Farmers Subsidy: ಕೃಷಿಕರಿಗೆ ಸಿಹಿ ಸುದ್ದಿ! ಈ ಯೋಜನೆಗಳ ಸಬ್ಸಿಡಿ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ!
Farmers Subsidy: ಕೃಷಿಕರಿಗೆ ಸಿಹಿ ಸುದ್ದಿ ಒಂದಿದೆ. ಹೌದು, ಕೃಷಿಕರೇ ಗಮನಿಸಿ, 2024-25ನೇ ಸಾಲಿನ ಹುಬ್ಬಳ್ಳಿ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಹನಿ ನೀರಾವರಿ), ಯಂತ್ರೋಪಕರಣ ಯೋಜನೆಗಳಡಿಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸದ್ಯ ಹನಿ ನೀರಾವರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಹಣ್ಣು ಮತ್ತು ತರಕಾರಿಗಳಿಗೆ ಸಹಾಯಧನ ಸೌಲಭ್ಯ ದೊರೆಯಲಿದೆ ಜೊತೆಗೆ ಯಂತ್ರೋಪಕರಣಗಳ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳಿಗೆ ಸಹಾಯಧನ ಸೌಲಭ್ಯ ಕೂಡ ಇದೆ.
ಮುಖ್ಯವಾಗಿ ತೋಟಗಾರಿಕೆ ಬೆಳೆಗಾರರಿಗೆ ಹಾಗೂ ರೈತ ಉತ್ಪಾದಕ ಕಂಪನಿಯ ರೈತರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಹಣ್ಣುಗಳು, ಬಾಳೆ ಗಿಡ , ಹೈಬ್ರಿಡ್ ತರಕಾರಿಗಳ ಪ್ರದೇಶ ವಿಸ್ತರಣೆ ಮತ್ತು ಹೂವು ಪ್ರದೇಶ ವಿಸ್ತರಣೆ ಅಂದರೆ ಕತ್ತರಿಸಿದ ಹೂ, ಗಡ್ಡೆ ಜಾತಿಯ ಹೂ, ಬಿಡಿ ಹೂ ಮತ್ತು ವೈಯಕ್ತಿಕ ಕೃಷಿಹೊಂಡ, ಸಮುದಾಯ ಕೃಷಿಹೊಂಡ, ಸಣ್ಣ ಟ್ಯಾಕ್ಟರ್ (Upto 20 PTO HP) ಪಾಲಿಹೌಸ್, ನೆರಳು ಪರದೆ, ಈರುಳ್ಳಿ ಶೇಖರಣಾ ಘಟಕ, ಪ್ಯಾಕ್ ಹೌಸ್ ಹಾಗೂ ತಳ್ಳುವ ಗಾಡಿ ಘಟಕಗಳಿಗೆ ರೈತರಿಗೆ ಸಹಾಯಧನ ಸೌಲಭ್ಯ ನೀಡಲಾಗುತ್ತದೆ.
ಈ ಮೇಲಿನ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ರೈತರು ಸ್ವಂತ ಜಮೀನು ಮತ್ತು ನೀರಾವರಿ ಸೌಲಭ್ಯ ಹೊಂದಿರಬೇಕು. ಜೊತಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಗಣಕೀಕೃತ ಬೆಳೆ ದೃಢೀಕರಣ ಪತ್ರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಪಾಸ್ ಬುಕ್ ಹೊಂದಿರಬೇಕು. (FID ಸಂಖ್ಯೆ ಹೊಂದಿರಬೇಕು). ಸದ್ಯ ಪರಿಶಿಷ್ಟ ಜಾತಿ 17%, ಪರಿಶಿಷ್ಟ ಪಂಗಡ 7%, ಮಹಿಳೆ 33%, ಅಲ್ಪಸಂಖ್ಯಾತರು 5 % ಹಾಗೂ ಅಂಗವಿಕಲರಿಗೆ ಶೇ 3 ರಂತೆ ಮೀಸಲಾತಿಗೆ ಆದ್ಯತೆ ನೀಡಲಾಗುವುದು.
ಜುಲೈ 15 ರೊಳಗೆ ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಪ್ರಭುಲಿಂಗ ಅವರು ಮಾಹಿತಿ ನೀಡಿದ್ದಾರೆ. ಈ ಮೇಲಿನ ಸೌಲಭ್ಯ ಪಡೆಯಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ ಈ ಅಧಿಕಾರಿಗಳನ್ನು ಸಂಪರ್ಕಿಸಿ
ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಹುಬ್ಬಳ್ಳಿ (ಮೊ.ನಂ.9740164868) ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಛಬ್ಬಿ (ಮೊ.ನಂ.9164126426) ಸಹಾಯಕ ತೋಟಗಾರಿಕ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಶಿರಗುಪ್ಪಿ (ಮೊ.ನಂ. 9663474155) ರವರನ್ನು ಸಂಪರ್ಕಿಸಿ.