಗೆ ಬರೀ ಶೇಕ್ ಹ್ಯಾಂಡ್ ನೀಡಿದರು. ಇದುವೇ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ದೊಡ್ಡ ಸಮಸ್ಯೆ ಆಗಿದೆ.
ಹೌದು, ಸೋಮವಾರ ಸದನದಲ್ಲಿ ಮಾತನಾಡಿದ ರಾಹುಲ್, ನಿಮಗೆ ನಾನು ಅಭಿನಂದನೆ ಸಲ್ಲಿಸಿದಾಗ ನೀವು ನನಖೆ ಕೈಕುಲುಕಿದಿರಿ ಅಷ್ಟೆ. ಆಗ ನಾನು ಗಮನಿಸಿದ್ದೇನೆ, ನೀವು ನೇರವಾಗಿ ನಿಂತಿದ್ದಿರಿ. ಆದರೆ ನಿಮಗೆ ಪ್ರಧಾನಿಯವರು ವಿಶ್ ಮಾಡಿದಾಗ ತಲೆಬಾಗಿ ನಮಸ್ಕರಿಸಿದ್ದೀರಿ. ಇದು ಸ್ಪೀಕರ್ ಪೀಠದ ಗೌರವಕ್ಕೆ ತಕ್ಕುದಲ್ಲ, ಇದು ಏಕೆ. ನೀವು ಹೇಳಿದ್ದು ಭಾರತದ ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುತ್ತದೆ. ಸಭಾಧ್ಯಕ್ಷರ ಸ್ಥಾನದಲ್ಲಿ ಇಬ್ಬರು ಒಂದು ಸಭಾಧ್ಯಕ್ಷರು ಮತ್ತೊಂದು ಓಂ ಬಿರ್ಲಾ ಕುಳಿತಿದ್ದಾರೆ ಎನಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಆಕ್ಷೇಪಕ್ಕೆ ಸ್ಪೀಕರ್ ಓಂ ಬಿರ್ಲಾ ಬಹಳ ತೀಕ್ಷ್ಣವಾಗಿ ಉತ್ತರಿಸಿದರು. ‘ನನ್ನ ಸಂಸ್ಕಾರವೂ ನನಗೆ ಹಿರಿಯರಿಗೆ ತಲೆಬಾಗಿ ನಮಸ್ಕರಿಸಿ ಗೌರವಿಸುವಂತೆ ಹೇಳುತ್ತದೆ. ಪ್ರಧಾನಿ ಈ ಸದನದ ನಾಯಕ, ವೈಯಕ್ತಿಕವಾಗಿ, ಸಾರ್ವಜನಿಕ ಜೀವನದಲ್ಲಿ ಮತ್ತು ಈ ಹುದ್ದೆಯಲ್ಲಿ ನಾನು ಹಿರಿಯರಿಗೆ ತಲೆಬಾಗಬೇಕು. ಹಾಗೆಯೇ ನನಗಿಂತ ಕಿರಿಯರನ್ನು ಸಮಾನವಾಗಿ ಕಾಣುವಂತೆ ಹೇಳುತ್ತದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ನಾನು ನಿಮ್ಮ ಹೇಳಿಕೆಯನ್ನು ಗೌರವಿಸುತ್ತೇನೆ. ಆದರೆ ಸದನದ ಸ್ಪೀಕರ್‌ಗಿಂತ ಯಾರು ದೊಡ್ಡವರಲ್ಲ ಎಂದು ನಾನು ನಂಬಿದ್ದೇನೆ. ನೀವು ಸದನದ ನಾಯಕ ಹಾಗೂ ಯಾರೊಬ್ಬರ ಮುಂದೆಯೂ ತಲೆಬಾಗಬೇಕಾದ ಅಗತ್ಯವಿಲ್ಲ ಎಂದರು
Farmers Subsidy: ಕೃಷಿಕರಿಗೆ ಸಿಹಿ ಸುದ್ದಿ! ಈ ಯೋಜನೆಗಳ ಸಬ್ಸಿಡಿ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ!