Udupi: ಗರುಡ ಗ್ಯಾಂಗ್‌ ವಾರ್‌ ಆರೋಪಿಗಳಿಂದ ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ; ದೂರು ದಾಖಲು

Share the Article

Udupi: ಉಡುಪಿ ನಗರದಲ್ಲಿ ಇತ್ತೀಚೆಗೆ ದಾಳಿ ನಡೆಸಿ ಬಂಧಿತರಾಗಿರುವ ಗರುಡ ಗ್ಯಾಂಗ್‌ ವಾರ್‌ ಆರೋಪಿಗಳು ಜೈಲಿನಲ್ಲಿ ಕೂಡಾ ತಮ್ಮ ಪ್ರಕೋಪ ಮುಂದುವರಸಿದ್ದಾರೆ. ಜೈಲಿನಲ್ಲಿ ಜೈಲು ಅಧಿಕಾರಿ ಹಗೂ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೊಂದು ಉಡುಪಿ ತಾಲೂಕಿನ ಹಿರಿಯಡ್ಕ ಜಿಲ್ಲಾ ಕಾರಗೃಹದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಪಿಜನ್‌ ಕಾಲ್‌ ಸಿಸ್ಟಮ್‌ ಕರೆ ಮಾಡಲು ತಡವಾಯಿತೆಂದು ವಿಚಾರಣಾ ಕೈದಿ ಮುಹಮ್ಮದ್‌ ಆಶಿಕ್‌ ಮತ್ತು ಮಹಮ್ಮದ ಸಕ್ಲೇನ್‌ ಜಿಲ್ಲಾ ಜೈಲು ಅಧೀಕ್ಷಕ, ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ಧರಾಮ ಬಿ ಪಾಟೀಲ್‌ ಹಾಗೂ ಸಿಬ್ಬಂದಿಗಳನ್ನು ತಳ್ಳಿ ಕೊಠಡಿಯಲ್ಲಿದ್ದ ಕುರ್ಚಿಯಿಂದ ಹಲ್ಲೆಗೆ ಯತ್ನಿಸಿರುವ ಕುರಿತು ವರದಿಯಾಗಿದೆ. ಇಷ್ಟೇ ಅಲ್ಲದೇ ಅಡುಗೆ ಕೋಣೆಯಲ್ಲಿದ್ದ ಚಹಾ ಪಾತ್ರೆಯಿಂದ ಕೂಡಾ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply