Mangalore: ಮಂಗಳೂರಿನಲ್ಲಿ ಜೈಲಿನಲ್ಲಿ ಮಾರಾಮಾರಿ; ಟೋಪಿ ನೌಫಲ್ ಗ್ಯಾಂಗ್‌ನಿಂದ ಹಲ್ಲೆ
Mangaluru: ಎರಡು ಗುಂಪುಗಳ ನಡುವೆ ಭೀಕರ ಸಂಘರ್ಷವೊಂದು ಮಂಗಳೂರು ಕಾರಾಗೃಹದಲ್ಲಿ ನಡೆದಿದ್ದು, ಎ ಬ್ಯಾರಕ್‌ನ ವಿಚಾರಣಾಧೀನ ಕೈದಿಗಳ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವುದಾಗಿ ವರದಿಯಾಗಿದೆ. ಈ ಗಲಾಟೆಯಲ್ಲಿ ಇಬ್ಬರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕೂಡಾ ಇಂದು ನಡೆದಿರುವುದಾಗಿ ವರದಿಯಾಗಿದೆ.
Kidnap: 16 ರ ಹರೆಯದ ಅನ್ಯಧರ್ಮದ ಬಾಲಕಿ-ಹಿಂದೂ ಯುವಕ ನಾಪತ್ತೆ; ದೂರು ದಾಖಲು
ಉಳ್ಳಾಲ ನಿವಾಸಿ ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್ (33) ಹಾಗೂ ಬೋಳಿಯಾರ್ ನಿವಾಸಿ ಮುಹಮ್ಮದ್ ಮನ್ಸೂರ್ (30) ಗೆ ಗಾಯವಾಗಿದೆ.
ವಿಚಾರಣಾಧೀನ ಕೈದಿಗಳಾಗಿದ್ದ ಇಬ್ಬರಿಗೆ ಟೋಪಿ ನೌಫಲ್ ಮತ್ತು ಗ್ಯಾಂಗ್‌ನಿಂದ ದಾಳಿ ಆಗಿರುವುದಾಗಿ ವರದಿಯಾಗಿದೆ.
ಸಂಜೆ ಟೀ ಸಮಯದಲ್ಲಿ 6.30 ರಿಂದ 6.45 ರ ನಡುವೆ ವಿಚಾರಣಾಧೀನ ಕೈದಿಗಳ ಮೇಲೆ ರೌಡಿಶೀಟರ್‌ಗಳಾಗಿರುವ ಟೋಪಿ ನೌಫಲ್ ಟೀಂ ಗಳಿಂದ ಹಲ್ಲೆ ಆಗಿರುವುದಾಗಿ ವರದಿಯಾಗಿದೆ. ಹರಿತವಾದ ವಸ್ತುಗಳನ್ನು ತೆಗೆದುಕೊಂಡು ತಲೆ, ಭುಜ ಮತ್ತು ದೇಹದ ಇತರ ಭಾಗಗಳಿಗೆ ಹಲ್ಲೆಯಾಗಿರುವುದು ಹೇಳಲಾಗಿದೆ. ಅಡುಗೆ ಕೋಣೆಯಲ್ಲಿದ್ದ ವಸ್ತುಗಳಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.
ಇದೀಗ ಗಾಯಗೊಂಡಿರುವ ಇಬ್ಬರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಮುಂದುವರಿದಿದೆ. ಮಂಗಳೂರು ಪೊಲೀಸ್ ಕಮೀಷನರ್ ಅವರು ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದಾಗಿ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ದಾಳಿ ನಡೆಸಿದ ಆರೋಪಿ ಖೈದಿಗಳು ಮುಫದ್ ರಿಫಾತ್ (28), ಮುಹಮ್ಮದ್ ರಿಜ್ವಾನ್ (34), ಇಬ್ರಾಹಿಂ ಕಲ್ಲೆಲ್ (30), ಉಮರ್ ಫಾರೂಕ್ ಇರ್ಫಾನ್, ಅಲ್ತಾಫ್, ನೌಫಲ್, ಜೈನುದ್ದೀನ್ ಮತ್ತು ಇತರರು ಎಂದು ಪೊಲೀಸರು ವಿವರ ನೀಡಿದ್ದಾರೆ. ಕಾರಾಗೃಹಕ್ಕೆ ಉನ್ನತ ಅಧಿಕಾರಿಗಳು ಭೇಟಿ ನೀಡಿರುವುದಾಗಿ ವರದಿಯಾಗಿದೆ.
Bhushi Dam: ನೀರಿನ ರಭಸಕ್ಕೆ ಕೊಚ್ಚಿ ಹೋದ ಕುಟುಂಬ! ಮನಕಲಕುವ ವಿಡಿಯೋ ವೈರಲ್