Mangaluru/Surathkal: ಪ್ರಥಮ ಪಿಯುಸಿಯ ಮಕ್ಕಳ ಪೋಷಕರಿಗೆ ನಕಲಿ ಕರೆ, ಹಣಕ್ಕೆ ಬೇಡಿಕೆ
Mangaluru/Surathkal: ಕೆಲವು ಪೋಷಕರಿಗೆ ಪೊಲೀಸ್ ಅಧಿಕಾರಿಗಳೆಂದು ನಕಲಿ ವ್ಯಕ್ತಿಗಳು ಕರೆ ಮಾಡಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆಯೊಂದು ನಡೆದಿದೆ.
ಸುರತ್ಕಲ್ ಮತ್ತು ಮಂಗಳೂರಿನ ಕಾಲೇಜುಗಳ ಕೆಲವು ಪೋಷಕರಿಗೆ ಮಂಗಳವಾರ ಮಧ್ಯಾಹ್ನ ಈ ರೀತಿ ಅಪರಿಚಿತ ವ್ಯಕ್ತಿಗಳು ಕರೆ ಮಾಡಿದ್ದು, ನಿಮ್ಮ ಮಕ್ಕಳನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದೊಯ್ಯುತ್ತಿದ್ದೇವೆ. ಬಿಡುಗಡೆ ಮಾಡಬೇಕಾದರೆ ಐದು ಲಕ್ಷ ರೂ. ನೀಡಿ ಎಂದು ಹೇಳಿದ್ದಾರೆ.
ಅಲ್ಲದೆ ನಿಮ್ಮ ಮಕ್ಕಳು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದಾರೆ ಎಂದು ಹೇಳಿ ಕರೆ ಮಾಡಿದ್ದಾರೆ. ಇದನ್ನು ನಂಬಿದ ಕೆಲವು ಪೋಷಕರು ಆತಂಕಕೆ ಒಳಗಾಗಿದ್ದರು. ನಂತರ ಕೆಲವರು ಕಾಲೇಜಿಗೆ ಕರೆ ಮಾಡಿ ವಿಚಾರಿಸಿದರೆ ಕೆಲವರು ನೇರವಾಗಿ ಕಾಲೇಜಿಗೆ ಹೋಗಿದ್ದಾರೆ. ಅಲ್ಲಿ ವಿಚಾರಣೆ ಮಾಡಿದಾಗ ಇದು ನಕಲಿ ಕರೆ ಎಂದು ಗೊತ್ತಾಗಿದೆ.
H D Kumarswamy: ಅಧಿಕಾರ ಸ್ವೀಕರಿಸುತ್ತಿದ್ದಂತೆ ಕುಮಾರಸ್ವಾಮಿಗೆ ಪಂಚ ಪ್ರಶ್ನೆ ಕೇಳಿದ ಕಾಂಗ್ರೆಸ್ !! ಏನದು ?
ಪ್ರಥಮ ಪಿಯುಸಿ ಮಕ್ಕಳ ಪೋಷಕರಿಗೆ ಈ ಕರೆ ಬಂದಿದೆ. ಹಿಂದಿ ಭಾಷೆಯಲ್ಲಿ ಕರೆ ಮಾಡಿದವರು ಮಾತನಾಡಿದ್ದರು ಎಂದು ವರದಿಯಾಗಿದೆ.
923354533015, 48699532 787 ಈ ಸಂಖ್ಯೆಗಳಿಂದ ಕರೆ ಬಂದಿದೆ. ಟ್ರೂಕಾಲರ್‌ನಲ್ಲಿ ನೋಡಿದಾ ಇದು ಸಿಬಿಐ ತನಿಖಾ ಸಂಸ್ಥೆ ಎಂದು ತೋರಿಸುತ್ತದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಇರುವ ಸಮಯದಲ್ಲಿ ಈ ಕರೆ ಬಂದಿದ್ದು, ಮನೆ ಮಂದಿಯನ್ನು ಮೋಸ ಮಾಡಲು ಪ್ರಯತ್ನ ಪಟ್ಟಿದ್ದಾರೆ.
ಇಂತಹ ಕರೆಗಳು ಬಂದರೆ ಪೋಷಕರು ಅಥವಾ ಯಾರೇ ಆದರೂ ಆತಂಕ ಗೊಳ್ಳುವ ಅವಶ್ಯಕತೆ ಇಲ್ಲ. ಪೊಲೀಸರು ಈ ರೀತಿ ಕರೆ ಮಾಡುವುದಿಲ್ಲ. ಇವರೆಲ್ಲ ವಿದೇಶದಿಂದ ಕರೆ ಮಾಡುತ್ತಾರೆ. ವಿದೇಶದಿಂದ ಬರುವ ಅಪರಿಚಿತ ಕರೆಗಳನ್ನು ಸ್ವೀಕರಿಸಬಾರದು. ಇಂತಹ ಕರೆಗಳು ಬಂದರೆ ಕೂಡಲೇ ಹತ್ತಿರದ ಸೆನ್ ಠಾಣೆಗೆ ಅಥವಾ ಮೊಬೈಲ್‌ನಲ್ಲಿ ನೇರವಾಗಿ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
Renukaswamy: ಪವಿತ್ರಾ ಗೌಡಗೆ ತನ್ನ ಗುಪ್ತಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ
j8v59u