Puttur: ಪುತ್ತೂರು; ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮಾವನಿಂದ ಚೂರಿ ಇರಿತ

Puttur: ವ್ಯಕ್ತಿಯೊಬ್ಬರಿಗೆ ಜೂ.13 ರಂದು ಪುತ್ತೂರು ಕೋರ್ಟ್‌ ರಸ್ತೆಯ ದೈಯ್ಯರ ಅಂಗಡಿಯ ಬಳಿ ಚೂರಿ ಇರಿತದ ಘಟನೆಯೊಂದು ನಡೆದಿದೆ.

ಮಹಿಳೆಯರಿಗೆ ಹುಟ್ಟಿನಿಂದಲೇ ಕೆಲವು ಕೆಟ್ಟ ಬುದ್ಧಿ ಅಂಟಿಕೊಳ್ಳುತ್ತದೆ!

ಪುತ್ತೂರಿನ ಕೋರ್ಟ್‌ ರಸ್ತೆಯಲ್ಲಿ ಪಾರ್ಕಿಂಗ್‌ ವಿಷಯದಲ್ಲಿ ಗಲಾಟೆ ನಡೆದು ನಟಿ ಅನುಷ್ಕಾ ಶೆಟ್ಟಿಯ ಮಾವ ಉರಮಾಲು ಗುಣಶೇಖರ್‌ ಶೆಟ್ಟಿಯವರು ಸದಾಶಿವ ಪೈಗೆ ಚೂರಿ ಇರಿ ಮಾಡಿದ್ದಾರೆ.

ಗುಣಕರ ಶೆಟ್ಟಿ ಮತ್ತು ಸದಾಶಿವ ಪೈ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ದರ್ಬೆ ನಿವಾಸಿ ಸದಾಶಿವ ಪೈ ಅವರು ಚೂರಿ ಇರಿತಕ್ಕೊಳಗಾಗಿದ್ದಾರೆ.

ವಾಹನ ಪಾರ್ಕಿಂಗ್‌ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ಈ ಚೂರಿ ಇರಿತ ಆಗಿದೆ. ಪುತ್ತೂರಿನ ಮಹಾವೀರ ಶೆಟ್ಟಿ ಆಸ್ಪತ್ರೆಗೆ ಸದಾಶಿವ ಪೈ ಅವರನ್ನು ದಾಖಲು ಮಾಡಲಾಗಿದ್ದು, ಸದಾಶಿವ ಪೈ ಅವರ ಬಲಗೈಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಗುಣಕರಶೆಟ್ಟಿಯವರ ತಲೆಗೆ ಸದಾಶಿವ ಪೈ ಅವರು ತಲೆಗೆ ಹೊಡೆದಿದ್ದಾರೆ ಎಂದು ವರದಿಯಾಗಿದೆ.

ಇವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.

 

ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಅಪ್ಡೇಟ್‌ ಆಗ್ತಿದೆ.

Human finger found in ice cream : ಆನ್ಲೈನಲ್ಲಿ ಆರ್ಡರ್ ಮಾಡಿ ತರಿಸಿದ ಐಸ್ಕ್ರೀಮ್ ನಲ್ಲಿ ಮನುಷ್ಯನ ಬೆರಳು ಪತ್ತೆ !!

Leave A Reply

Your email address will not be published.