BS Yediyurappa: ಬಿಎಸ್‌ ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್‌ ಆದೇಶ

BS Yediyurappa: ಬಿಎಸ್‌ವೈ (82 ವರ್ಷ) ಅವರ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಈ ಪ್ರಕರಣ ರದ್ದು ಕೋರಿ ಅರ್ಜಿ ವಿಚಾರಣೆ ಇಂದು ನಡೆದಿದ್ದು, ಮಹತ್ವದ ತೀರ್ಪೊಂದನ್ನು ಕೋರ್ಟ್‌ ನೀಡಿದೆ. ಪೋಕ್ಸೋ ಕೇಸ್‌ನಲ್ಲಿ ಬಿಎಸ್‌ವೈ ಗೆ ಬಿಗ್‌ ರಿಲೀಫ್‌ ನೀಡಿದ್ದು, ಬಿಎಸ್‌ ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್‌ ಆದೇಶ ನೀಡಿದೆ. ಸೋಮವಾರ ವಿಚಾರಣೆಗೆ ಹಾಜರಾಗಲು ಬಿಎಸ್‌ವೈಗೆ ಹೈಕೋರ್ಟ್‌ ಆದೇಶ ನೀಡಿದೆ. ಮಧ್ಯಂತರ ತೀರ್ಪನ್ನು ಹೈಕೋರ್ಟ್‌ ನೀಡಿದೆ.

ಬಿಎಸ್‌ವೈ ಪರ ವಕೀಲ ಸಿವಿ ನಾಗೇಶ್‌ ಅವರು ವಾದ ಮಾಡಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಸೆಕ್ಷನ್‌ 8 ರ ಅಡಿಯಲ್ಲಿ ಕೇಸು ದಾಖಲಾಗಿದೆ. ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ. ಕೇಸು ರದ್ದು ಕೋರಿ ಬಿಎಸ್‌ವೈ ಅರ್ಜಿ ಸಲ್ಲಿಸಿದ್ದ ವಿಚಾರಣೆ ನಡೆದಿದ್ದು, ಹೈಕೋರ್ಟ್‌ನಲ್ಲಿ ಪೋಕ್ಸೋ ಕೇಸ್‌ ಬಗ್ಗೆ ವಾದ ಪ್ರತಿವಾದ ನಡೆದಿದ್ದು, ಎಫ್‌ಐಆರ್‌ ನಂತರ ತನಿಖೆ ಯಾವ ಪ್ರಾರಂಭವಾಯಿತು ಎಂದು ಹೈಕೋರ್ಟ್‌ ಕೇಳಿದ ಪ್ರಶ್ನೆಗೆ, ಮಾ.14 ರ ಎಫ್‌ಐಆರ್‌ ನಂತರ ಎ.12 ರಂದು ನೋಟಿಸ್‌ ನೀಡಿದ್ದಾರೆ. ಅಲ್ಲಿಯವರೆಗೆ ಪೊಲೀಸರು ಏನು ಮಾಡಿದರೆಂಬುದು ತಿಳಿದಿಲ್ಲ. ಜೂನ್ 12 ರಂದು ಹಾಜರಾಗುವಂತೆ ಬಿಎಸ್‌ವೈ ಗೆ ನೋಟಿಸ್‌ ನೀಡಲಾಗಿತ್ತು. ಜೂ.17 ರಂದು ಹಾಜರಾಗುವುದಾಗಿ ಪೊಲೀಸರಿಗೆ ಉತ್ತರ ನೀಡಿದ್ದಾರೆ. ಎಲ್ಲೂ ಅಸಹಾಕರ ತೋರಿಸಿಲ್ಲ ಎಂದು ಬಿಎಸ್‌ವೈ ಪರ ವಕೀಲ ಸಿವಿ ನಾಗೇಶ್‌ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಬಿಎಸ್‌ ಯಡಿಯೂರಪ್ಪ ಬಂಧನ ಏಕೆ ಬೇಕಾಗಿದೆ? ಎಂದು ಹೈಕೋರ್ಟ್‌ ಪ್ರಶ್ನೆ ಮಾಡಿದೆ. ಅವರು ತನಿಖೆಗೆ ಬರಲ್ಲ ಎಂದು ನೀವು ಹೇಗೆ ಭಾವಿಸಿದ್ದೀರಿ? ಅವರು ಬರಲ್ಲ ಎಂದು ಹೇಳಿಲ್ಲ ಅಲ್ವಾ ಎಂದು ಹೈಕೋರ್ಟ್‌ ಪ್ರಶ್ನೆ ಮಾಡಿದ್ದಾರೆ.

ನೀವೇ ಬಂಧಿಸಲು ಅವಕಾಶವಿರುವಾಗ ವಾರೆಂಟ್‌ ಯಾಕೆ ಬೇಕಿತ್ತು ಎಂದು ಹೈಕೋರ್ಟ್‌ ಪ್ರಶ್ನೆ ಮಾಡಿದೆ. ಎಜಿ ಶಶಿಕಿರಣ್‌ಗೆ ಶೆಟ್ಟಿ ಹೈಕೋರ್ಟ್‌ ಪ್ರಶ್ನೆ ಮಾಡಿದ್ದಾರೆ. ಹೊರ ರಾಜ್ಯದಲ್ಲಿದ್ದರಿಂದ ವಾರೆಂಟ್‌ ಬೇಕಾಗಿತ್ತು ಎಂದು ಹೇಳಿದ್ದಾರೆ.

