Tips for Dry Skin: ನಿಮ್ಮ ಡ್ರೈ ಸ್ಕಿನ್‌ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲಿದೆ!

Tips for Dry Skin: ಡ್ರೈ ಸ್ಕಿನ್‌ ಸಮಸ್ಯೆ ಇದ್ದವರು ತ್ವಚೆಯನ್ನು ಫ್ರೆಶ್‌ ಆಗಿರಿಸಲು ಹಲವು ಪ್ರಯತ್ನ ಮಾಡಿ ಸೋತು ಹೋಗಿದ್ದಲ್ಲಿ, ಇದೀಗ ನಿಮಗಿಲ್ಲಿ ಶಾಶ್ವತ ಪರಿಹಾರ ಒಂದು ತಿಳಿಸಲಾಗಿದೆ. ಹೌದು, ನೀವು ಇನ್ಮುಂದೆ ಪಾರ್ಲರ್ ಸುತ್ತೋದು ಬೇಕಾಗಿಲ್ಲ, ಆ ಕ್ರೀಮ್ ಈ ಕ್ರೀಮ್ ಅಂತ ಕ್ರೀಮ್ ಹಿಂದೆ ಅಲೆಯಬೇಕಾಗಿಲ್ಲ. ಜಸ್ಟ್ ಈ ಟಿಪ್ಸ್ (Tips for Dry Skin) ಫಾಲೋ ಮಾಡಿದ್ರೆ ಸಾಕು. ಆಮೇಲೆ ನೀವು ನಿಮ್ಮ ತ್ವಚೆ ನೋಡಿ ವಾವ್ ಅನ್ನುತ್ತೀರಿ ಖಂಡಿತಾ. ಬನ್ನಿ ಅಂತಹ ನೈಸರ್ಗಿಕ ಟಿಪ್ಸ್ ಯಾವುದೆಂದು ಇಲ್ಲಿ ತಿಳಿಯಿರಿ.

ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ ಅವಕಾಶ!ಕೂಡಲೇ ಅರ್ಜಿ ಸಲ್ಲಿಸಿ!

ರೋಸ್ ವಾಟರ್:

ಒಣ ಚರ್ಮಕ್ಕೆ ರೋಸ್ ವಾಟರ್ ಅತ್ಯುತ್ತಮ ಆಯ್ಕೆ ಎಂದೇ ಹೇಳಬಹುದು. ರೋಸ್ ವಾಟರ್ ತ್ವಚೆಯನ್ನು ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದು ನಮ್ಮ ತ್ವಚೆಯಲ್ಲಿನ pH ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ತ್ವಚೆಯನ್ನು ಫ್ರೆಶ್‌ ಆಗಿ ಇಡುತ್ತದೆ.

ಪಪ್ಪಾಯಿ:

ಚರ್ಮವನ್ನು ಕಾಂತಿಯುತಗೊಳಿಸುವಲ್ಲಿ ಮತ್ತು ಚರ್ಮವನ್ನು ಆರೋಗ್ಯವಾಗಿಡಲು  ಪಪ್ಪಾಯಿ ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆವಕಾಡೊ:

ಒಮೆಗಾ 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ, ಈ ಆವಕಾಡೊ ಚರ್ಮವನ್ನು ಆಳದಿಂದ ಪೋಷಿಸುತ್ತದೆ. ಅಲ್ಲದೇ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಒಣ ಚರ್ಮಕ್ಕೆ ಸಹಾಯ ಮಾಡುತ್ತೆ.

ಜೇನುತುಪ್ಪ:

ಜೇನುತುಪ್ಪವನ್ನುನೇರವಾಗಿ ಚರ್ಮಕ್ಕೆ ಹಚ್ಚುವುದರಿಂದ ನಿಮ್ಮ ಚರ್ಮವನ್ನು ಕಾಂತಿಯುತಗೊಳಿಸುತ್ತದೆ. ಮತ್ತು ಜೇನುತುಪ್ಪ ನೈಸರ್ಗಿಕವಾಗಿ ಚರ್ಮವನ್ನು ಆಳದಿಂದ ತೇವಗೊಳಿಸುತ್ತದೆ.

ತೆಂಗಿನ ಎಣ್ಣೆ:

ತೆಂಗಿನ ಎಣ್ಣೆಯು ಆರ್ಧ್ರಕ ಗುಣಗಳನ್ನು ಹೊಂದಿದೆ. ಒಣ ತ್ವಚೆ ಇರುವವರಿಗೆ ಇದು ಬಹಳ ಒಳ್ಳೆಯದು. ಏಕೆಂದರೆ ಇದು ಚರ್ಮವನ್ನು ಆಳವಾಗಿ ಪೋಷಿಸುವ ಮೂಲಕ ಚರ್ಮವನ್ನು ತೇವವಾಗಿ ಇರಿಸುತ್ತದೆ. ಸ್ನಾನದ ಮೊದಲು ಅಥವಾ ನಂತರ ನೀವು ಇದನ್ನು ಬಳಸಬಹುದು ಅಥವಾ ರಾತ್ರಿ ಮಲಗುವ ಮುನ್ನ  ತೆಂಗಿನೆಣ್ಣೆ ಹಚ್ಚಿ ಮಸಾಜ್ ಮಾಡಿ ಮಲಗಬಹುದು.

ತಿರುಪತಿಯಲ್ಲಿ ಚಂದ್ರಬಾಬು ನಾಯ್ಡು ಹವಾ ಶುರು!ತಿರುಮಲ ಭಕ್ತರಿಗೆ ಹಲವು ಗುಡ್​ ನ್ಯೂಸ್ ಕೊಟ್ಟ ​TTD!

Leave A Reply

Your email address will not be published.