Belthangady: ಹಿರಿಯ ಸಾಹಿತಿ ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ.ಎನ್. ಜಿ ಪಟವರ್ಧನ್ ನಿಧನ

Belthangady: ಅನಾರೋಗ್ಯ ನಿಮಿತ್ತ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದ ಹಿರಿಯ ಸಾಹಿತಿ, ಉಜಿರೆ ಎಸ್ ಡಿ ಎಂ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಎನ್ ಜಿ ಪಟವರ್ಧನ್ ಅವರು ಜು.1 ರಂದು ಕೊನೆಯುಸಿರೆಳೆದಿದ್ದಾರೆ.

Darshan: ಶೀಘ್ರದಲ್ಲೇ ಜೈಲಿನಿಂದ ಹೊರ ಬರಲಿದ್ದಾರೆ ದರ್ಶನ್ !! ಸಿಕ್ಕೇಬಿಡ್ತು ನೋಡಿ ಗ್ರೀನ್ ಸಿಗ್ನಲ್ !!

ಮುಂಡಾಜೆ ಗ್ರಾಮದ ಕಡಂಬಳ್ಳಿ ಮೂಲದವರಾದ ಅವರು ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ 32 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಜೊತೆಗೆ ಕನ್ನಡ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಳೆದ ಅನೇಕ ವರ್ಷಗಳಿಂದ ಉಜಿರೆಯಲ್ಲಿ ನೆಲೆಸಿದ್ದು, ಅವರು ಹಲವು ಕಥೆ, ಕವನ, ವಿಮರ್ಷೆ ರಚನಾಕರ್ತರಾಗಿದ್ದರು. ಜೊತೆಗೆ ಹಲವಾರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದು ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾದುದು.

ಉತ್ತಮ ಶೋತೃ ಹಾಗೂ ಸಾಹಿತ್ಯ ವಿಷಯಾಸಕ್ತಿ ಹೊಂದಿದ್ದ ಇವರು ಹಲವಾರು ಯುವ ಬರಹಗಾರರ ಬರಹಗಳ ಬಗ್ಗೆ ವಿಮರ್ಶೆ ಬರೆದು ಆ ಮೂಲಕ ಅವರನ್ನು ಪ್ರೋತ್ಸಾಹಿಸಿ ಎಷ್ಟೋ ಬರಹಗಾರರನ್ನು ಸಮಾಜಕ್ಕೆ ನೀಡಿರುತ್ತಾರೆ. ಇವರು ಬೆಳ್ತಂಗಡಿ (Belthangady) ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಾಲೂಕು ಮಟ್ಟದ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು ಮತ್ತು 2014ರಲ್ಲಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಹಾಗೂ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನ ಚುಟುಕು ಭಾರ್ಗವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಅವರ ಅನೇಕ ಬರಹಗಳು, ಚುಟುಕುಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Rahul Gandhi: ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ನಿಮ್ಮನ್ನು ಸೋಲಿಸುವೆ; ಬಿಜೆಪಿಗೆ ರಾಹುಲ್‌ ಗಾಂಧಿ ಬಹಿರಂಗ ಸವಾಲು

Leave A Reply

Your email address will not be published.