Shivrajkumar: ಯುವರಾಜ್‌ಕುಮಾರ್ ಡಿವೋರ್ಸ್ ಬಗ್ಗೆ ನಟ ಶಿವಣ್ಣ ಹೇಳಿದ್ದಿಷ್ಟು !!

Shivrajkumar: ದೊಡ್ಮನೆ ಕುಡಿ ಯುವರಾಜ್‌ಕುಮಾರ್(Youvrajkumar) ಅವರ ದಾಂಪತ್ಯದ ವಿಚ್ಛೇದನ ವಿಚಾರವಾಗಿ ಚಂದನವನ ಮಾತ್ರವಲ್ಲ ಇಡೀ ಕರುನಾಡೇ ಅಚ್ಚರಿ ವ್ಯಕ್ತಪಡಿಸಿದೆ. ಇದ್ದಕ್ಕಿದ್ದಂತೆ ನಡೆದ ಈ ಬೆಳವಣಿಗೆ ರಾಜ್ ಕುಟುಂಬದ ಅಭಿಮಾನಿಗಳಿಗೆ ಒಂದು ರೀತಿ ಅಘಾತವನ್ನೇ ಉಂಟುಮಾಡಿದೆ. ಇದೀಗ ಈ ಬೆಳವಣಿಗೆ ಬಗ್ಗೆ ನಟ ಹಾಗೂ ದೊಡ್ಮನೆಯ(Dodmane) ಹಿರಿ ಮಗ ಶಿವರಾಜ್ ಕುಮಾರ್(Shivrajkumar) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

 

Dakshina Kannada: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಕಾರ್ಯಕರ್ತರ ವಿರುದ್ಧವೇ ಎಫ್‌ಐಆರ್‌ ದಾಖಲು

ಯುವರಾಜ್ ಕುಮಾರ್ ಡಿವೋರ್ಸ್(Youvrakumar Divorce) ಬಗ್ಗೆ ಮಾತನಾಡಿದ ಶಿವಣ್ಣ ‘ಯುವ ಡಿವೋರ್ಸ್ ನೀಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಹಿತಿ ಇಲ್ಲದೇ ಮಾತನಾಡೋದು ಸರಿಯಲ್ಲ. ಈ ಬಗ್ಗೆ ನಾನು ಮೊಬೈಲ್‌ನಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಆ ರೀತಿ ಏನಾದರೂ ಆಗಿದ್ದರೆ ಮನಸ್ಸಿಗೆ ಬೇಜಾರಾಗುತ್ತದೆ. ಅಲ್ಲದೆ ಅದು ಅವರವರ ಲೈಫು. ಈಗ ಹೋದಮೇಲೆ ಗೊತ್ತಾಗುತ್ತದೆ, ಏನಾಗುತ್ತೋ ನೋಡೋಣ” ಎಂದು ಶಿವಣ್ಣ ಹೇಳಿದ್ದಾರೆ.

ಇನ್ನು ಇದೇ ವೇಳೆ ಗೀತಾ ಶಿವರಾಜ್‌ಕುಮಾರ್(Geeta Shivrajkumar) ಮಾತನಾಡಿ, ಯುವ ಡಿವೋರ್ಸ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ತಿಳಿದುಕೊಂಡು ಮಾತನಾಡುತ್ತೇವೆ. ಇದರ ಬಗ್ಗೆ ಚರ್ಚೆ ಮಾಡಬಾರದು ಎಂದು ನನಗೆ ಅನ್ನಿಸುತ್ತದೆ. ಇದು ನನ್ನ ಮನವಿ. ಅಲ್ಲಿ ಏನಾಗಿದೆ ಎಂಬುದು ನಮಗೂ ಗೊತ್ತಿಲ್ಲ ಎಂದಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಯುವ ರಾಜ್‌ಕುಮಾರ್
ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ನಡುವೆ ಮಧ್ಯೆ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ, ಹೊಂದಾಣಿಕೆ ಕೊರತೆ, ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಬಹುಶಃ ಅದೇ ಈ ಡಿವೋರ್ಸ್‌ಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ನಟ ಯುವ ರಾಜ್‌ಕುಮಾರ್ ಅವರು ಪತ್ನಿ ಶ್ರೀದೇವಿ ಅವರಿಂದ ವಿಚ್ಛೇದನ ಬೇಕು ಎಂದು ಜೂನ್ 6 ರಂದು ಬೆಂಗಳೂರಿನ ಕೌಟುಂಬಿಕ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಭಾರತೀಯ ವಿವಾಹ ಕಾಯ್ದೆ 13(1)ಅಡಿಯಲ್ಲಿ ಯುವ ಅವರು ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಯುವ ಪತ್ನಿ ಶ್ರೀದೇವಿ ಭೈರಪ್ಪಗೆ ನ್ಯಾಯಾಲಯದಿಂದ ನೋಟೀಸ್ ಜಾರಿ ನೀಡಲಾಗಿದೆ.

Delhi: ಮೋದಿ ಪ್ರಮಾಣವಚನ ವೇಳೆ ಹಿಂಬದಿಯಲ್ಲಿ ನಿಗೂಢ ಪ್ರಾಣಿಯ ಸಂಚಾರ – ವಿಡಿಯೋ ವೈರಲ್ !!

Leave A Reply

Your email address will not be published.