Actor Darshan: ʼರೇಣುಕಾಸ್ವಾಮಿಗೆ ಎರಡೇಟು ಹೊಡೆದು, ಊಟ ಕೊಡಿʼ ಎಂದೇಳಿದ ದರ್ಶನ್‌ ನಂತರ ಹಲ್ಲೆ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದೇಗೆ?

Share the Article

Actor Darshan: ನಟ ದರ್ಶನ್‌ ಅವರು ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ಅರೆಸ್ಟ್‌ ಆಗಿ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾರೆ. ಮೊದ ಮೊದಲಿಗೆ ಇದಕ್ಕೂ ನನಗೂ ಏನೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದ ಡಿ ಬಾಸ್‌ ನಂತರ ತಾನು ಹಲ್ಲೆ ಮಾಡಿದ್ದೇನೆ ಎಂಬ ಒಪ್ಪಿಕೊಂಡಿದ್ದು ಹೇಗೆ? ಇಲ್ಲಿದೆ ಆ ಸಂಪೂರ್ಣ ವಿಷಯ.

Payal Ghosh: ಕಳೆದ 9 ವರ್ಷಗಳಿಂದ ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ, ಇದಕ್ಕೆ ಕಾರಣ ಇರ್ಫಾನ್ ಪಠಾಣ್ ಎಂದ ಖ್ಯಾತ ನಟಿ – ಯಾಕಂತೆ?!

ರೇಣುಕಾಸ್ವಾಮಿಗೆ ಎರಡೇಟು ಹೊಡೆದು ಟ್ಯಾಬ್ಲೆಟ್‌ ಹಾಗೂ ಊಟ ಕೊಡಿ ಎಂದು ಹೇಳಿ ನಾನು ಬಂದೆ ಎಂದು ದರ್ಶನ್‌ ಮೊದಲು ಹೇಳಿಕೆ ನೀಡಿದ್ದರು. ನಂತರ ಖಾಕಿ ಪಡೆ ಇಟ್ಟ ಸಾಕ್ಷಿಗಳಿಂದ ದರ್ಶನ್‌ ಕಂಗಾಲಾಗಿ ಕೊನೆಗೆ ಅವರು ಈ ವಿಚಾರ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿ ಕರೆದುಕೊಂಡು ಬಂದ ನಂತರದಲ್ಲಿ 50 ನಿಮಿಷ ಆ ಪಟ್ಟಣಗೆರೆ ಶೆಡ್‌ನಲ್ಲಿ ಏನಾಯ್ತು ಎನ್ನುವು ಇಂಚಿಂಚು ಮಾಹಿತಿ ಇಲ್ಲಿದೆ.

ರೇಣುಕಾಸ್ವಾಮಿಯನ್ನು ಪಟ್ಟಣಗರೆ ಶೆಡ್‌ಗೆ ಸುಮಾರು 4.30 ರ ಸಮಯಕ್ಕೆ ವಿನಯ್‌ ಜೊತೆಗೆ ದರ್ಶನ್‌ ಬರುತ್ತಾರೆ. ನಂತರ ಅಲ್ಲಿಂದ ವಾಪಾಸು ಹೋಗಿದ್ದು 5.20ಕ್ಕೆ. ದರ್ಶನ್‌ ನಿರಂತರವಾಗಿ ರೇಣುಕಾಸ್ವಾಮಿ ಹೇಳಿ ಬರೋಬ್ಬರಿ 30 ನಿಮಿಷಗಳ ಕಾಲ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ನಿಂತಿದ್ದ ವಾಹನಗಳ ಮೇಲೆ ರೇಣುಕಾಸ್ವಾಮಿ ಅವರನ್ನು ದರ್ಶನ್‌ ಎತ್ತಿ ಬಿಸಾಡಿದ್ದರು. ದರ್ಶನ್‌ ಕ್ರೌರ್ಯಕ್ಕೆ ಅಲ್ಲಿದ್ದ ವಾಹನಗಳೇ ಶೇಕ್‌ ಆಗಿದ್ದವು ಎನ್ನಲಾಗಿದೆ.

ಬೂಟು ಕಾಲಿನಲ್ಲಿ ರೇಣುಕಾಸ್ವಾಮಿಗೆ ಒದ್ದು ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿ ಕಳುಹಿಸಿದ್ದ ಮೆಸೆಜ್‌ನ ಪವನ್‌ಗೆ ದರ್ಶನ್‌ ಓದಲು ಹೇಳಿದ್ದರು. ಮೆಸೆಜ್‌ ಓದುತ್ತಿದ್ದ ಟೋನ್‌ನಲ್ಲಿಯೇ ದರ್ಶನ್‌ ಹಲ್ಲೆ ಮಾಡುತ್ತಿದ್ದರು ಎಂದು ವರದಿಯಾಗಿದೆ.

ತಾನು ಎರಡೇಟು ಕೊಟ್ಟು ಹಣ ಕೊಟ್ಟು ಹೊರಟೆ ಎಂದು ದರ್ಶನ್‌ ಮೊದ ಮೊದಲು ಹೇಳಿದ್ದರು. ಆದರೆ ದರ್ಶನ್‌ ಐವತ್ತು ನಿಮಿಷ ಶೆಡ್‌ನಲ್ಲಿದ್ದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದು, ನಂತರ ಸಾಕ್ಷಿ ಮುಂದೆ ಇಟ್ಟು ಪೊಲೀಸರು ವಿಚಾರಣೆ ನಡೆಸಿದಾಗ ಹಲ್ಲೆ ಮಾಡಿರುವುದಾಗಿ ಸತ್ಯ ಒಪ್ಪಿಕೊಂಡರು ಎನ್ನಲಾಗಿದೆ.

Belthangady: ಬಸ್‌-ಬೈಕ್‌ ನಡುವೆ ಡಿಕ್ಕಿ; ಗ್ರಾಮ ಕರಣಿಕ ಕಚೇರಿ ಸಹಾಯಕ ಸಾವು

Leave A Reply