Channapattana By Election: ಡಿ ಕೆ ಶಿವಕುಮಾರ್ ಮಗಳು ಐಶ್ವರ್ಯ ಕಣಕ್ಕೆ ?!
Channapattana By Election : ಲೋಕಸಭಾ ಚುನಾವಣೆ(Parliament Election) ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಉಪಚುನಾವಣೆಯ (Assembly By Election) ಕಾವು ಜೋರಾಗಿದೆ. ಚುನಾವಣೆಯ ದಿನಾಂಕ ನಿಗದಿಯಾಗಿದ್ದರೂ ಇನ್ನೂ ಅಭ್ಯರ್ಥಿಗಳ ಆಯ್ಕೆ ಕುತೂಹಲವಾಗಿಯೇ ಉಳಿದಿದೆ.
ಅದರಲ್ಲೂ ಚನ್ನಪಟ್ಟಣ(Channapattana) ಅಭ್ಯರ್ಥಿಯ ಆಯ್ಕೆ ಅಂತೂ ಹೆಚ್ಚೆಂದೇ ಹೇಳಬಹುದು. ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಹೇಗಾದರೂ ಗೆಲ್ಲಬೇಕೆಂದು ಪಣತೊಟ್ಟಿದೆ. ಹೀಗಾಗಿ ಡಿ ಕೆ ಶಿವಕುಮಾರ್ ಅವರು ನಾನೇ ಅಭ್ಯರ್ಥಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ದರು. ಆದರೀಗ ಅಚ್ಚರಿ ಎಂಬಂತೆ ಅವರ ಮಗಳು ಐಶ್ವರ್ಯ ಶಿವಕುಮಾರ್(Aishwarya Shivkumar)ಚನ್ನಪಟ್ಟಣದಿಂದ ಕಣಕ್ಕಿಳಿಯುವ ವಾಸನೆ ಬರುತ್ತಿದೆ.
ಹೌದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದುಕೊಂಡ ಬೆಂಗಳೂರು ಗ್ರಾಮಾಂತರ(Bengaluru Rural) ಲೋಕಸಭಾ ಕ್ಷೇತ್ರದಲ್ಲಿಯೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವೂ ಬರುತ್ತದೆ. ಅಲ್ಲದೆ ಇದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸಿದ ಕ್ಷೇತ್ರ. ಹೀಗಾಗಿ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಪ್ರಮುಖವಾದುದು. ಹೀಗಾಗಿ ಸೋತಲ್ಲೇ ಗೆಲ್ಲಬೇಕು ಎಂಬುದು ಕಾಂಗ್ರೆಸ್ ನ ಹೆಬ್ಬಯಕೆ. ಹೀಗಾಗಿ ಡಿ ಕೆ ಶಿವಕುಮಾರ್ ಅವರೇ ಇಲ್ಲಿಂದ ಕಣಕ್ಕಿಳಿದು ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಪಡೆಯುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೀಗ ಎಲ್ಲಾ ಪ್ಲಾನ್ ಉಲ್ಟಾ ಆದಂತಿದೆ. ಯಾಕೆಂದರೆ ಇಲ್ಲಿಂದ ಡಿಕೆಶಿ ಮಗಳು ಸ್ಪರ್ಧೆ ಫಿಕ್ಸ್ ಎನ್ನಲಾಗುತ್ತಿದೆ.
Mangaluru: ಪುತ್ತೂರು: ರಿಕ್ಷಾ ತೊಳೆಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಇಬ್ಬರ ಸಾವು
ಅಂದಹಾಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಪ್ಪ ಡಿಕೆ ಸುರೇಶ್ ಪರ ಐಶ್ವರ್ಯ ಪ್ರಚಾರ ಮಾಡಿದ್ದರು. ಅವರನ್ನೇ ಏಕೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಲ್ಲಿಸಬಾರದು ಅಂತ ಚಿಂತನೆ ನಡೆದಿದೆ. ಹೀಗಾಗಿ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಡಿಕೆಶಿನಾ ಇಲ್ಲ ಮಗಳು ಐಶ್ವರ್ಯನಾ? ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ರಾಜಕೀಯದಲ್ಲಿ ಏನುಬೇಕಾದರೂ ನಡೆಯಲಾಗಿದೆ.
7th Pay Commission ಜಾರಿ ವಿಚಾರ – ಸಿಎಂ ಸಿದ್ದರಾಮಯ್ಯರಿಂದ ಬಂಪರ್ ಘೋಷಣೆ !!