Satish Jarakiholi: 2028ಕ್ಕೆ ನಾನೇ ರಾಜ್ಯದ ಮುಖ್ಯಮಂತ್ರಿ- ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ !!

Satish Jarakiholi: ರಾಜ್ಯದಲ್ಲಿ ಮುಖ್ಯಮಂತ್ರಿ(CM) ಬದಲಾವಣೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವಾಗಲೇ ಕಾಂಗ್ರೆಸ್ ನ ಪ್ರಬಲ ನಾಯಕ, ಸಚಿವ ಸತೀಶ್ ಜಾರಕಿಹೊಳಿ(Satish Jarakiholi) ಅವರು ಹೊಸ ಬಾಂಬ್ ಸಿಡಿಸಿದ್ದು, 2028ಕ್ಕೆ ನಾನೇ ರಾಜ್ಯದ ಸಿಎಂ ಆಗುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

 

D K Suresh: ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿ ಹೇಳಿಕೆ ವಿಚಾರ – ಅಚ್ಚರಿ ಸ್ಟೇಟ್ಮೆಂಟ್ ಕೊಟ್ಟ ಡಿ ಕೆ ಸುರೇಶ್!!

ಕೆಂಪೇಗೌಡ ಜಯಂತಿ ದಿನ ಚಂದ್ರಶೇಖರನಾಥ ಸ್ವಾಮೀಜಿಗಳು(Chandrashekharnath Swamiji) ಮುಖ್ಯಮಂತ್ರಿ ಬದಲಾವಣೆ ವಿಚಾರದ ಕಿಡಿ ಹೊತ್ತಿಸಿದರು. ಇದು ದೊಡ್ಡ ಮಟ್ಟದಲ್ಲಿ ಬೆಂಕಿಯಾಗಿ ಹಬ್ಬಿತು. ಇದರಿಂದಾಗಿ ಆಯಾ ಸಮುದಾಯಗಳ ಸ್ವಾಮೀಜಿಗಳು ನಾಯಕರ ಹೆಸರನ್ನು ಸೂಚಿಸಿ, ಇವರನ್ನೇ ಸಿಎಂ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರು, ಸಚಿವರು ಕೂಡ ಇದನ್ನೇ ಚರ್ಚಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಮುಂದಿನ ಚುನಾವಣೆ ಬಳಿಕ ನಾನೇ ಸಿಎಂ ಎಂದು ಸತೀಶ್‌ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿ, ಡಿಕೆಶಿಗೆ ಟಕ್ಕರ್ ನೀಡಿದ್ದಾರೆ.

ಹೌದು, ಚಿಕ್ಕೋಡಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು ‘2028ರಲ್ಲಿ ನಾನು ಕೂಡ ಮುಖ್ಯಮಂತ್ರಿಯಾಗಲು ಹಕ್ಕು ಮಂಡಿಸುತ್ತೇನೆ. ಆಗಿನ ಚುನಾವಣೆ ಫಲಿತಾಂಶದ ಬಳಿಕದ ಪರಿಸ್ಥಿತಿ ನೋಡಿಕೊಂಡು ಏನು ಮಾಡಬೇಕು ಅದನ್ನು ಮಾಡುವೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದುಹೋಗಿದೆ. ಸಿಎಂ ಬದಲಾವಣೆ ವಿಚಾರವು ಹೈಕಮಾಂಡ್‌ ತೀರ್ಮಾನವಾಗಿದೆ. ಡಿಸಿಎಂಗಳ ವಿಚಾರವೂ ಚುನಾವಣೆಗೆ ಮೊದಲು ಕೇಳಿಬಂದಿತ್ತು. ಈಗ ಮಾಡಬೇಕಾ, ಬೇಡವಾ ಎಂಬುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ ಎಂದು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್‌ (DK Shivakumar) ಅವರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

One sided love: ಒನ್‌ ಸೈಡ್‌ ಲವ್‌ನಿಂದ ರೋಸಿ ಹೋಗಿದ್ದೀರಾ? ಹಾಗಿದ್ರೆ ಹೀಗೆ ಮಾಡಿ, ಬೇಗ ರಿಲೀಫ್‌ ಪಡೀರಿ !!

Leave A Reply

Your email address will not be published.