Cm Siddaramaiah: ನನ್ನ ಬಳಿ ಮೊಬೈಲ್ ಫೋನೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ! ಏನಿದು ವಿಚಿತ್ರ?

Share the Article

Cm Siddaramaiah: ಆಧುನಿಕ ಯುಗದಲ್ಲಿ ಯಾರ ಕೈಯಲ್ಲಿ ಮೊಬೈಲ್ ಇಲ್ಲ ಹೇಳಿ? ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಆದ್ರೆ ಆಶ್ಚರ್ಯ ಅಂದ್ರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರಲ್ಲಿ ಮೊಬೈಲ್ ಫೋನೇ ಇಲ್ವಂತ! ಹೌದು,ಆಶ್ಚರ್ಯ ಆದ್ರು ಸತ್ಯ. ಈ ವಿಚಾರಕ್ಕೆ ಅವರೇ ಸ್ಪಷ್ಟನೆ ನೀಡಿದ್ದಾರೆ.

Black Magic: ಅಂತ್ಯಸಂಸ್ಕಾರ ಮಾಡಿದ್ದ ಮಗು ಮರುದಿವಸ ಮರದಲ್ಲಿ ಪ್ರತ್ಯಕ್ಷ!

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾರ್ತಾ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬೆಂಗಳೂರು ಪ್ರೆಸ್‍ಕಬ್ಲ್ ಆವರಣದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆ 2024 ಉದ್ಘಾಟಿಸಿ ಸಾಮಾಜಿಕ ಜಾಲತಾಣಗಳು ಮತ್ತು ಫೇಕ್ ನ್ಯೂಸ್ ಗಳ ಬಗ್ಗೆ ಮಾತನಾಡುವಾಗ ಮುಖ್ಯ ಮಂತ್ರಿಗಳು ತಮ್ಮ ಬಳಿ ಮೊಬೈಲ್ ಫೋನ್ ಇಲ್ಲದ ವಿಚಾರವನ್ನು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ‘ನಾನು 6 ತಿಂಗಳು ಫೋನ್ ಇಟ್ಟುಕೊಂಡಿದ್ದೆ. ಆಗ ರಾತ್ರಿಯೆಲ್ಲಾ ಫೋನು ಬರುತ್ತಿದ್ದು, ನಿದ್ದೆ ಮಾಡೋಕೂ ಆಗ್ತಿರಲಿಲ್ಲ. ಹಾಗಾಗಿ ಪ್ರಸ್ತುತ ಫೋನೇ ಇಟ್ಟುಕೊಂಡಿಲ್ಲ!’ ಎಂದಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಏನಾಗುತ್ತದೆ ಎಂದು ನನಗೆ ಗೊತ್ತಾಗುವುದಿಲ್ಲ. ನನ್ನ ಮಗ ಅಥವಾ ನಮ್ಮ ಪಿಎಗಳು, ಗನ್ ಮ್ಯಾನ್ ಗಳು ನನಗೆ ಸೋಷಿಯಲ್ ಮೀಡಿಯಾದಲ್ಲಿ ಹರಿಯುವ ವಿಷಯ ತಿಳಿಸ್ತಾರೆ. ನಾನು ಅದಕ್ಕೆ ಉತ್ತರ ಕೊಡುವುದಕ್ಕೆ ಪ್ರಯತ್ನ ಮಾಡ್ತೇನೆ ಎಂದು ಹೇಳಿದರು.

ಇನ್ನು ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಅಲ್ಲದೇ ಸಾಮಾಜಿಕ ಜಾಲತಾಣಗಳ ಬಹಳ ವೇಗವಾಗಿ ಜನರನ್ನು ತಲುಪುವ ಮಾಧ್ಯಮವಾಗಿದೆ. ಅದರಿಂದ ಎಷ್ಟು ಉಪಯೋಗ ಆಗುತ್ತದೋ ಅಷ್ಟೇ ಕೆಟ್ಟದ್ದು ಸಹ ಆಗುತ್ತದೆ. ಅದನ್ನು ನಾವು ಉತ್ತಮ ರೀತಿಯಲ್ಲಿ ಸ್ವೀಕಾರ ಮಾಡಿದರೆ ಒಳ್ಳೆಯದಾಗುತ್ತದೆ. ಇಲ್ಲವಾದರೆ ಏನಾಗುತ್ತದೆ ಎಂಬುದು ನಿಮಗೇ ಗೊತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

New Criminal Laws : IPC ಸೆಕ್ಷನ್ ಗೆ ಬಾಯ್ ಬಾಯ್, ಜಾರಿಗೆ ಬಂತು BNS – ಏನು ಈ ಭಾರತೀಯ ನ್ಯಾಯಾಂಗ ಸಂಹಿತೆ ? ಇಂದಿನಿಂದ ಆಗೋ ಬದಲಾವಣೆಗಳೇನು?

Leave A Reply