41a ನೋಟಿಸ್‌ ನೀಡಿದ ನಂತರ ಹಾಜರಾದವರನ್ನು ಬಂಧಿಸುವಂತಿಲ್ಲ. ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘನೆ ನ್ಯಾಯಾಂಗ ನಿಂದನೆಯಾಗಲಿದೆ ಎಂದು ಸಿವಿ ನಾಗೇಶ್‌ ವಾದ ಮಂಡಿಸಿದ್ದಾರೆ.

ಹಾಗಿದ್ದರೆ ಸೋಮವಾರ ವಿಚಾರಣೆಗೆ ಹಾಜರಾಗಲು ಸಿದ್ದರಿದ್ದೀರಾ ? ಬಿಎಸ್‌ವೈ ಪರ ವಕೀಲರಿಗೆ ಹೈಕೋರ್ಟ್‌ ಪ್ರಶ್ನೆ ಮಾಡಿದ್ದು, ಹೈಕೋರ್ಟ್ ಆದೇಶ ಪಾಲಿಸಲಾಗುವುದು ಎಂದು ಸಿ. ವಿ. ನಾಗೇಶ್ ಹೇಳಿದ್ದಾರೆ.
ಯಾರನ್ನು ತೃಪ್ತಿ ಪಡಿಸಲು ಬಂಧಿಸಲು ಹೊರಟಿದ್ದೀರಿ? ಬಂಧಿಸಲೇಬೇಕೆಂದು ಉದ್ದೇಶದಿಂದ ತನಿಖೆ ನಡೆಯಬಾರದಲ್ಲವೇ?-ಜಡ್ಜ್‌ ಪ್ರಶ್ನೆ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ; ಅತ್ಯಾಚಾರ ಸಂತ್ರಸ್ತ ಅಪ್ರಾಪ್ತ ಬಾಲಕಿ ಮತ್ತು ಆಕೆಯ ಸಂಬಂಧಿಕರು  ಕಾನೂನಾತ್ಮಕ ನೆರವು ಕೇಳಲು ಬಿ ಎಸ್‌ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದ, ಸಂದರ್ಭದಲ್ಲಿ ಬಾಲಕಿಯನ್ನು ಮಾತ್ರ ಕೋಣೆಯೊಳಗೆ ಕರೆದುಕೊಂಡು ಹೋಗಿ ಮಾಹಿತಿ ಪಡೆಯುವುದಾಗಿ ಹೇಳಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿತ್ತು.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣ; ಬಚಾವ್ ಆಗಲು ದರ್ಶನ್ ನಿಂದ ಕೋಟಿ ಕೋಟಿ ಆಮಿಷ

ಈ ಘಟನೆಗೆ ಸಂಬಂಧಪಟ್ಟಂತೆ ಯಡಿಯೂರಪ್ಪ ಅವರ ಮೇಲೆ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ವೊಂದು ಮಾರ್ಚ್‌ ತಿಂಗಳಲ್ಲಿ ದಾಖಲಾಗಿತ್ತು. ನಂತರ ರಾಜ್ಯ ಸರಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ಪೊಲೀಸರು ನೋಟಿಸನ್ನು ಎರಡು ಬಾರಿ ನೀಡಿದರೂ ಹಾಜರಾಗದ ಕಾರಣ ಯಡಿಯೂರಪ್ಪ ಬಂಧನ ಮಾಡಲೆಂದು ಕೋರ್ಟ್‌ ಮೊರೆ ಹೋಗಿದ್ದರು.

ಆದರೆ ಯಡಿಯೂರಪ್ಪ ಅವರು ಚುನಾವಣೆಯ ಕಾರಣ ಹೇಳಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಹೇಳಿ, ಒಂದು ವಾರಗಳ ಕಾಲಾವಕಾಶವನ್ನು ಕೇಳಿದ್ದರು. ಇದಕ್ಕೆ ಸಿಐಡಿ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಕಾಲಾವಕಾಶ ಕೇಳಿದ್ದ ಯಡಿಯೂರಪ್ಪ ಅವರು ನಂತರ ಬಂಧನ ಸಾಧ್ಯತೆಯಿರುವುದರಿಂದ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಮುಂದೆ ಸಿಐಡಿ ಪರ ವಕೀಲರು ಸಮಪರ್ಕ ವಾದ ಮಾಡಿದ್ದರಿಂದ ಯಡಿಯೂರಪ್ಪ ಬಂಧನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು.

ಶೇ.90 ರಷ್ಟು ತನಿಖೆ ಮುಗಿದಿದ್ದು, ಯಡಿಯೂರಪ್ಪ ಅವರ ವಿಚಾರಣೆ ಮಾತ್ರ ಬಾಕಿ ಇದೆ ಎಂದು ಹೇಳಿದ್ದು, ಅವರು ನೋಟಿಸ್‌ ನೀಡಿದರೂ ಹಾಜರಾಗುತ್ತಿಲ್ಲ , ಹಾಗಾಗಿ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಬೇಕೆಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯಾದ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿತ್ತು.

Crime News: ಮಾತು ಬಾರದ 3 ವರ್ಷದ ಬುದ್ಧಿಮಾಂದ್ಯ ಮಗುವನ್ನು ಕತ್ತುಹಿಸುಕಿ ಕೊಂದ ತಾಯಿ

Leave A Reply

Your email address will not be published.