H D Kumarswamy: ಸೂರಜ್ ರೇವಣ್ಣನ ಅಸಹಜ ಲೈಂಗಿಕ ಪ್ರಕರಣ – ಕೇಂದ್ರ ಸಚಿವ ಕುಮಾರಸ್ವಾಮಿ ರಿಯಾಕ್ಷನ್ ಹೀಗಿತ್ತು!!

H D Kumarswamy: ಪ್ರಜ್ವಲ್ ರೇವಣ್ಣ(Prajwal Revanna) ಬೆನ್ನಲ್ಲೇ ಅವರ ಅಣ್ಣ ಸೂರಜ್ ರೇವಣ್ಣ(Suraj Revanna) ನ ವಿರುದ್ದ ಸಲಿಂಗ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಈ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಬೆನ್ನಲ್ಲೇ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ(H D Kumarswamy)ಅವರಿಗೆ ಪ್ರಕರಣದ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯಿಸಲು ಕೇಳಿದಕ್ಕೆ ಗರಂ ಆಗಿದ್ದಾರೆ.

ರೈಲಿನ ಜನರಲ್‌ ಕೋಚ್‌ನಲ್ಲಿ ಮೂರು ಗೇಟ್‌ಗಳಿದ್ದು, ಇವು ಎಸಿ, ಸ್ಲೀಪರ್‌ಗಿಂತ ಭಿನ್ನ ಏಕಿದೆ?

ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್(Kempegowda Airport) ಬಳಿಯಲ್ಲಿ ಸುದ್ದಿಗಾರರು ಕುಮಾರಸ್ವಾಮಿ ಅವರಿಗೆ ಸೂರಜ್ ರೇವಣ್ಣನ ಪ್ರಕರಣದ ಬಗ್ಗೆ ಕೇಳಿದಂತ ಪ್ರಶ್ನೆಗೆ ಗರಂ ಆದಂತ ಅವರು, ದಯವಿಟ್ಟು ಇಂತಹ ವಿಷಯಗಳನ್ನು ನನ್ನ ಬಳಿ ಚರ್ಚೆ ಮಾಡಬೇಡಿ. ಸೂರಜ್ ರೇವಣ್ಣ ಪ್ರಕರಣದ(Suraj Revanna Case) ಬಗ್ಗೆ ಕೇಳುವ ಅವಶ್ಯಕತೆ ಏನಿದೆ.? ಅದಕ್ಕಾಗಿ ಕಾನೂನು ಇದೆ. ಅದರ ಅಡಿಯಲ್ಲಿ ಪೊಲೀಸರು ಕ್ರಮ ವಹಿಸಲಿದ್ದಾರೆ. ಯಾಕೆ ಪ್ರಕರಣ ಬರ್ತಿದೆ ಅನ್ನೋದು ಮುಂದಿನ ದಿನಗಳಲ್ಲಿ ನಿಮಗೆ ಗೊತ್ತಾಗಲಿದೆ. ಇನ್ಮುಂದೆ ನನ್ನ ಬಳಿ ಇಂತಹ ಪ್ರಶ್ನೆಗಳನ್ನು ಕೇಳಬೇಡಿ ಅಂತ ಖಾರವಾಗಿ ಹೇಳಿದ್ದಾರೆ.

ಅಲ್ಲದೆ ರಾಜ್ಯದ ಸಮಸ್ಯೆಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಮಾತ್ರ ಚರ್ಚೆ ಮಾಡಿ. ಅದರ ಅವಶ್ಯಕತೆ ಏನಿದೆ? ಕಾನೂನು ಇದೆ ಕಾನೂನಿನ ಅಡಿ ಎಲ್ಲವೂ ನಡೆಯಲಿದೆ. ಯಾಕೆ ಪ್ರಕರಣ ಬರ್ತಿದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನನ್ನ ಬಳಿ ಆ ತರಹದ ಪ್ರಶ್ನೆಗಳನ್ನ ಕೇಳಬೇಡಿ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ಮಾಜಿ ಸಚಿವ ಹೆಚ್‌ ಡಿ ರೇವಣ್ಣ(H D Revanna) ಹಿರಿಯ ಪುತ್ರ, ವಿಧಾನಪರಿಷತ್ ಸದಸ್ಯ, ಸೂರಜ್(Suraj Revanna) ನಿಂದ ಹಾಸನ(Hassan) ಜಿಲ್ಲೆ ಅರಕಲಗೂಡು ಮೂಲದ ತಮ್ಮದೇ ಪಕ್ಷದ ಜೆಡಿಎಸ್ ಕಾರ್ಯಕರ್ತನಿಗೆ ಜೂನ್ 16ರಂದು ರಾತ್ರಿ ಚನ್ನರಾಯಪಟ್ಟಣ ತಾಲೂಕಿನ ಗನ್ನಿಕಡದ ತೋಟದ ಮನೆಯಲ್ಲಿ ಸೂರಜ್, ದೌರ್ಜನ್ಯ ನಡೆಸಿರೊ ಬಗ್ಗೆ ಆರೋಪಿಸಲಾಗಿದೆ. ಬಲವಂತವಾಗಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಬಗ್ಗೆ ದೂರು ದಾಖಲಾಗಿದೆ. ಈ ವಿಲಕ್ಷಣ ಆರೋಪದಿಂದ ಮತ್ತೆ ರೇವಣ್ಣ ಕುಟುಂಬ ಮುಜುಗರಕ್ಕೀಡಾಗಿದೆ. ಹಾಸನದಲ್ಲಿ ಈ ವಿಚಾರ ಭಾರೀ ಚರ್ಚೆ ಆಗುತ್ತಿದೆ.

Jamun Fruit: ಎಚ್ಚರ! ನೇರಳೆ ಹಣ್ಣಿನ ಜೊತೆ ಈ ಪದಾರ್ಥಗಳನ್ನು ತಿನ್ನದಿರಿ!

Leave A Reply

Your email address will not be published.