Darshan: ವಿಶ್ವಕಪ್ ಗೆದ್ದ ಟೀಂ ಇಂಡಿಯಾ, ಆದ್ರೆ ದರ್ಶನ್ ಗೆ ಥ್ಯಾಂಕ್ಸ್ ಹೇಳಿದ ಕ್ರಿಕೆಟ್ ಪ್ರೇಮಿಗಳು – ಇದು ಎಲ್ಲಿಂದೆಲ್ಲಿಗೆ ಸಂಬಂಧವಯ್ಯಾ ?!
Darshan: ಟೀಂ ಇಂಡಿಯಾ(Team India) ತಂಡ ಕೋಟ್ಯಾಂತರ ಭಾರತೀಯರ ಕನಸನ್ನು ನನಸುಮಾಡುವ ಮೂಲಕ, ತನ್ನ ಕನಸಾದ ಐಸಿಸಿ ಟಿ20 ವಿಶ್ವಕಪ್(ICC T20 World Cup) ಗೆಲ್ಲೋದನ್ನು ನನಸಾಗಿಸಿಕೊಂಡಿದೆ. ಹೌದು, ಬಾರ್ಬಡೊಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ(South Africa) ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ತಂಡ 7 ರನ್‌ಗಳಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಆದರೆ, ವಿಶ್ವಕಪ್ ಗೆದ್ದಿದ್ದಕ್ಕೆ ನೆಟ್ಟಿಗರು ಜೈಲಲ್ಲಿರೋ ನಟ ದರ್ಶನ್(Darshan) ಧನ್ಯವಾದ ಹೇಳುತ್ತಿದ್ದಾರೆ. ಏನಿದು ವಿಚಿತ್ರ ಅನ್ಕೊಳ್ತಿದ್ದೀರಾ? ಇದಕ್ಕೆ ಕಾರಣ ಕೂಡ ಇದೆ.
Love: ಗೆಳೆಯನ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್‌ಗೆ ಹಾಕಿದ ಪ್ರಿಯತಮೆ; ಕಾರಣ ಕೇಳಿ ಶಾಕ್ ಆದ ಪೊಲೀಸರು
ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ಬಾರ್ಬಡೋಸ್ನಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಸಂಘಟಿತ ಹೋರಾಟ ಮಾಡಿದ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದ್ದು, ಇದು ಭಾರತಕ್ಕೆ ಎರಡನೇ ಟಿ20 ವಿಶ್ವಕಪ್ ಫೈನಲ್ ಗೆಲುವು. ಇದು ಒಟ್ಟಾರೆಯಾಗಿ ನಾಲ್ಕನೇ ವಿಶ್ವಕಪ್. ಆದರೆ ಭಾರತ ತಂಡ ವಿಶ್ವಕಪ್ ಗೆದ್ದಿದ್ದಕ್ಕೆ ನೆಟ್ಟಿಗರು ನಟ ದರ್ಶನ್ ತೂಗುದೀಪ್ಗೆ ಧನ್ಯವಾದ ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಚಿತ್ರಗಳನ್ನು ಹಂಚಿಕೊಂಡು, ಭಾರತ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದಕ್ಕೆ ಧನ್ಯವಾದ ಎಂದು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ನೀವೆ ಕಾರಣ ಎಂದು ಧನ್ಯವಾದ ಹೇಳಿ ಟ್ರೋಲ್ ಮಾಡುತ್ತಿದ್ದಾರೆ.
ಯಸ್, ಭಾರತ ಕೊನೆಯದಾಗಿ ವಿಶ್ವಕಪ್ ಗೆದ್ದಿದ್ದು 2011 ರಲ್ಲಿ. ಆ ವರ್ಷವೂ ಸಹ ನಟ ದರ್ಶನ್ ಹೆಂಡತಿ ಮೇಲೆ ಕೈ ಮಾಡಿ ಜೈಲು ಸೇರಿದ್ದರು. ಅದಾದ 13 ವರ್ಷಗಳ ಬಳಿಕ 2024 ರಲ್ಲಿ ದರ್ಶನ್ ಮತ್ತೆ ಜೈಲಿಗೆ ಹೋಗಿದ್ದಾರೆ. ಈಗ ಮತ್ತೆ ವಿಶ್ವಕಪ್ ಗೆದ್ದಿದೆ. ಹಾಗಾಗಿ ದರ್ಶನ್ ಜೈಲು ಸೇರಿದ್ದಕ್ಕೆ ಭಾರತ ವಿಶ್ವಕಪ್ ಗೆದ್ದಿದ್ದು ಎಂಬುದು ಕೆಲವರ ನಂಬಿಕೆ.
ಆದರೆ 2011 ರಲ್ಲಿ ದರ್ಶನ್ ಜೈಲು ಸೇರುವ ಮುಂಚೆ ಭಾರತ ವಿಶ್ವಕಪ್ ಗೆದ್ದಿತ್ತು. 2011 ರ ಏಪ್ರಿಲ್ 2ಕ್ಕೆ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದರೆ, ಸೆಪ್ಟೆಂಬರ್ 9 ರಂದು ನಟ ದರ್ಶನ್ ಜೈಲು ಸೇರಿದ್ದರು. ಹೀಗಾಗಿ ನೆಟ್ಟಿಗರು ಸುಮ್ಮನೆ ಟ್ರೋಲ್ ಮಾಡುತ್ತಿದ್ದಾರೆ.
2011ರಲ್ಲಿ ದರ್ಶನ್ ಜೈಲಿಗೆ ಹೋಗಿದ್ದೇಕೆ?
2011 ರ ಸೆಪ್ಟೆಂಬರ್ ತಿಂಗಳಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಭೀಕರ ಹಲ್ಲೆ ಮಾಡಿದ್ದರು ವಿಜಯಲಕ್ಷ್ಮಿ ಅವರ ಎರಡು ಕೈಗಳ ಮೂಳೆ ಮುರಿದಿತ್ತು, ಕತ್ತು, ತಲೆಯ ಭಾಗ ಎಲ್ಲವೂ ಗಂಭೀರವಾಗಿ ಗಾಯಗೊಂಡಿತ್ತು. ಆ ಪ್ರಕರಣದಲ್ಲಿ ದರ್ಶನ್ ಅನ್ನು ಬಂಧಿಸಿ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು.