Pradeep Eshwaran: ಡಾ. ಸುಧಾಕರ್ ಗೆ ಭರ್ಜರಿ ಗೆಲುವು – ರಾಜೀನಾಮೆ ಕುರಿತು ಸ್ಪಷ್ಟೀಕರಣ ನೀಡಿದ ಪ್ರದೀಪ್ ಈಶ್ವರನ್ !!

Pradeep Eshwaran: ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ(BJP) ಅಭ್ಯರ್ಥಿಯಾಗಿ ಡಾ. ಸುಧಾಕರ್(Dr Sudhakar) ಅವರು ಗೆದ್ದಿದ್ದಕ್ಕೆ ರಾಜಿನಾಮೆ ಕೊಡುವ ವಿಚಾರವಾಗಿ ಶಾಸಕ ಪ್ರದೀಪ್ ಈಶ್ವರನ್(Pradeep Eshwaran) ಅವರು ಇದೀಗ ಮೊದಲ ಬಾರಿಗೆ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಲೋಕಸಭಾ ಚುನಾವಣೆಯಲ್ಲಿ(Parliament election) ಚುನಾವಣಾ ಪ್ರಚಾರದ ವೇಳೆ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದ್ದು ಚಿಕ್ಕಬಳ್ಳಾಪುರ (Chikkaballapura) ಲೋಕಸಭೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ. ಸುಧಾಕರ್ ಅವರು ಚಿಕ್ಕಬಳ್ಳಾಪುರ ಅಸೆಂಬ್ಲಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯಗಿಂತ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಒಂದು ಮತವನ್ನು ಹೆಚ್ಚಿಗೆ ಪಡೆದರೆ ರಾಜೀನಾಮೆ ನೀಡುವುದಾಗಿ ಚಿಕ್ಕಬಳ್ಳಾಪುರ ಶಾಸಕ, ಮಾತಿನ ಮಲ್ಲ, ಡೈಲಾಗ್ ಕಿಂಗ್ ಪ್ರದೀಪ್ ಈಶ್ವರನ್ ಅವರು ಹೇಳಿದ್ದರು. ಅಂತೆಯೇ ಸುಧಾಕರ್ ಅವರು ಭರ್ಜರಿ ಅಂತರದಿಂದ ಗೆಲುವು ಸಾಧಿಸಿದರು. ಆದರೆ ಪ್ರದೀಪ್ ಮಾತ್ರ ರಾಜಿನಾಮೆ ನೀಡಲಿಲ್ಲ.

Pavitra Gowda: ಕೊಲೆ ಪ್ರಕರಣ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಪವಿತ್ರ ಗೌಡ !!

ಇದು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಟೀಕೆಯಾಯಿತು. ಮೀಡಿಯಾಗಳು ಕೂಡ ಪ್ರದೀಪ್ ಅವರು ಕೊಟ್ಟ ಮಾತಿಗೆ ತಪ್ಪುವವರಲ್ಲ, ರಾಜೀನಾಮೆ ಕೊಡುತ್ತಾರೆ ಎಂದು ಕಾಲೆಳೆದವು. ಆದರೆ ರಾಜಿನಾಮೆ ಬಿಡಿ, ಪ್ರದೀಪ್ ಅವರು ಚುನಾವಣೆ ಬಳಿಕ ಯಾವ ಪತ್ರಿಕಾ ಹೇಳಿಕೆಯಾಗಲಿ, ಬಹಿರಂಗ ಹೇಳಿಕೆಯಾಗಲಿ ನೀಡಲಿಲ್ಲ. ಆದರೀಗ ಮೊದಲ ಸಲ ಕಾಣಿಸಿಕೊಂಡು ಈ ಬಗ್ಗೆ ಮಾತನಾಡಿದ್ದಾರೆ.

‘ನಾನು ಸವಾಲು ಹಾಕಿದ್ದು ನಿಜ, ನನ್ನ ಮಾತಿಗೆ ಈಗಲೂ ನಿಂತಿದ್ದೇನೆ. ಆದರೆ, ನನ್ನ ಸವಾಲನ್ನು ಅವರು ಸ್ವೀಕರಿಸಲಿಲ್ಲ, ಹಾಗಾಗಿ ರಾಜೀನಾಮೆ ನೀಡುವ ಪ್ರಶ್ನೆ ಉದ್ಭವವಾಗುವುದಿಲ್ಲ.
ಚುನಾವಣೆ ಎಂದ ಮೇಲೆ ಸೋಲುಗೆಲುವು ಇದ್ದಿದ್ದೇ, ಆದರೆ 77 ಸಾವಿರ ಜನ ಮತದಾರರು ಚಿಕ್ಕಬಳ್ಳಾಪುರ ಅಸೆಂಬ್ಲಿ ವ್ಯಾಪ್ತಿಯಲ್ಲಿ ನಮಗೆ ಮತ ಹಾಕಿದ್ದಾರೆ. ಇದನ್ನು ತುಂಬು ಹೃದಯದಿಂದ ಪ್ರಶಂಸಿಸುತ್ತೇನೆ ” ಎಂದು ಪ್ರದೀಪ್ ಹೇಳಿದ್ದಾರೆ.

ಅಲ್ಲದೆ ‘ಚಿಕ್ಕಬಳ್ಳಾಪುರ (Chikkaballapura) ಲೋಕಸಭಾ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ. ಬಿಜೆಪಿಯವರು ನಾನು ರಾಜೀನಾಮೆ ಕೊಡಬಹುದು ಅಂತ ಕಾಯ್ತಿದ್ದಾರೆ. ನಾನು ರಾಜೀನಾಮೆ ಕೊಟ್ರೆ ನೆಮ್ಮದಿಯಾಗಿ ಇರಬಹುದು ಅಂದುಕೊಂಡಿದ್ದಾರೆ. ಆದರೆ ಅವರಿಗೆ ನಾನು ಆ ನೆಮ್ಮದಿ ಕೊಡಲ್ಲ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

ಸುಧಾಕರ್ ಗೆದ್ದದ್ದು ಎಷ್ಟು ಅಂತರ ಮತಗಳಿಂದ?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಧಾಕರ್‌ ಅವರು 1,63,460 ಮತಗಳ ಅಂತರದಿಂದ ಜಯಗಳಿಸಿದ್ದರು. ಸುಧಾಕರ್‌ ಅವರಿಗೆ 8,22,619 ಮತಗಳು ಬಂದರೆ ರಕ್ಷಾ ರಾಮಯ್ಯ ಅವರಿಗೆ 6,59,159 ಮತಗಳು ಬಿದ್ದಿದ್ದವು.

PM Awas Yojana: ಕೇಂದ್ರ ಸರ್ಕಾರದಿಂದ ಉಚಿತವಾಗಿ ಸಿಗುವ ಮನೆಗೆ ಹೀಗೆ ಅರ್ಜಿ ಹಾಕಿ – ಬೇಗ ಹೊಸ ಮನೆ ಪಡೆಯಿರಿ !!

2 Comments
  1. Moishy Kwasnik says

    Moishy Kwasnik

  2. Ciarra Varming says

    Ciarra Varming

Leave A Reply

Your email address will not be published.