Gruhalakshmi Scheme: ಇನ್ಮುಂದೆ ಈ ದಿನಾಂಕದಂದು ಕರೆಕ್ಟ್ ಆಗಿ ಖಾತೆಗೆ ಜಮಾ ಆಗುತ್ತೆ ಗೃಹಲಕ್ಷ್ಮೀ ದುಡ್ಡು !!

Gruhalakshmi Scheme : ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಯೋಜನೆಯಡಿ ಯಜಮಾನಿಯರಿಗೆ ಕೊಡಮಾಡುವ 2,000 ರೂ ಹಣವನ್ನು ಈ ನಿಗದಿತ ದಿನಾಂಕದೊಳಗೆ ಖಾತೆಗೆ ಜಮಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಪ್ರಮುಖವಾಗಿರುವ ಯೋಜನೆ ‘ಗೃಹಲಕ್ಷ್ಮಿ ಯೋಜನೆ'(Gruhalakshmi Scheme). ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂ ಹಣ ಜಮೆಯಾಗುತ್ತಿದೆ. ಆದರೆ ಇದಕ್ಕೆ ನಿರ್ದಿಷ್ಟವಾದ ದಿನಾಂಕ ಇರಲಿಲ್ಲ. ತಿಂಗಳಲ್ಲಿ ಯಾವಾಗ ಬೇಕು ಆವಾಗ ಜಮಾವಾಗುತ್ತಿತ್ತು. ಯಜಮಾನಿಯರು ಈ ಹಣಕ್ಕೆ ಕಾದು ಕಾದು ಸುಸ್ತಾಗುತ್ತಿದ್ದರು. ಆದರೀಗ ಸರ್ಕಾರ ಈ ಕಾಯುವಿಕೆಗೆ ಅಂತ್ಯ ಹಾಡಲು ನಿರ್ಧಾರ ಮಾಡಿದೆ. ಗೃಹಲಕ್ಷ್ಮೀ ಹಣಕ್ಕೆ ಡೇಟ್ ಫಿಕ್ಸ್ ಮಾಡಿದೆ.
ಯಾವ ದಿನ ಬರುತ್ತೆ ಗೃಹಲಕ್ಷ್ಮೀ ಹಣ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi Hebbalkar) ಅವರು ಇನ್ಮುಂದೆ ತಿಂಗಳ 21ರಿಂದ 26 ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Money) ಪ್ರತಿಯೊಬ್ಬರ ಖಾತೆಗೆ ವರ್ಗಾವಣೆ ಆಗುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂಬುದಾಗಿ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಕೆಲಸ ಮಾಡಿದರೆ ಸರಿಯಾದ ಸಮಯಕ್ಕೆ ಸಿಗುತ್ತ ಹಣ:
ಹಣವನ್ನು ಸರಿಯಾದ ಸಮಯಕ್ಕೆ ನಿಮ್ಮ ಖಾತೆಗೆ ಬರಬೇಕೆಂದರೆ ಈಗಾಗಲೇ ಇಲಾಖೆ ತಿಳಿಸಿರುವ ರೀತಿಯಲ್ಲಿ KYC ಅಪ್ಡೇಟ್ ಅನ್ನು ಸರಿಯಾದ ರೀತಿಯಲ್ಲಿ ಮಾಡಿಸಿರಬೇಕು ಇಲ್ಲವಾದಲ್ಲಿ ಹಣವನ್ನು ಸರಿಯಾದ ಸಮಯಕ್ಕೆ ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ.