Central Bank of India Recruitment 2024: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಭರ್ಜರಿ ಉದ್ಯೋಗಾವಕಾಶ, 10 ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

CBI Recruitment 2024: ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ (Central Bank of India Recruitment 2024) ಒಂದು ಇಲ್ಲಿದೆ. ಹೌದು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (Central Bank of India) ಸಫಾಯಿ ಕರ್ಮಚಾರಿ ಹುದ್ದೆಗಳಿಗೆ (Safai Karmachari Cum Sub Staff ) ನೇಮಕಾತಿ ಪ್ರಕ್ರಿಯೆ ಜೂನ್ 21 ರಿಂದ ಮತ್ತೊಮ್ಮೆ ಪ್ರಾರಂಭವಾಗಲಿದ್ದು, 10 ನೇ ತರಗತಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಲ್ಲದೇ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಭರ್ತಿ ಮಾಡಿದ ನಮೂನೆಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಬೌಗೆನ್ವಿಲ್ಲಾ ಹೂವು ನಿಮ್ಮ ಆರೋಗ್ಯ ಕಾಪಾಡುತ್ತೆ! ಇಲ್ಲಿದೆ ಇದರ ಹಲವು ಪ್ರಯೋಜನ!

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (Central Bank of India) ಸಫಾಯಿ ಕರ್ಮಚಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, 18 ವರ್ಷದಿಂದ 26 ವರ್ಷಗಳ ಒಳಗಿದ್ದು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ centralbankofindia.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಧಿಕೃತ ಸೂಚನೆಯ ಪ್ರಕಾರ, ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ, ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ ಜೂನ್ 27, 2024 ಆಗಿರುತ್ತದೆ. ಅರ್ಜಿ ಶುಲ್ಕ – 850 ರೂ.

ಎಸ್ಸಿ, ಎಸ್ಟಿ, ದಿವ್ಯಾಂಗ – 175 ರೂ. ಆಗಿದೆ.

ರಾಜ್ಯವಾರು ಹುದ್ದೆಗಳ ವಿವರ: ಗುಜರಾತ್‌ನಲ್ಲಿ 76

ಮಧ್ಯಪ್ರದೇಶದಲ್ಲಿ 24

ಛತ್ತೀಸ್‌ಗಢದಲ್ಲಿ 14

ದೆಹಲಿಯಲ್ಲಿ 21

ರಾಜಸ್ಥಾನದಲ್ಲಿ 55

 ಒಡಿಶಾದಲ್ಲಿ 2

 ಉತ್ತರ ಪ್ರದೇಶದಲ್ಲಿ 78

ಮಹಾರಾಷ್ಟ್ರದಲ್ಲಿ 118

 ಬಿಹಾರದಲ್ಲಿ 76

ಜಾರ್ಖಂಡ್‌ನಲ್ಲಿ 20

ಅಭ್ಯರ್ಥಿ ಯನ್ನು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆಯ ಆಧಾರದಲ್ಲಿ ನೇಮಿಸಲಾಗುತ್ತದೆ.

ಇನ್ನು ಪ್ರತಿ ಅಭ್ಯರ್ಥಿಯು ಆನ್‌ಲೈನ್ ಪರೀಕ್ಷೆಯ ಪ್ರತಿಯೊಂದು ವಿಷಯದಲ್ಲೂ ಕನಿಷ್ಠ ಅಂಕಗಳನ್ನು (ಕಟ್-ಆಫ್) ಪಡೆಯಬೇಕು ಮತ್ತು ಸ್ಥಳೀಯ ಭಾಷಾ ಪರೀಕ್ಷೆಗೆ ಶಾರ್ಟ್‌ಲಿಸ್ಟ್ ಮಾಡಲು ಕನಿಷ್ಠ ಒಟ್ಟು ಅಂಕಗಳನ್ನು ಪಡೆಯಬೇಕು. ಆನ್‌ಲೈನ್ ಪರೀಕ್ಷೆಗೆ ನಿಗದಿಪಡಿಸಲಾದ ಒಟ್ಟು ಅಂಕಗಳು 70 ಮತ್ತು ಸ್ಥಳೀಯ ಭಾಷಾ ಪರೀಕ್ಷೆಗೆ 30 ಆಗಿರುತ್ತದೆ.

ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ಐಬಿಪಿಎಸ್ ನಡೆಸುತ್ತದೆ. ಇದು 90 ನಿಮಿಷಗಳವರೆಗೆ ಇರುತ್ತದೆ. ಇಂಗ್ಲಿಷ್‌ನಿಂದ 10 ಪ್ರಶ್ನೆಗಳು, ಸಾಮಾನ್ಯ ಜ್ಞಾನ 20, ಪ್ರಾಥಮಿಕ ಅಂಕಗಣಿತದಿಂದ 20, ಸೈಕೋಮೆಟ್ರಿಕ್ ಪರೀಕ್ಷೆಯಿಂದ 20 (ತಾರ್ಕಿಕ) ಅಂದರೆ ಒಟ್ಟು 70 ಅಂಕಗಳಿರುತ್ತವೆ. ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಪರೀಕ್ಷೆಯನ್ನು ಹೊಂದಿರುತ್ತಾರೆ (ಅವರು ಅರ್ಜಿ ಸಲ್ಲಿಸುವ ರಾಜ್ಯದ) ಇದು 30 ಅಂಕಗಳಾಗಿರುತ್ತದೆ.

ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಬ್ಯಾಂಕ್ ತರಬೇತಿಯನ್ನು ನೀಡುತ್ತದೆ.

ಪುರುಷರೆ, ಲೈಂಗಿಕ ಸಾಮರ್ಥ್ಯ ಹೆಚ್ಚಾಗಬೇಕೆ ?! ಇದೊಂದು ಹಣ್ಣು ತಿನ್ನಿ ಸಾಕು !!

Leave A Reply

Your email address will not be published.