H. D. Kumaraswamy: ಅಧಿಕಾರ ಸ್ವೀಕರಿಸುತ್ತಿದ್ದಂತೆ ಕುಮಾರಸ್ವಾಮಿಗೆ ಪಂಚ ಪ್ರಶ್ನೆ ಕೇಳಿದ ಕಾಂಗ್ರೆಸ್ !! ಏನದು ?

H. D. Kumaraswamy: ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆ ಆಗಿ ಇದೀಗ ಮೋದಿಯವರ(PM Modi) ಮೂರನೇ ಅವಧಿ ಆಡಳಿತದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಕುಮಾರಸ್ವಾಮಿ(H D Kumaraswamy) ಅವರಿಗೆ ಕಾಂಗ್ರೆಸ್ ನಿಂದ 5 ಪ್ರಶ್ನೆಗಳ ಎದುರಾಗಿವೆ.

 

ಹೌದು, ದೆಹಲಿಯಲ್ಲಿ ಕುಟುಂಬ ಸಮೇತವಾಗಿ ಪೂಜೆ-ಪುನಸ್ಕಾರಗಳೊಂದಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕುಮಾರಸ್ವಾಮಿ ಅವರು ತಕ್ಷಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯರಾಮನ್ ರಮೇಶ್(Jayaram Ramesh) ಅವರು ಕುಮಾರಸ್ವಾಮಿ ಅವರಿಗೆ ಪಂಚ ಪಂಚ್ ನೀಡಿದ್ದಾರೆ. ಅಂದರೆ 5 ಪ್ರಶ್ನೆಗಳನ್ನು ಕೇಳುವ ಮೂಲಕ ಇವುಗಳಿಗೆ ಉತ್ತರಿಸಿ ಎಂದಿದ್ದಾರೆ. ಹಾಗಿದ್ರೆ ಆ ಪ್ರಶ್ನೆಗಳೇನು?

Vijayalakshmi Darshan: ಇನ್‌ಸ್ಟಾಗ್ರಾಮ್‌ನಲ್ಲಿ ದರ್ಶನ್‌ ಅನ್‌ಫಾಲೋ ಮಾಡಿದ ವಿಜಯಲಕ್ಷ್ಮೀ

ಜಯರಾಂ ರಮೇಶ್ ಕೇಳಿದ ಪ್ರಶ್ನೆಗಳು:
1. ವಿಶಾಖಪಟ್ಟಣದ ಉಕ್ಕಿನ ಕಾರ್ಖಾನೆಯನ್ನು (ಆರ್‌ಐಎನ್‌ಎಲ್) ಪ್ರಧಾನಿಯವರ ಸ್ನೇಹಿತರಿಗೆ ಮಾರುವುದಿಲ್ಲ ಎಂದು ಕುಮಾರಸ್ವಾಮಿ ಅವರು ಲಿಖಿತ ಭರವಸೆ ನೀಡಬಲ್ಲರೇ?
2. ಸೇಲಂನ ಉಕ್ಕಿನ ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆಯನ್ನು ನೂತನ ಸಚಿವರು ಮುಂದುವರಿಸುತ್ತಾರೆಯೇ?
3. ಬಸ್ತಾರ್‌ನ ನಗರ್ನಾರ್ ಉಕ್ಕಿನ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಈ ಹಿಂದೆ ಮಾತು ಕೊಟ್ಟಿದ್ದರು. ಶಾ ಮಾತಿಗೆ ಕುಮಾರಸ್ವಾಮಿ ಬದ್ಧರಾಗಿರುತ್ತಾರೆಯೇ ಅಥವಾ ಪ್ರಧಾನಿಯವರ ಉದ್ಯಮ ಸ್ನೇಹಿತರಿಗೆ ಈ ಕಾರ್ಖಾನೆಯನ್ನು ಮಾರಾಟ ಮಾಡುತ್ತಾರೆಯೇ? .
4. ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಅದರ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳುವರೇ?
5. ದುರ್ಗಾಪುರದ ಉಕ್ಕಿನ ಕಾರ್ಖಾನೆಯನ್ನು ಮಾರಲು ಮೋದಿ ಸರ್ಕಾರ ಪ್ರಯತ್ನಿಸಿತ್ತು. ಈ ಕಾರ್ಖಾನೆಯ ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಹಾಗೂ ಪಶ್ಚಿಮ ಬಂಗಾಳದ ಜನರಿಗೆ ಸಚಿವರು ಭರವಸೆ ನೀಡಬಲ್ಲರೇ?

ಈ ಪ್ರಶ್ನೆಗಳನ್ನು ಕೇಳಿದ ಅವರು ಕುಮಾರಸ್ವಾಮಿ ಅವರು ತುಕ್ಕು ಹಿಡಿದಿರುವ ಉಕ್ಕಿನ ಖಾತೆಗೆ ಸಚಿವರಾಗಿದ್ದಾರೆ. ಅವರು ಪಂಚ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌ ಸೇರಿ ಎಲ್ಲಾ ಆರೋಪಿಗಳಿಗೆ ಬಿರಿಯಾನಿ ಊಟ

Leave A Reply

Your email address will not be published.