Cleaning Tips: ಬಿಳಿ ಬಟ್ಟೆ ಮೇಲಿನ ಕಲೆ ತೆಗಿಯೋಕೆ ಇಲ್ಲಿದೆ ಸುಲಭ ಉಪಾಯ!

Cleaning Tips: ಬಿಳಿ ಬಣ್ಣದ ಬಟ್ಟೆ ಎಲ್ಲರಿಗೂ ಸೂಟ್ ಆಗುತ್ತೆ. ಹೌದು, ಎಲ್ಲೇ ಹೋದ್ರು ಬಿಳಿ ಬಟ್ಟೆ ಧರಿಸಿದ್ರೆ ಹೆಚ್ಚಿನವರಿಗೆ ಒಂತರಾ ಕಂಫರ್ಟ್ ಫೀಲ್ ಆಗುತ್ತೆ. ಆದ್ರೆ ಏನ್ ಮಾಡೋದು ಬಿಳಿ ಬಣ್ಣದ ಬಟ್ಟೆ ಒಗೆಯೋದೆ ಒಂದು ಸಾಹಸ. ಅದರಲ್ಲೂ ಸಣ್ಣ ಕಲೆ ಆದ್ರೆ ಅಷ್ಟೇ. ಆ ಬಟ್ಟೆ ಕಲೆ ತೊಳೆಯಲು ಆಗಲ್ಲ ಅನ್ನೋರೆ ಹೆಚ್ಚು. ಆದ್ರೆ ಇನ್ಮೇಲೆ  ಬಿಳಿ ಬಟ್ಟೆಯಲ್ಲಿ ಕಲೆಯೇನಾದ್ರೂ ಇದ್ರೆ ಟೆನ್ಶನ್ ಬೇಡ, ಈ ವಸ್ತುಗಳಿಂದ ತೊಳೆದರೆ ಸಾಕು (Cleaning Tips).

ಹೌದು , ಬಿಳಿ ಬಟ್ಟೆ ಕಲೆ ತೊಳೆಯಲು ಅರ್ಧ ಕಪ್ ನೀರಿಗೆ ಅರ್ಧ ಕಪ್ ವಿನೆಗರ್ ಮಿಶ್ರಣ ಮಾಡಿ ಬಿಳಿ ಬಟ್ಟೆಯ ಮೇಲೆ ಇರುವ ಕಲೆಗೆ ಸ್ಪ್ರೇ ಮಾಡಿ, ಸ್ವಲ್ಪ ಸಮಯ ಹಾಗೆ ಬಿಟ್ಟು, ನಂತರ ಅದೇ ನೀರಿನಿಂದ ತೊಳೆದರೆ ಕಲೆ ಬಿಡುತ್ತದೆ.

ಇನ್ನು ಬಿಳಿ ಬಟ್ಟೆ ಮೇಲಿನ ಕಲೆಯನ್ನು ತೆಗೆದು ಹಾಕಲು ನೀರಿಗೆ ಅಡುಗೆ ಸೋಡಾ ಸೇರಿಸಿ, ಕಲೆಯಾದ ಬಟ್ಟೆಯನ್ನು ಆ ನೀರಿನಲ್ಲಿ ನೆನೆಸಿಡಬೇಕು. ಸ್ವಲ್ಪ ಸಮಯದ ಬಳಿಕ ಬಟ್ಟೆಯನ್ನು ತೊಳೆದರೆ ಕಲೆಯೂ ಹೋಗುತ್ತದೆ.

ಬಿಳಿ ಬಟ್ಟೆಯಲ್ಲಿ ಕಲೆಯಿದ್ದರೆ ಆ ಜಾಗಕ್ಕೆ ನಿಂಬೆರಸ ಹಾಕಿ ಉಪ್ಪು ಮತ್ತು ಸೋಪಿನಿಂದ ಚೆನ್ನಾಗಿ ತೊಳೆದರೆ ಕಲೆಯೂ ಇಲ್ಲದಂತಾಗುತ್ತದೆ.

Delhi Bride Dies: ತನ್ನ ಮದುವೆಯಲ್ಲಿ ಡ್ಯಾನ್ಸ್‌ ಮಾಡುತ್ತಿರುವಾಗಲೇ ಸಾವು ಕಂಡ ವಧು

ಬಿಳಿ ಬಟ್ಟೆಯಲ್ಲಿ ಕಲೆಯಿದ್ದರೆ ಸ್ವಲ್ಪ ಬಿಸಿ ನೀರನ್ನು ಆ ಜಾಗಕ್ಕೆ ಹಾಕಿ, ಡಿರ್ಟಜೆಂಟ್‌ ನಿಂದ ಉಜ್ಜಿ ಕಲೆಯನ್ನು ತೆಗೆದು ಹಾಕಬಹುದು.

ಅಥವಾ ಬಿಳಿ ಬಟ್ಟೆ ಮೇಲಿನ ಕಲೆ ಮೇಲೆ ಟೂತ್ಪೇಸ್ಟ್ ಅನ್ವಯಿಸಿ, ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆ ಬಿಡಬೇಕು. ಆ ಬಳಿಕ ಡಿಟೆರ್ಜಂಟ್ ಬಳಸಿ ಸ್ವಚ್ಛಗೊಳಿಸಿದರೆ ಕಲೆ ಉಳಿಯುವುದಿಲ್ಲ.

ಇನ್ನು ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಉಜ್ಜುವುದರಿಂದ ಬಿಳಿ ಬಟ್ಟೆ ಮೇಲಿನ ಕಲೆಯೂ ಮಾಯವಾಗುತ್ತೆ.

ಅಯೋಧ್ಯೆಯ ರಾಮಮಂದಿರದಲ್ಲಿ ಗುಂಡಿನ ದಾಳಿ ; ಗುಂಡಿಗೆ ಬಲಿಯಾದ SSF ಜವಾನ

 

Leave A Reply

Your email address will not be published.