Haryana: ಲೋಕಸಭಾ ಚುನಾವಣೆ ಬೆನ್ನಲ್ಲೇ ಬಿಯರ್ ಮತ್ತಿತರ ಮದ್ಯ ಬೆಲೆ ದುಬಾರಿ!
Haryana: ಲೋಕಸಭೆ ಚುನಾವಣೆ ಬೆನ್ನಲ್ಲೇ ಹರಿಯಾಣದಲ್ಲಿ ಹೊಸ ನೀತಿ ಜಾರಿಗೆ ತರಲಾಗಿದ್ದು, ಇದೀಗ ಹರಿಯಾಣದಲ್ಲಿ ಬುಧವಾರದಿಂದ ಹೊಸ ಮದ್ಯ ನೀತಿ ಜಾರಿಗೆ ಬಂದಿದೆ. ಹೌದು, ಹರಿಯಾಣ ರಾಜ್ಯದಲ್ಲಿ ಮದ್ಯದ ಬೆಲೆ ಹೆಚ್ಚಾಗಲಿದೆ. ಜೊತೆಗೆ ಬಿಯರ್ ಕೂಡ ದುಬಾರಿಯಾಗಿದೆ. ಹರಿಯಾಣದ (Haryana) ಹೊಸ ಅಬಕಾರಿ ನೀತಿಯಲ್ಲಿ, ಮೀಸಲು ಬೆಲೆಗೆ ಹೋಲಿಸಿದರೆ ಶೇಕಡಾ 7 ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.
ಪುತ್ತೂರು ಮೂಲದ ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
ಮುಖ್ಯವಾಗಿ ಹರಿಯಾಣದಲ್ಲಿ ಹಳ್ಳಿಗಾಡಿನ ಮದ್ಯದ ಬೆಲೆ 5 ರೂ.ಗಳಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಬಿಯರ್ ದರದಲ್ಲಿ 20 ರೂ. ಇಂಗ್ಲಿಷ್ ಮದ್ಯದ ಬಾಟಲಿಗಳ ಬೆಲೆಯೂ ಶೇಕಡಾ 5 ರಷ್ಟು ಹೆಚ್ಚಾಗಲಿದೆ.
ಅದಲ್ಲದೆ ಹೋಟೆಲ್ ಬಾರ್ ಪರವಾನಗಿ ಹೊಂದಿದ್ದರೆ, ನಿರ್ವಾಹಕರು ತಮ್ಮ ಹೋಟೆಲ್ ಸುತ್ತಮುತ್ತಲಿನ ಮೂರು ಅಂಗಡಿಗಳಿಂದ ಮದ್ಯವನ್ನು ಖರೀದಿಸಬಹುದು. ಆದರೆ, ಎಲ್ಲ ಮೂರು ಮದ್ಯದಂಗಡಿಗಳು ಪ್ರತ್ಯೇಕ ಪರವಾನಗಿದಾರರನ್ನು ಹೊಂದಿರಬೇಕು ಎಂಬ ಷರತ್ತು ಹಾಕಲಾಗಿದೆ.
ಸದ್ಯ ಹೊಸ ನೀತಿಯ ಪ್ರಕಾರ, ನಿಗದಿತ ಸಗಟು ದರದಲ್ಲಿ ಕೇವಲ 20 ಪ್ರತಿಶತದಷ್ಟು ಅಂದರೆ ಸಗಟು ದರದಲ್ಲಿ 20 ಪ್ರತಿಶತ ಲಾಭದೊಂದಿಗೆ ಮದ್ಯದ (liquor) ಒಪ್ಪಂದದ ಮೇಲೆ ಬಾಟಲಿಗಳನ್ನು ಮಾರಾಟ ಮಾಡಬಹುದು ಎಂದು ತಿಳಿಸಲಾಗಿದೆ.
ಬ್ಯಾಂಕ್ ಉದ್ಯೋಗಿಗಳಿಗೆ ಸಿಹಿ ಸುದ್ದಿ!ತುಟ್ಟಿಭತ್ಯೆ ಹೆಚ್ಚಳ ಘೋಷಣೆ!