Basavangouda Patil Yatnal: ದೇಶದಲ್ಲಿರೋ 12 ಲಕ್ಷ ಎಕರೆ ವಕ್ಫ್ ಜಮೀನು ಬಡವರಿಗೆ ಹಂಚಿಕೆ ?! ಹೊಸ ಬಾಂಬ್ ಸಿಡಿಸಿದ ಯತ್ನಾಳ್

Pasavangouda Patil Yatnal: ರಾಜ್ಯದಲ್ಲಿ ಆಗುತ್ತಿರುವ ಬೆಲೆ ಏರಿಕೆ ಬಗ್ಗೆ ಭಾರೀ ವಿರೋಧ ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ (Pasavangouda Patil Yatnal) ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ದೇಶದಲ್ಲಿರೋ 12 ಲಕ್ಷ ಎಕರೆ ಜಮೀನು ಬಡವರಿಗೆ ಹಂಚಿಕೆ ಮಾಡಿ ಎಂದು ಸಲಹೆ ನೀಡಿದ್ದಾರೆ.

Tumakuru: 40 ವಯಸ್ಸಿನ ಅಂಕಲ್ ಜೊತೆ ಓಡಿಹೋದ ತುಮಕೂರು ಕಾಲೇಜು ಹುಡುಗಿ – ಬಳಿಕ ಪತ್ತೆಯಾಗಿದ್ದು ಶವವಾಗಿ !!

ಹೌದು, ಪೆಟ್ರೋಲ್, ಡಿಸೇಲ್ ದರ ಏರಿಕೆ(Peterl- Diesel Price Hike) ಖಂಡಿಸಿ ವಿಜಯಪುರನಗರದ(Vijayapura) ಹೊರವಲಯದ ಹೈವೇಯಲ್ಲಿ ಇಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಕಾರ್ಯಕರ್ತರು ಸಿಎಂ ಡಿಸಿಎಂ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆಯಲ್ಲಿ ಶಾಸಕ ಯತ್ನಾಳ್ ಮಾತನಾಡಿದ ಯತ್ನಾಳ್, ಗ್ಯಾರಂಟಿ ಯೋಜನೆ ಜಾರಿಗೆ ತಂದು ಸರ್ಕಾರದ ಖಜಾನೆ ಖಾಲಿಯಾಗಿದೆ. ಬ್ರಿಟಿಷ್ ಮಾದರಿಯಲ್ಲಿ ಉಪ್ಪಿನ ಮೇಲೆ ಕರ ವಿಧಿಸಿದಂತೆ ದರ ಏರಿಕೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನೇ ಸರಿಯಾಗಿ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ವಕ್ಫ್ ಆಸ್ತಿ(Waqf Property)ಕುರಿತು ಪ್ರಸ್ತಾಪಿಸಿದ ಯತ್ನಾಳ್, ದೇಶದಲ್ಲಿ 12 ಲಕ್ಷ ಎಕರೆ ಜಮೀನು ವಕ್ಫ್ ಆಸ್ತಿ ಇದೆ. ಇದನ್ನು‌ ಬಡವರಿಗೆ ಹಂಚಿಕೆ ಮಾಡಿ. ಇವೆಲ್ಲವನ್ನು ಮಾಜಿ ಪ್ರಧಾನಿ ದಿ.ನೆಹರೂ ಮಾಡಿದ್ದಾರೆ. ವಕ್ಫ್‌ನವರು ಇದು ನಮ್ಮ ಆಸ್ತಿ ಎಂದರೆ ನ್ಯಾಯಾಲಯಕ್ಕೆ ಹೋಗಲಾಗೊಲ್ಲ. ವಿಶೇಷ ನ್ಯಾಯಾಲಯಕ್ಕೆ ಹೋಗಬೇಕು. ಅಲ್ಲಿ ನ್ಯಾಯವಾದಿಯೂ ಮುಸ್ಲಿಂ ಇರುತ್ತಾನೆ. ಎಲ್ಲರೂ ಅವರೇ ಅಲ್ಲಿ ನಮಗೆ ನ್ಯಾಯ ಸಿಗೊಲ್ಲ. ನಮಗೆ ನೆಹರು ಮಾಡೆಲ್ ಬೇಡ, ನಮಗೆ ಮೋದಿ ಯೋಜನೆ ಬೇಕು. ವಿಜಯಪುರದಲ್ಲಿ ವಕ್ಫ್ ಆಸ್ತಿ ಕುರಿತು ಹೈಕೋರ್ಟ್‌ಗೆ ಹೋಗುತ್ತೇನೆ. ದೇಶದ 12 ಲಕ್ಷ ಎಕರೆ ವಕ್ಫ್ ಆಸ್ತಿ ಬಡವರಿಗೆ ಹೋಗಬೇಕು. ಬಡವರಿಗೆ ಮನೆ ನಿರ್ಮಾಣ ಮಾಡಲು ಬಳಕೆಯಾಗಬೇಕು ಎಂದು ಆಗ್ರಹಿಸಿದರು.

Canara Bank: ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಗುಡ್ ನ್ಯೂಸ್! ಸಿಗಲಿದೆ ಐದು ಲಕ್ಷ ಸಾಲ ಸೌಲಭ್ಯ!

 

Leave A Reply

Your email address will not be published.