Kambala: ಕಂಬಳ ಸಮಿತಿಯಿಂದ ಓಟಗಾರನಿಗೆ ಹೊಸ ನಿಯಮಾವಳಿ

Mangaluru: ಒಂದು ಕೂಟದಲ್ಲಿ 5-6 ಜೊತೆ ಕೋಣ ಓಡಿಸಿದ ಕಂಬಳದ ಓಟಗಾರರು ಇನ್ನು ಗರಿಷ್ಠ 3 ಜೊತೆ ಕೋಣಗಳನ್ನು ಮಾತ್ರ ಓಡಿಸಬಹುದು. ಜೊತೆಗೆ ಕರೆಯ ” ಗಂತ್‌” ಕೋಣ ಬಿಡುವಲ್ಲೂ ಒಬ್ಬರಿಗೆ 3 ಜೊತೆ ಕೋಣ ಬಿಡಲು ಮಾತ್ರ ಅವಕಾಶ ಎಂದು ಕಂಬಳ ಸಮಿತಿ ನಿರ್ಧಾರ ಮಾಡಿದೆ.

 

LPG Price Cut: ಜುಲೈ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಸಿಹಿ ಸುದ್ದಿ, ಸಿಲಿಂಡರ್ ಬೆಲೆ ಇಳಿಕೆ

ನಿಗದಿತ ಸಮಯಕ್ಕೆ ಕಂಬಳ ಮುಕ್ತಾಯವಾಗುವುದಿಲ್ಲ. ಹಾಗಾಗಿ ಓಟಗಾರರ ಆರೋಗ್ಯ ಕಾಳಜಿ ಹಿನ್ನೆಲೆಯಲ್ಲಿ ಈ ಮಹತ್ವದ ನಿಯಮವನ್ನು ಮಾಡಿದೆ. ಕಂಬಳ ಸಮಿತಿಯು ಮುಂದಿನ ಆಗಸ್ಟ್‌ನಲ್ಲಿ ನಡೆಯಲಿದ್ದು, ಇದಕ್ಕೆ ಒಪ್ಪಿಗೆ ಪಡೆದು ಮುಂದಿನ ಕಂಬಳದಿಂದಲೇ ಜಾರಿಗೆ ಬರುವ ನಿರೀಕ್ಷೆ ಇದೆ.

ಒಂದು ಕೂಟದಲ್ಲಿ ಹಲವು ಜೊತೆ ಕೋಣಗಳನ್ನು ಒಬ್ಬನೇ ಓಡಿಸುವ ಕ್ರಮವಿದೆ. ಒಮ್ಮೆ ಕೆರೆಯಲ್ಲಿ ಓಡಿದ ನಂತರ ಮತ್ತೆ ಕೂಡಲೇ ಆತ ಓಟಕ್ಕೆ ಸಿದ್ಧವಾಗಲು ಸಾಧ್ಯವಾಗುತ್ತಿಲ್ಲ. “ಗಂತ್‌” ನಲ್ಲಿ ಕೋಣ ಬಿಡುವಲ್ಲಿಯೂ ಹೆಚ್ಚು ಜನರಿದ್ದಾರೆ. ಹಾಗೂ ಕೆಲವೇ ಮಂದಿ ಕೋಣಗಳನ್ನು ಬಿಡುತ್ತಾರೆ. ಹೊಸಬರಿಗೆ ಹೆಚ್ಚು ಅವಕಾಶ ಸಿಗುತ್ತಿಲ್ಲವಾದ್ದರಿಂದ ಹೊಸ ಬದಲಾವಣೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ.

ಕಂಬಳ ಎರಡು ದಿನ ಮುಂದುವರಿದಿದ್ದು ಕೂಡಾ ಇದ್ದಿರುವುದರಿಂದ ಕಂಬಳ ಓಟಗಾರ ದೈಹಿಕವಾಗಿ ಬಳಲಿ ಮತ್ತೆ ಕಂಬಳಕ್ಕೆ ಚೇತರಿಕೆ ಪಡೆಯುವುದು ಕಷ್ಟ ಸಾಧ್ಯ. ಇದರ ಜೊತೆಗೆ ಓಟಗಾರರಿಗೆ ಅವಕಾಶ ಸಿಗಬೇಕು ಎಂದು ಹೊಸ ನಿಯಮಾವಳಿ ಜಾರಿಗೆ ಉದ್ದೇಶಿಸಲಾಗಿದೆ ಎಂದು ತೀರ್ಪುಗಾರರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

ಒಬ್ಬ ಆಟಗಾರ ಕೆಲವು ಕೋಣಗಳನ್ನು ಓಡಿಸುವ ಕಾರಣ ಸೆಮಿಫೈನಲ್‌ ಗೆ ಬರುವಾಗ ಓಟಗಾರರು ಒತ್ತಡಕ್ಕೆ ಸಿಲುಕುತ್ತಾರೆ. ಸುಸ್ತಾಗುತ್ತಾರೆ, ಮತ್ತೆ ಕೆರೆಗೆ ಬರುವಾಗ ತಡವಾಗುವ ಕಾರಣ, ಇದಕ್ಕೆ ನಿಯಮಾವಳಿ ಅನಿವಾರ್ಯ ಎಂದು ಹೇಳಲಾಗಿದೆ.

Hamsalekha: ದರ್ಶನ್ ನನ್ನ ಮಗನ ರೀತಿ, ನಾನೂ ನೋವು ತಿನ್ನುತ್ತಿದ್ದೇನೆ – ಕೊಲೆ ಕೇಸ್ ವಿಚಾರವಾಗಿ ಹಂಸಲೇಖ ಶಾಕಿಂಗ್ ಹೇಳಿಕೆ!

Leave A Reply

Your email address will not be published.