Harshika Poonacha And Bhuvan: ವಿಭಿನ್ನ ಫೋಟೋ ಶೂಟ್ ಮೂಲಕ ಸಿಹಿ ಸುದ್ದಿ ಕೊಟ್ಟ ಹರ್ಷಿಕಾ – ಭುವನ್!
Harshika Poonacha And Bhuvan: ಕಳೆದ ವರ್ಷ ಆಗಸ್ಟ್ ನಲ್ಲಿ ಕೊಡವ ಸಂಪ್ರದಾಯದಂತೆ ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ (Harshika Poonacha And Bhuvan) ಅವರು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ತಾಯಿಯಾಗುತ್ತಿರುವ ಸಂಭ್ರಮವನ್ನು ಹರ್ಷಿಕಾ ಪೂಣಚ್ಚ ತಮ್ಮ ವಿಭಿನ್ನ ಫೋಟೊಶೂಟ್ ಮೂಲಕ ಅಭಿಮಾನಿಗಳ ಜೊತೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
Dakshina Kannada: ಉಳ್ಳಾಲ; ಟಿಪ್ಪರ್-ಸ್ಕೂಟರ್ ಅಪಘಾತ; ಚಿಕಿತ್ಸೆ ಫಲಕಾರಿಯಾಗದೆ ಸ್ಕೂಟರ್ ಸವಾರ ಸಾವು
ಹೌದು, ಅಕ್ಟೋಬರ್ನಲ್ಲಿ ಭುವನ್ ಹಾಗೂ ಹರ್ಷಿಕಾ ಮನೆಗೆ ಹೊಸ ಅಥಿತಿ ಆಗಮನವಾಗಲಿದೆ. ಸದ್ಯ ಹರ್ಷಿಕಾ, ಭುವನ್ ಹಾಗೂ ಅವರ ಕುಟುಂಬದವರು ಕೊಡವ ಶೈಲಿಯ ಉಡುಗೆ ತೊಟ್ಟು ಫೋಟೊಶೂಟ್ ಮಾಡಿಸಿಕೊಂಡು, ತಾವು ಪೋಷಕರಾಗುತ್ತಿರೋ ವಿಚಾರ ಭುವನ್ ಮತ್ತು ಹರ್ಷಿಕಾ ತಮ್ಮ ಸಾಮಾಜಿಕಾ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಸದ್ಯ ಹರ್ಷಿಕಾ ಐದು ತಿಂಗಳ ಗರ್ಭಿಣಿ ಆಗಿದ್ದು, ಕುಟುಂಬದೊಟ್ಟಿಗೆ ಸೇರಿ ಭಿನ್ನ ರೀತಿಯ ಕೊಡವ ಸಾಂಪ್ರದಾಯ, ಉಡುಪು, ಕೊಡಗಿನ ‘ಐನ್ ಮನೆ’ (ದೊಡ್ಡಮನೆ), ಕೋವಿ, ಉಪಕರಣಗಳು, ಜೀವನಶೈಲಿ ಎಲ್ಲವನ್ನು ಬಿಂಬಿಸುವ ಶೈಲಿಯಲ್ಲಿ ಫೋಟೊಶೂಟ್ ಮಾಡಿಸಿ ಖುಷಿಪಟ್ಟಿದ್ದಾರೆ. ವಿಶೇಷ ಅಂದ್ರೆ ಪ್ರೆಗ್ನೆನ್ಸಿ ಶೂಟ್ನಲ್ಲಿ ಹರ್ಷಿಕಾ ಪೂಣಚ್ಚ ಕುಟುಂಬದೊಟ್ಟಿಗೆ ಸಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಭಿನ್ನವಾಗಿ ಫೋಟೊಶೂಟ್ ಮಾಡಿಸಿದ್ದಾರೆ.
ಸೋಷಿಯಲ್ ಮೀಡಿಯಾ ದಲ್ಲಿ ‘ಇಂದಿನವರೆಗೂ ನಮ್ಮಿಬ್ಬರಿಗೆ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲು ಇರಲಿ. ಅಕ್ಟೋಬರ್ ಗೆ ಕಾತುರದಿಂದ ಕಾಯುತ್ತಿದ್ದೇವೆ” ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹರ್ಷಿಕಾ ಬರೆದುಕೊಂಡಿದ್ದಾರೆ.
View this post on Instagram