Soundarya Jagadish-Pavitra Gowda: ನಿರ್ಮಾಪಕ ಸೌಂದರ್ಯ ಜಗದೀಶ್‌ ಕೊಟ್ಟ ಹಣದಲ್ಲಿ ಪವಿತ್ರಾ ಗೌಡ ಮನೆ ಖರೀದಿ ಆರೋಪ

Soundarya Jagadish-Pavitra Gowda: ಇತ್ತೀಚೆಗೆ ಉದ್ಯಮಿ, ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್‌ ಅವರ ಆತ್ಮಹತ್ಯೆ ಕೇಸ್‌ಗೆ ಸಂಬಂಧಪಟ್ಟಂತೆ ಬಿಗ್‌ ಟ್ವಿಸ್ಟ್‌ ದೊರಕಿದೆ. ಸೌಂದರ್ಯ ಜಗದೀಶ್‌ ಅವರ ಪತ್ನಿ ಕೂಡಾ ನನ್ನ ಗಂಡನ ಆತ್ಮಹತ್ಯೆಗೆ ಯದ್ಯಮ ಪಾಲುದಾರರ ಕೈವಾಡವಿದೆ ಎಂದು ಆರೋಪ ಮಾಡಿ ದೂರು ಕೂಡಾ ದಾಖಲು ಮಾಡಿದ್ದರು.

Chanakya Niti: ಈ ಅಭ್ಯಾಸಗಳಿದ್ದರೆ ನೀವು ಯಶಸ್ವಿ ವ್ಯಕ್ತಿಗಳಾಗುವುದು ಖಚಿತ ಎಂದಿದ್ದಾರೆ ಚಾಣಕ್ಯ.!

ಇದೀಗ ಈ ಕೇಸ್‌ಗೆ ಬಿಗ್‌ ಟ್ವಿಸ್ಟೊಂದು ದೊರಕಿದೆ. ಮಾಧ್ಯಮದಲ್ಲಿ ಪ್ರಸಾರವಾದ ಮಾಹಿತಿ ಪ್ರಕಾರ ಈ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾಗೌಡ ಅವರಿಗೆ ಸೌಂದರ್ಯ ಜಗದೀಶ್‌ ಅವರು ಬರೋಬ್ಬರಿ 2 ಕೋಟಿ ಹಣ ನೀಡಿರುವುದು ಬೆಳಕಿಗೆ ಬಂದಿದೆ.

ಸೌಂದರ್ಯ ಜಗದೀಶ್‌ ಅವರ ಪತ್ನಿ ಇತ್ತೀಚೆಗಷ್ಟೇ ಅವರ ಪತಿಯ ನಿಧನದ ನಂತರ ಪಾಲುದಾರರ ಮೇಲೆ ಆರೋಪ ಮಾಡಿದ್ದು, ಇದರಿಂದ ತಮಗೆ 60 ಕೋಟಿ ನಷ್ಟವಾಗಿದೆ ಎಂದು ದೂರನ್ನು ನೀಡಿದ್ದರು.

ಸೌಂದರ್ಯ ಜಗದೀಶ್‌ ದುಡ್ಡು ಕೊಟ್ಟ ಮಾರನೇ ದಿನವೇ ಪವಿತ್ರಾಗೌಡ ಮನೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ವ್ಯವಹಾರದ ಕುರಿತು ಸೌಂದರ್ಯ ಜಗದೀಶ್‌- ಪವಿತ್ರಾಗೌಡ ನಡುವೆ ಹಣದ ವ್ಯವಹಾರ ನಡೆದಿದೆ ಎನ್ನುವುದಕ್ಕೆ ದಾಖಲೆಗಳು ಮಾಧ್ಯಮದಲ್ಲಿ ಭಿತ್ತರವಾಗಿದೆ.

