Karkala Theme Park: ಪರಶರಾಮ ನಕಲಿ ಮೂರ್ತಿ, ಸರಕಾರಕ್ಕೆ ವಂಚನೆ ಆರೋಪ- ಕೃಷ್ಣ ಆರ್ಟ್ ಗ್ಯಾಲರಿ ವಿರುದ್ಧ ಪ್ರಕರಣ ದಾಖಲು

Karkala Theme Park: ಕುಂಜ ಬೆಟ್ಟದಲ್ಲಿರುವ ಉಡುಪಿ ಜಿಲ್ಲೆಯ ಅತೀ ಎತ್ತರದ ಪರಶುರಾಮನ ಮೂರ್ತಿ ಇರುವ ಥೀಂ ಪಾರ್ಕ್‌ (Karkala Theme Park) ಬಗೆಗಿನ ವಿವಾದಗಳು ಆಗಾಗ ಕೇಳಿಬರುತ್ತಿದ್ದವು. ಇದೀಗ ಕಾರ್ಕಳ ತಾಲೂಕಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ಕಂಚಿನ ಮೂರ್ತಿ ಬದಲು ಪರಶುರಾಮನ ನಕಲಿ ಮೂರ್ತಿಯನ್ನು ಸ್ಥಾಪಿಸಿ ಸರ್ಕಾರಕ್ಕೆ ಕೋಟ್ಯಂತರ ರೂ . ವಂಚಿಸಿರುವ ಬಗ್ಗೆ ಕಾರ್ಕಳ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಹೌದು, ಕಾರ್ಕಳ ತಾಲೂಕಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು, ಕೃಷ್ಣ ಆರ್ಟ್ ವರ್ಲ್ಡ್ ಸಂಸ್ಥೆಯ ಮಾಲೀಕರೊಬ್ಬರು 1.25 ಕೋಟಿ ರೂಪಾಯಿ ಪಡೆದುಕೊಂಡು ಕಾಮಗಾರಿ ನಡೆಸುತ್ತಿದ್ದರು.

Sapthami Gowda: ನನ್ನಿಂದ ತಪ್ಪಾಗಿದೆ, ಯುವನ ಮಾತು ಕೇಳಿ ಸೆಟ್ ಅಲ್ಲೇ ಅದು ಆಗೋಯ್ತು – ಸಪ್ತಮಿ ಗೌಡ ಆಡಿಯೋ ವೈರಲ್ !!

ಆದರೆ ಇದೀಗ ಕೇಂದ್ರದಿಂದ ಕಂಚಿನ ಮೂರ್ತಿಯನ್ನು ನಿರ್ಮಿಸಿಕೊಡುವಂತೆ ಆರ್ಡರ್ ಪಡೆದಿರುವ ಆರೋಪಿ ಕೃಷ್ಣ ಕಂಚಿನ ಮೂರ್ತಿಯ ಬದಲಾಗಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆಯನ್ನು ಮಾಡಿರುವುದಾಗಿ ನಲ್ಲೂರು ಗ್ರಾಮದವರಾದ ಕೃಷ್ಣ ಎಂಬವರು ದೂರಿನಲ್ಲಿ ಆರೋಪ ಮಾಡಿದ್ದಾರೆ.

RBI License: ಈ ಬ್ಯಾಂಕಿನಲ್ಲಿ ಹಣ ಇಟ್ಟವರಿಗೆ ಶಾಕಿಂಗ್ ನ್ಯೂಸ್! ಪ್ರತಿಷ್ಠಿತ ಬ್ಯಾಂಕ್ ಲೈಸೆನ್ಸ್ ರದ್ದು ಮಾಡಿದ RBI!

Leave A Reply

Your email address will not be published.