Vaishnavi Gowda: ಡೀಪ್ ಫೇಕ್ ಜಾಲದಲ್ಲಿ ಸಿಕ್ಕಿಕೊಂಡ ವೈಷ್ಣವಿ ಗೌಡ! ಅಶ್ಲೀಲ ಫೋಟೋ ವೈರಲ್!

Share the Article

Vaishnavi Gowda: ಆಲಿಯಾ ಭಟ್, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ನಟಿ ಕತ್ರಿನಾ ಕೈಫ್‌, ನಟಿ ಕಾಜೋಲ್‌  ಹೀಗೆ ಹಲವು ಸೆಲೆಬ್ರೇಟಿಗಳು ಈಗಾಗಲೇ ಡೀಪ್‌ ಫೇಕ್‌ ಗೆ ಗುರಿಯಾಗಿದ್ದಾರೆ. ಅದರಲ್ಲೂ ಭಾರತೀಯರಲ್ಲಿ (indian’s) ಶೇ. 75ರಷ್ಟು ಮಂದಿ ಡೀಪ್‌ಫೇಕ್‌ (Deep Fakes) ಜಾಲಕ್ಕೆ ಸಿಕ್ಕಿದ್ದು, ಶೇಕಡಾ 22ರಷ್ಟು ಮಂದಿಗೆ ಮಾತ್ರ ಇದು ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಡೀಪ್‌ಫೇಕ್‌ಗೆ ಹೆಚ್ಚಾಗಿ ನಟಿಯರು ಒಳಗಾಗುತ್ತಿದ್ದು, ಇದೀಗ ವೈಷ್ಣವಿ ಗೌಡ ಈ ಹಿಂದೆ ಧರಿಸಿದ್ದ ಕೆಂಪು ಬಣ್ಣದ ಗೌನ್ ಬಟ್ಟೆಯ ಫೋಟೋವನ್ನು ಎಡಿಟ್‌ ಮಾಡಿರುವ ಕಿಡಿಗೇಡಿಗಳು ಫೋಟೋವನ್ನು ಹರಿಬಿಟ್ಟಿದ್ದಾರೆ.

Men Health: ಪುರುಷರು ಹಸಿ ಈರುಳ್ಳಿ ತಿಂದ್ರೆ ಈ ಶಕ್ತಿ ನಿಮ್ಮಲ್ಲಿ ಯಾವತ್ತೂ ಕಮ್ಮಿ ಆಗೋಲ್ಲ!

ಹೌದು, ಬಿಗ್ ಬಾಸ್ ಖ್ಯಾತಿ ಹಾಗೂ ಈಗ ಅಗ್ನಿಸಾಕ್ಷಿ, ಸೀತಾರಾಮ ಸೀರಿಯಲ್‌ ಖ್ಯಾತಿಯ ನಟಿ ವೈಷ್ಣವಿ ಗೌಡಗೆ (Vaishnavi Gowda) ಕಿಡಿಗೇಡಿಗಳಿಂದ ಡೀಪ್ ಫೇಕ್ ಕಾಟ ಎದುರಾಗಿದೆ. ಈ ಫೋಟೋ ದಲ್ಲಿ ವೈಷ್ಣವಿ ಅವರು ರೆಡ್‌ ಕಲರ್‌ ಡ್ರೆಸ್‌ನಲ್ಲಿರುವ ಫೋಟೊವನ್ನು ಪೋಸ್ಟ್‌ ಮಾಡಿದ್ದರು. ಕೆಲ ಕಿಡಿಗೇಡಿಗಳು ಈ ಫೋಟೊಗೆ ಬೋಲ್ಡ್ ಆಗಿ ಎಡಿಟ್ ಮಾಡಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ.

ವೈಷ್ಣವಿ ಡೀಪ್ ಫೇಕ್ ಎಡಿಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆದರೆ ಸದ್ಯ ಈ ಡೀಪ್ ಫೇಕ್ ಬಗ್ಗೆ ‘ಸೀತಾರಾಮ’ (Seetharama) ನಟಿ ವೈಷ್ಣವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Actor Darshan Case: ದರ್ಶನ್‌ ಮನೆಯಲ್ಲಿದ್ದ ಮೂರು ಬೈಕ್‌ಗಳು ಜಪ್ತಿ

Leave A Reply