ಈ ಕುರಿತು ಸೌಂದರ್ಯ ಜಗದೀಶ್‌ ಅವರ ಉದ್ಯಮದ ಪಾಲುದಾರ ಸುರೇಶ್‌ ಎನ್ನುವವರು ಈ ಹಣದ ವ್ಯವಹಾರದ ದಾಖಲೆಯನ್ನು ಪೊಲೀಸರಿಗೆ ನೀಡಿದ್ದಾರೆ. ಇನ್ನು ಸೌಂದರ್ಯ ಜಗದೀಶ್‌ ಅವರ ದರ್ಶನ್‌ ಒತ್ತಡಕ್ಕೆ ಮಣಿದು ಪವಿತ್ರಾಗೌಡಗೆ ಹಣ ನೀಡಿದ್ರಾ? ಈ ಕುರಿತು ಅನುಮಾನ ವ್ಯಕ್ತವಾಗಿದೆ. ದರ್ಶನ್‌ ಒತ್ತಡದ ಅನುಮಾನದ ಕುರಿತು ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಷ್ಟಲ್ಲದೇ ಸೌಂದರ್ಯ ಜಗದೀಶ್‌ ಅವರು ನಟ ದರ್ಶನ್‌ ಸಿನಿಮಾ ನಟ ಎನ್ನುವ ಕಾರಣಕ್ಕೆ ಆತನ ಗೆಳತಿಗೆ 2 ಕೋಟಿ ಹಣ ಕೊಟ್ಟಿದ್ದಾರಾ? ಅಥವಾ ಬೇರೆ ವ್ಯವಹಾರ ಏನಾದರೂ ಇತ್ತೇ? ಈ ಕುರಿತು ತನಿಖೆ ಆಗಬೇಕಿದೆ. ಅಂದ ಹಾಗೆ ಪವಿತ್ರಾ ಗೌಡಗೆ ಸೌಂದರ್ಯ ಜಗದೀಶ್‌ ಹಣ ನೀಡಿದ ಕುರಿತು ಮಾತ್ರ ದಾಖಲೆ ದೊರಕಿರುವುದಾಗಿಯೂ, ಪವಿತ್ರಾಗೌಡ ಇಲ್ಲಿಯವರೆಗೂ ಸೌಂದರ್ಯ ಜಗದೀಶ್‌ ಅವರಿಗೆ ಹಣ ವಾಪಸ್‌ ನೀಡಿದ ಕುರಿತು ಯಾವುದೇ ದಾಖಲೆ ಲಭ್ಯವಾಗಿಲ್ಲ.

2017 ರ ನವೆಂಬರ್‌ 13 ರಂದು ಪವಿತ್ರಾಗೌಡ 1 ಕೋಟಿ ರೂ. ವರ್ಗಾವಣೆ, 2018 ರ ಜನವರಿಯಂದು ಮತ್ತೆ 1 ಕೋಟಿ ರೂ ವರ್ಗಾವಣೆಯನ್ನು ನಿರ್ಮಾಪಕ ಸೌಂದರ್ಯ ಜಗದೀಶ್‌ ಅವರು ಪವಿತ್ರಾ ಗೌಡಗೆ ವರ್ಗಾವಣೆ ಮಾಡಿದ್ದಾರೆ.

ಪವಿತ್ರಾ ಗೌಡ ಅವರು 2018 ರ ಜನವರಿ 24 ರಂದು ಮನೆ ಖರೀದಿ ಮಾಡಿದ್ದಾರೆ. ರಾಜರಾಜೇಶ್ವರಿ ನಗರದ ಕೆಂಚನಹಳ್ಳಿಯಲ್ಲಿ 1.75 ಕೋಟಿ ರೂ. ಮೌಲ್ಯದ ಮನೆಯನ್ನು ಪವಿತ್ರಾ ಖರೀದಿ ಮಾಡಿದ್ದರು. ಇದಕ್ಕೆ ಸಾಕ್ಷಿಯಾಗಿ ಸೌಂದರ್ಯ ಜಗದೀಶ್‌ ಅವರು ಪವಿತ್ರಾ ಗೌಡ ಮನೆ ಖರೀದಿ ಪತ್ರದಲ್ಲಿ ಸಹಿ ಮಾಡಿದ್ದಾರೆ. ಆದರೆ ಈ ವಿಷಯವನ್ನು ನಿರ್ಮಾಪಕ ಸೌಂದರ್ಯ ಜಗದೀಶ್‌ ಅವರು ತಮ್ಮ ಉದ್ಯಮ ಪಾಲುದಾರರಿಂದ ಮುಚ್ಚಿಟ್ಟಿದ್ದರು ಎಂಬ ಆರೋಪ ಕೂಡಾ ಕೇಳಿ ಬಂದಿದೆ.

Sonakshi Sinha Zaheer Iqbal Wedding: ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ವಿರುದ್ಧ ಪ್ರತಿಭಟನೆ

 

Leave A Reply

Your email address will not be published.